ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರವಿಂದನ ಕೈ ಹಿಡಿದ ಭಜರಂಗಿ, ಏನಿದು ಹನುಮಾನ್ ಚಾಲೀಸಾ ಮಹಿಮೆ!

|
Google Oneindia Kannada News

ಆಮ್ ಆದ್ಮಿ ಪಕ್ಷ ಮತ್ತೊಮ್ಮೆ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದೆ. ಕಮ್ಯೂನಿಸ್ಟ್ ಗಳು ಅಥವಾ ಹಿಂದೂ ವಿರೋಧಿ ಪಕ್ಷದವರು ಅಧಿಕಾರಕ್ಕೆ ಬರದಿದ್ದರೆ ಸಾಕು ಎಂಬ ಅಘೋಷಿತ ಹಿಂದುಪರ ಮತದಾರರ ಸಂಕಲ್ಪ ಸಿದ್ಧಿಸಿದೆ. ಲೋಕಸಭೆ ಚುನಾವಣೆ ಬಂದರೆ ಅಪ್ಪಟ ಹಿಂದೂವಾದಿಗಳಂತೆ ಬಿಜೆಪಿಗೆ ಮತ ಹಾಕುವ ದೆಹಲಿ ಜನತೆ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆಪ್ ಕೈ ಹಿಡಿದಿದ್ದಾರೆ.

ವ್ಯವಸ್ಥೆ ವಿರುದ್ಧ ಹೋರಾಟ, ಭ್ರಷ್ಟಾಚಾರ ವಿರೋಧಿ ಆಂದೋಲನ, ಮೋದಿ ವಿರೋಧಿ ನಿಲುವು, ಅಣ್ಣಾ ಹಜಾರೆ ನೆರಳಿನಿಂದ ಹೊರ ಬಂದ ಆಡಳಿತಗಾರ ಅರವಿಂದ ಈ ಬಾರಿ ಮೃದು ಹಿಂದುತ್ವ, ಮೃದು ಧೋರಣೆ ಪ್ರಚಾರ ತಂತ್ರ ನಡೆಸಿ ಗೆದ್ದಿದ್ದಾರೆ. ಸಿಎಎ, ಎನ್ ಪಿಆರ್, ಎನ್ ಸಿಆರ್ ಬಗ್ಗೆ ತುಟಿ ಬಿಚ್ಚಲಿಲ್ಲ, ಭಯೋತ್ಪಾದಕ ಎಂದರೂ ಜಗ್ಗಲಿಲ್ಲ, ಹಿಂದು ವಿರೋಧಿ ಎಂಬ ಹಣೆಪಟ್ಟಿಯನ್ನು ತೆಗೆದು ಹಾಕಲು ಯಾವುದೇ ನಾಟಕ ಮಾಡದೆ ಸಹಜವಾಗಿ ನಾನು ಒಬ್ಬ ಹಿಂದು ಎಂಬ ಕೇಜ್ರಿವಾಲ್ ಬಹಿರಂಗವಾಗಿ ಹೇಳಿಕೊಂಡಿದ್ದು, ಮತದಾರರ ಮನಸ್ಸಿನಲ್ಲಿ ಅಚ್ಚೊತ್ತಿತ್ತು.

ದೆಹಲಿ ಚುನಾವಣೆ: ಅರವಿಂದ ಕೇಜ್ರಿವಾಲ್, ಬಿಜೆಪಿ ರಾಜಕೀಯದ ಸುತ್ತಾದೆಹಲಿ ಚುನಾವಣೆ: ಅರವಿಂದ ಕೇಜ್ರಿವಾಲ್, ಬಿಜೆಪಿ ರಾಜಕೀಯದ ಸುತ್ತಾ

ಎಪ್ಪತ್ತು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 62 ಕ್ಷೇತ್ರದಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಜಯಗಳಿಸಿದೆ. ಎಎಪಿ 62 ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದರೆ, ಬಿಜೆಪಿ 8 ಸ್ಥಾನಗಳಲ್ಲಿ ಗೆದ್ದಿದೆ. ಸತತ ಹದಿನೈದು ವರ್ಷ ದೆಹಲಿ ಆಳಿದ್ದ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. ಎಎಪಿಗೆ 53.60% ಮತ ಪಾಲು ಸಿಕ್ಕಿದ್ದರೆ, ಬಿಜೆಪಿ 38.50% ಮತ ಪಾಲು ದೊರೆತಿದೆ.

