ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾ ನಂತರ ಚಿದು ಮೇಲೆ ಭಾರದ್ವಾಜ್ ಪ್ರಹಾರ

By Mahesh
|
Google Oneindia Kannada News

ನವದೆಹಲಿ, ಮಾ.27: ಸೋನಿಯಾ ಗಾಂಧಿ ಅವರು ಭ್ರಷ್ಟರ ಕಪಿಮುಷ್ಟಿಯಲ್ಲಿದ್ದಾರೆ ಎಂದಿದ್ದ ಕರ್ನಾಟಕದ ಮಾಜಿ ರಾಜ್ಯಪಾಲ, ನಿಷ್ಠಾವಂತ ಕಾಂಗ್ರೆಸ್ಸಿಗ ಹಂಸರಾಜ್ ಭಾರದ್ವಾಜ್ ಅವರು ಈಗ ಚಿದಂಬರಂ ಬಗ್ಗೆ ಕೂಡಾ ವಾಕ್ ಪ್ರಹಾರ ನಡೆಸಿದ್ದಾರೆ.

ಬಹು ಚರ್ಚಿತ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಸೆಕ್ಷನ್ 66ಎಯನ್ನು ಸೇರಿಸುವುದರ ಹಿಂದೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಕೈವಾಡವಿತ್ತು. ಇದು ಎ.ರಾಜಾ ಅವರ ಜೊತೆ ಕೂಡಿಕೊಂಡು ಮಾಡಿದ ಷಡ್ಯಂತ್ರ ಎಂದು ಭಾರದ್ವಾಜ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ನನ್ನನು ವಿನಾಕರಣ ಕೆಳಗಿಳಿಸಲಾಯಿತು: 2ಜಿ ಪ್ರಕರಣದಲ್ಲಿ ಸೋನಿಯಾ ಅವರು ಭ್ರಷ್ಟರ ಕಪಿಮುಷ್ಟಿಗೆ ಸಿಲುಕಿ ಅವರ ತಾಳಕ್ಕೆ ತಕ್ಕಂತೆ ಕುಣಿಯ ತೊಡಗಿದರು. ಹೀಗಾಗಿ ನಾನು ಕಾನೂನು ಸಚಿವ ಸ್ಥಾನದಿಂದ ಹೊರಗೆಸೆಯಲಾಗಿತ್ತು ಎಂದು ಮಾಜಿ ಕಾನೂನು ಸಚಿವ ಭಾರದ್ವಾಜ್ ಆರೋಪಿಸಿದ್ದಾರೆ.

Hansraj Bharadwaj accuses Chidambaram of propagating Section 66A

ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ: ಪ್ರಿಯಾಂಕ ಗಾಂಧಿಯನ್ನು ರಾಜಕೀಯ ಕ್ಷೇತ್ರಕ್ಕೆ ಬರದಂತೆ ತಡೆಯುವ ಉದ್ದೇಶದಿಂದ ರಾಬರ್ಟ್ ವಾದ್ರಾ ಭೂವ್ಯವಹಾರ ವಿವಾದವನ್ನು ಸೃಷ್ಟಿಸಲಾಗುತ್ತದೆ.ಪ್ರಿಯಾಂಕಾ ಅವರು ಸಕ್ರಿಯ ರಾಜಕಾರಣಕ್ಕೆ ಬರಬೇಕು ಎಂದರು.

ಹಗರಣಗಳಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗಿರುವುದರಿಂದಲೇ ಪಕ್ಷಕ್ಕೆ ಈ ರೀತಿಯ ಶೋಚನೀಯ ಸ್ಥಿತಿ ಒದಗಿ ಬಂತು ಎಂದು ಟೀಕಿಸಿದರು. ಕಳೆದ ಹಲವು ಚುನಾವಣೆ ಸೋಲಿಗೆ ರಾಹುಲ್ ಗಾಂಧಿ ಕಾರಣರಲ್ಲ, ಅದರೆ ಅವರು ಜವಾಬ್ದಾರಿ ವಹಿಸಿಕೊಳ್ಳುವುದನ್ನು ಕಲಿಯಬೇಕು ಎಂದು ಭಾರದ್ವಾಜ್ ಅಭಿಪ್ರಾಯಪಟ್ಟಿದ್ದಾರೆ.

English summary
Congress leader Hansraj Bharadwaj on Thursday blamed former home minister P Chidambaram of propagating the controversial Section 66A of the IT Act, refusing to believe the latter's argument of 'bad drafting'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X