'ಹಮ್ ಮೋದಿ ಕೋ ಮಾರೆಂಗೆ' ಎಂದ ಆರು ವರ್ಷದ ಮಗು
ನವದೆಹಲಿ, ಮೇ 16: ಕೋವಿಡ್ 19 ನಿಂದ ಚೇತರಿಸಿಕೊಂಡಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗುವಾಗ, ಅಲ್ಲಿದ್ದ ಮಗುವೊಂದು 'ಮೋದಿ ನಾವು ನಿಮ್ಮನ್ನು ಕೊಲ್ಲುತ್ತೇವೆ' (ಹಮ್ ಮೋದಿ ಕೋ ಮಾರೆಂಗೆ) ಎಂದು ಹೇಳಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಒಂದನ್ನು ಬಿಜೆಪಿ ಐಟಿ ಸೆಲ್ ನ ಮಖ್ಯಸ್ಥ ಅಮಿತ್ ಮಾಳವೀಯಾ ಶನಿವಾರ ಟ್ವೀಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೋವಿಡ್ನಿಂದ ಚೇತರಿಸಿಕೊಂಡು ಬಂದಿದ್ದವರೊಬ್ಬರನ್ನು ಆಸ್ಪತ್ರೆಯಲ್ಲಿ ಬಿಳ್ಕೊಡಲಾಗುತ್ತಿತ್ತು. ಈ ವೇಳೆ ಆರು ವರ್ಷದ ಮಗುವೊಂದು 'ಹಮ್ ಮೋದಿ ಕೋ ಮಾರೆಂಗೆ' ಎಂದಿರುವುದು ವಿಡಿಯೋದಲ್ಲಿ ಕೇಳುತ್ತದೆ.
ಈ ಘಟನೆ ಮಧ್ಯಪ್ರದೇಶದ ಇಂದೋರ್ ನ ಇಂಡೆಕ್ಸ್ ಮಡಿಕಲ್ ಕಾಲೇಜಿನಲ್ಲಿ ನಡೆದಿದ್ದು ಎಂದು ಮಾಳವೀಯಾ ಹೇಳಿದ್ದಾರೆ. ಮಗುವಿನ ಮನಸ್ಸಲ್ಲಿ ವಿಷ ತುಂಬಿದವರು ಯಾರು? ಎಂದು ಅವರು ಪ್ರಶ್ನಿಸಿದ್ದಾರೆ.
“हम मोदी को मारेंगे"
— Amit Malviya (@amitmalviya) May 15, 2020
ये बोल 6 साल के उस बच्चे के हैं जो अपने परिवार और रिश्तेदारों के साथ 13 मई को कोरोना से जंग जीतकर इंदौर के इंडेक्स मेडिकल कॉलेज के अस्पताल से घर वापस जा रहा था। सवाल यह है कि इस छोटे से मासूम बच्चे के जहन में आखिर ये जहर भरा किसने? pic.twitter.com/D8vlt1Ny35
ಈ ವಿಡಿಯೋ ಟ್ವಿಟ್ಟರ್ನಲ್ಲಿ ಸಕತ್ ವೈರಲ್ ಆಗಿದೆ. 1.8 ಸಾವಿರ ಜನರು ಕಾಮೆಂಟ್ ಮಾಡಿದ್ದಾರೆ. 6.4 ಸಾವಿರ ಜನ ವಿಡಿಯೋವನ್ನು ರಿಟ್ವೀಟ್ ಮಾಡಿದ್ದಾರೆ. 14 ಸಾವಿರ ಜನ ಲೈಕ್ ಮಾಡಿದ್ದಾರೆ.