ಅರವಿಂದ್ ಕೈ ಹಿಂಡಿದ ಹಿಂದುತ್ವ ಟ್ರಂಪ್ ಕಾರ್ಡ್

ಅರವಿಂದ್ ಕೈ ಹಿಂಡಿದ ಹಿಂದುತ್ವ ಟ್ರಂಪ್ ಕಾರ್ಡ್

ಅಭಿವೃದ್ಧಿ ವಿಷಯಗಳು ಮಾತ್ರವಲ್ಲದೆ ಅರವಿಂದ ಕೇಜ್ರಿವಾಲ್ ಅವರು ಪ್ರದರ್ಶಿಸಿದ 'ಮೃದು ಹಿಂದುತ್ವ' ಸಹ ಚುನಾವಣೆಯಲ್ಲಿ ಅವರ ಕೈ ಹಿಡಿಯಿತು. ಹನುಮ ದೇವಾಲಯಕ್ಕೆ ಭೇಟಿ, ವೇದಿಕೆಯಲ್ಲಿ ಹನುಮಾನ್ ಚಾಲೀಸ ಪಠಣ, ರಾಮ ಮಂದಿರ ನಿರ್ಮಾಣಕ್ಕೆ ಪಾರ್ಶ್ವ ಬೆಂಬಲ, ಇವೆಲ್ಲವೂ, ಕೇಜ್ರಿವಾಲ್ ಅವರನ್ನು 'ಹಿಂದು ವಿರೋಧಿ' ಎಂದು ಬಿಂಬಿಸಲು ಯತ್ನಿಸಿದ ಬಿಜೆಪಿ ಯತ್ನಗಳನ್ನು ವಿಫಲಗೊಳಿಸಿತು. ಬಿಜೆಪಿ ತಂತ್ರಗಳ ಬಗ್ಗೆ ಅರಿವಿದ್ದ ಪ್ರಶಾಂತ್ ಕಿಶೋರ್, ಅರವಿಂದ್ ಸೇರಿದಂತೆ ಪ್ರಮುಖ ನಾಯಕರಿಗೆ ಹಿಂದು ವಿರೋಧಿ ಹೇಳಿಕೆ ನೀಡದಂತೆ ಟಿಪ್ಸ್ ಕೊಟ್ಟಿದ್ದರು. ಅದರಂತೆ, ನಡೆದುಕೊಂಡಿದ್ದರಿಂದ ಬಿಜೆಪಿ ಪರವಿದ್ದ ಮತಗಳನ್ನು ಸೆಳೆಯಲು ಸಾಧ್ಯವಾಯಿತು.

