ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿ ಶಾಲಾ-ಕಾಲೇಜು, ಮದರಸಾ ಪುಸ್ತಕಗಳಲ್ಲೂ ಹನುಮಾನ್ ಚಾಲೀಸ್!

|
Google Oneindia Kannada News

ನವದೆಹಲಿ, ಫೆಬ್ರವರಿ.12: ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷವು ಗೆಲುವು ದಾಖಲಿಸಿದ್ದೇ ದಾಖಲಿಸಿದ್ದು. ನವದೆಹಲಿಯಲ್ಲಿ ಇತ್ತೀಚಿಗೆ ಹನುಮಾನ್ ಚಾಲೀಸ್ ಕುರಿತು ಸಖತ್ ಸುದ್ದಿ ಆಗುತ್ತಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಹೊಸ ಸವಾಲ್ ಎದುರಾಗಿದೆ.

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವಿಗೆ ಆಂಜನೇಯನ ಆಶೀರ್ವಾದವೇ ಕಾರಣ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಜನರಲ್ ಸಕ್ರೆಟರಿ ಕೈಲಾಶ್ ವಿಜಯ್ ವರ್ಗಿಯಾ ಟ್ವಿಟ್ಟರ್ ನಲ್ಲಿ ಹೊಸ ಸವಾಲು ಎಸೆದಿದ್ದಾರೆ.

ಅರವಿಂದನ ಕೈ ಹಿಡಿದ ಭಜರಂಗಿ, ಏನಿದು ಹನುಮಾನ್ ಚಾಲೀಸಾ ಮಹಿಮೆ!ಅರವಿಂದನ ಕೈ ಹಿಡಿದ ಭಜರಂಗಿ, ಏನಿದು ಹನುಮಾನ್ ಚಾಲೀಸಾ ಮಹಿಮೆ!

ಆಪ್ ದೆಹಲಿಯಲ್ಲಿ ಸರ್ಕಾರ ರಚಿಸುವುದು ಪಕ್ಕಾ ಆಗಿದೆ. ಇದು ಬಿಜೆಪಿಯ ಸೋಲಿನ ಬಗ್ಗೆ ಚರ್ಚಿಸುವ ಸಂದರ್ಭವಲ್ಲ. ಬದಲಿಗೆ ಆಪ್ ಗೆಲುವಿಗೆ ಕಾರಣವಾದ ಹನುಮಾನ್ ಚಾಲೀಸ್ ನ್ನು ದೆಹಲಿಯ ಶಾಲಾ-ಕಾಲೇಜು ಮತ್ತು ಮದರಸಾಗಳ ಪಠ್ಯದಲ್ಲಿ ಸೇರ್ಪಡೆಗೊಳಿಸಬೇಕು ಎಂದು ಸಿಎಂಗೆ ಸಲಹೆ ನೀಡಿದ್ದಾರೆ.

Hanuman Chalisa In Delhi School-Collage And Madrasas

ಹನುಮಾನ್ ಆಶೀರ್ವಾದದಿಂದಲೇ ನವದೆಹಲಿಯಲ್ಲಿ ಆಪ್ ಭರ್ಜರಿ ಗೆಲುವು ದಾಖಲಿಸಿ. ಅಧಿಕಾರಕ್ಕೆ ಬಂದಿದೆ. ಚುನಾವಣೆಗೂ ಮುನ್ನ ಹನುಮಾನ್ ಚಾಲೀಸ್ ಪಠಿಸಿದ ಸಿಎಂ ಕೇಜ್ರಿವಾಲ್ ಈಗ ಶಾಲಾ ಪಠ್ಯಯಲ್ಲಿ ಅದೇ ಹನುಮಾನ್ ಚಾಲೀಸ್ ನ್ನು ಸೇರ್ಪಡೆಗೊಳಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದಿದ್ದಾರೆ.

ಇನ್ನು, ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಪ್ರಕಟಿಸಿದೇ ಚುನಾವಣೆ ಎದುರಿಸಿದ ಬಿಜೆಪಿಯ ನಡೆ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರ ನೀಡಿದ ಬಿಜೆಪಿ ಜನರಲ್ ಸಕ್ರೆಟರಿ ಕೈಲಾಶ್ ವಿಜಯ್ ವರ್ಗಿಯಾ, ಈ ಹಿಂದೆ ತ್ರಿಪುರ ಮತ್ತು ಹರಿಯಾಣದಲ್ಲೂ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಮೊದಲೇ ಘೋಷಿಸದೇ ಚುನಾವಣೆಯನ್ನು ಎದುರಿಸಿ ಗೆಲುವು ದಾಖಲಿಸಿದ್ದೇವೆ ಎಂದು ಹೇಳಿದರು.

English summary
Hanuman Chalisa Include In Delhi School-Collage And Madrasas. BJP Leader Kailash Vijayavargiya Suggest To CM Arvind Kejriwal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X