ಯಾರು ಬರೆದಿದ್ದು ಚಾಲೀಸಾ

ಯಾರು ಬರೆದಿದ್ದು ಚಾಲೀಸಾ

ಆಯೋಧ್ಯಾ ಶ್ರೀ ರಾಮಚ೦ದ್ರನ ಪರಮಭಕ್ತರಾದ, ಸಂತ ತುಳಸೀದಾಸರು ಹನುಮಾನ್ ಚಾಲೀಸಾ ಕೃತಿಯನ್ನು ರಚಿಸಿದರು. ಔರಂಗಜೇಬನು ತುಳಸೀದಾಸರನ್ನು ಸೆರೆಮನೆ ವಾಸಕ್ಕೆ ದೂಡಿದ್ದಾಗ ಚಾಲೀಸಾ ರಚಿಸಿದರು ಎಂಬ ಇತಿಹಾಸ ಹೇಳುತ್ತದೆ. ಹನುಮಾನ್ ಚಾಲೀಸಾದಲ್ಲಿ ನಲವತ್ತು ಪದ್ಯ ಚರಣಗಳಿರುವುದರಿಂದ "ಚಾಲೀಸಾ" ಎ೦ದಾಗಿದೆ. ಇದನ್ನು ಎಲ್ಲಾ ಸ್ತರದ ಎಲ್ಲಾ ಧರ್ಮ, ಪಂಥ, ಮತದ ಭಕ್ತರು ಪಠಿಸುತ್ತಾರೆ. ಇಲ್ಲವೇ ಪಠಣ ಮಾಡಿದಾಗ ಭಕ್ತಿಯಿಂದ ಆಲಿಸುತ್ತಾರೆ.

ದೆಹಲಿ ಚುನಾವಣೆ ಫಲಿತಾಂಶ ಬದಲಾಯಿಸುವುದೇ ರಾಜಕಾರಣದ ದಿಕ್ಕು?ದೆಹಲಿ ಚುನಾವಣೆ ಫಲಿತಾಂಶ ಬದಲಾಯಿಸುವುದೇ ರಾಜಕಾರಣದ ದಿಕ್ಕು?

ಶನಿ ದೋಷ ನಿವಾರಣೆ ಸಾಧ್ಯ ಎನ್ನಲಾಗಿದೆ

ಶನಿ ದೋಷ ನಿವಾರಣೆ ಸಾಧ್ಯ ಎನ್ನಲಾಗಿದೆ

ಹನುಮಾನ್ ಚಾಲೀಸಾದ ಪಠಣದಿಂದ ಶನೈಶ್ಚರನ ಸಾಡೇಸಾತಿಯ ದುಷ್ಪರಿಣಾಮಗಳನ್ನು ತಗ್ಗಿಸಬಹುದು. ನಿಮ್ಮ ಜಾತಕಗಳಲ್ಲಿ ಶನಿಯ ಸ್ಥಾನದ ಪ್ರಭಾವದ ಕಾರಣದಿ೦ದಾಗಿ ನಾನಾ ಕಷ್ಟಗಳು ಎದುರಾಗಿದ್ದರೆ, ಹನುಮಾನ್ ಚಾಲೀಸಾವನ್ನು ದಿನ ನಿತ್ಯ ಪಠಿಸಿದರೆ, ಶಾ೦ತಿ, ನೆಮ್ಮದಿ, ಮತ್ತು ಅಭಿವೃದ್ಧಿ ಹೊಂದಬಹುದು. ವಿಶೇಷವಾಗಿ ಶನಿವಾರ ದಿನಗಳಂದು ಮುಂಜಾನೆ ಹಾಗೂ ಮುಸ್ಸಂಜೆ ವೇಳೆ ಪಠಿಸುವುದು ಒಳ್ಳೆಯದು ಎಂದು ಜ್ಯೋತಿಷಿ ಶ್ರೀನಿವಾಸ್ ತಿಳಿಸಿದ್ದಾರೆ.

ಮತದಾನಕ್ಕೂ ಕೆಲ ದಿನಗಳ ಮುಂಚೆ

ಹನುಮಾನ್ ಚಾಲೀಸಾ ಪಠಣದಿಂದ ಶಾಂತಿ ಸಿಗುತ್ತದೆ. ಬೇರೆಯವರಂತೆ ನನಗೆ ಶ್ರುತಿ ಹಿಡಿದು ಚೆನ್ನಾಗಿ ಹಾಡಲು ಬರುವುದಿಲ್ಲ. ತಪ್ಪಾದರೆ ಕ್ಷಮಿಸಬೇಕು. ಎಂದು ನ್ಯೂಸ್ 18 ಹಿಂದಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದ ವೇಳೆ ಅರವಿಂದ್ ಕೇಜ್ರಿವಾಲ್ ಅವರು ಚಾಲೀಸಾದ ಕೆಲವು ಸಾಲುಗಳನ್ನು ಹಾಡಿದರು. ಮತ್ತೊಮ್ಮೆ ಪ್ರತ್ಯೇಕ ಕಾರ್ಯಕ್ರಮ ಮಾಡಿ, ಪೂರ್ತಿ ಚಾಲೀಸಾ ಪಠಣ ಮಾಡುತ್ತೇನೆ ಎಂದು ಕೇಜ್ರಿವಾಲ್ ಹೇಳುತ್ತಾರೆ.

ದೆಹಲಿ ಚುನಾವಣೆ; ಕೇಜ್ರಿವಾಲ್ ಗೆಲುವಿಗೆ ಪ್ರಮುಖ 10 ಕಾರಣಗಳುದೆಹಲಿ ಚುನಾವಣೆ; ಕೇಜ್ರಿವಾಲ್ ಗೆಲುವಿಗೆ ಪ್ರಮುಖ 10 ಕಾರಣಗಳು

ಹಿಂದು ಪರ ಸಂಘಟನೆಗಳ ಪ್ರತಿಕ್ರಿಯೆ

ಹಿಂದು ಪರ ಸಂಘಟನೆಗಳ ಪ್ರತಿಕ್ರಿಯೆ

ಚುನಾವಣೆ ಗೆದ್ದ ಬಳಿಕ ದೆಹಲಿ ಜನತೆ ಉದ್ದೇಶಿಸಿ, ಇಂದು ಮಂಗಳವಾರ ಹನುಮಾನ್ ಜೀ ಕೃಪೆ ನಮ್ಮ ಮೇಲಿರಲಿ ಎನ್ನುವ ಕೇಜ್ರಿವಾಲ್, ವಂದೇ ಮಾತರಂ, ಇನ್ಕಿಲಾಬ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾರೆ. ಕುಟುಂಬ ಸಮೇತ ಹನುಮಾನ್ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಇದೆಲ್ಲವೂ ಜನತೆ ಇಟ್ಟಿರುವ ನಂಬಿಕೆ ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಯತ್ನದಂತೆ ತೋರುತ್ತದೆ. ಆದರೆ, ಕೇಜ್ರಿವಾಲ್ ಹನುಮಾನ್ ಚಾಲೀಸಾ ಪಠಣ ಎಲ್ಲವೂ ಮತದಾರರನ್ನು ಸೆಳೆಯಲು ಮಾಡಿರುವ ತಂತ್ರ ಹಿಂದುತ್ವ ಬ್ರಿಗೇಡ್ ಮೂದಲಿಸಿದ್ದಲ್ಲದೆ, ಇನ್ಮುಂದೆ ಓವೈಸಿ ಕೂಡಾ ಹನುಮಾನ್ ಚಾಲೀಸಾ ಪಠಿಸಬಹುದು ಎಂದು ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ಆದರೆ, ಹಿಂದು ಪರ ಸಂಘಟನೆಗಳ ಪ್ರತಿಕ್ರಿಯೆ ಬಿಜೆಪಿಗೆ ಮುಳ್ಳಾಗಿ ಎಎಪಿಗೆ ವರವಾಗಿ ಪರಿಣಮಿಸಿತು. ಫಲಿತಾಂಶ ಈಗ ಎಲ್ಲರ ಕಣ್ಮುಂದಿದೆ.

ಬಿಡಿಸಲಾರದ ನಂಟು: ಫೆಬ್ರವರಿ 14 ಹಾಗೂ ಅರವಿಂದ್ ಕೇಜ್ರಿವಾಲ್ಬಿಡಿಸಲಾರದ ನಂಟು: ಫೆಬ್ರವರಿ 14 ಹಾಗೂ ಅರವಿಂದ್ ಕೇಜ್ರಿವಾಲ್

English summary
Delhi CM Arvind Kejriwal just before the election rendered Hanuman Chalisa which become the secret behind vote Share Success.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X