ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್.05ರಿಂದ ಸಿಲಿಕಾನ್ ಸಿಟಿಯಲ್ಲಿ ಜಿಮ್ ಪುನಾರಂಭಕ್ಕೆ ಸಿದ್ಧತೆ

|
Google Oneindia Kannada News

ನವದೆಹಲಿ, ಜುಲೈ.30: ದೇಶಾದ್ಯಂತ ನೊವೆಲ್ ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ಜಿಮ್ ಮತ್ತು ಯೋಗ ಇನ್ಸ್ ಟ್ಯೂಟ್ ಗಳನ್ನು ತೆರೆಯುವುದಕ್ಕೆ ಕೇಂದ್ರ ಗೃಹ ಸಚಿವಾಲಯವು ಅಸ್ತು ಎಂದಿದೆ.

ಜುಲೈ.31ರಂದು ಅನ್ ಲಾಕ್ 2.0 ಅವಧಿ ಅಂತ್ಯಗೊಳ್ಳುವ ಹಿನ್ನೆಲೆ ಹೊಸ ಮಾರ್ಗಸೂಚಿಯನ್ನು ರಿಲೀಸ್ ಮಾಡಲಾಗಿದೆ. ಭಾರತದಾದ್ಯಂತ ಆಗಸ್ಟ್.01ರಿಂದ ಆಗಸ್ಟ್.30ರವರೆಗೂ ಅನ್ ಲಾಕ್ 3.0 ಮಾರ್ಗಸೂಚಿಗಳು ಜಾರಿಯಲ್ಲಿರುತ್ತವೆ.

ಅನ್ ಲಾಕ್-3.0 ಮಾರ್ಗಸೂಚಿ ಬಿಡುಗಡೆ: ಪ್ರಮುಖ ಅಂಶಗಳು ಇಲ್ಲಿವೆಅನ್ ಲಾಕ್-3.0 ಮಾರ್ಗಸೂಚಿ ಬಿಡುಗಡೆ: ಪ್ರಮುಖ ಅಂಶಗಳು ಇಲ್ಲಿವೆ

ಭಾರತದಲ್ಲಿ ಅನ್ ಲಾಕ್ 3.0 ಮಾರ್ಗಸೂಚಿ ಬಿಡುಗಡೆಗೊಳಿಸಿರುವ ಕೇಂದ್ರ ಗೃಹ ಸಚಿವಾಲಯವು ಕೆಲವು ನಿಯಮಗಳನ್ನು ಸಡಿಲಗೊಳಿಸಿದೆ. ಆಗಸ್ಟ್.05ರಿಂದ ಜಿಮ್ ಮತ್ತು ಯೋಗ ಇನ್ಸ್ ಟ್ಯೂಟ್ ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಬಹುದಿನಗಳಿಂದ ಜಿಮ್ ತೆರೆಯುವುದಕ್ಕೆ ಅನುಮತಿ ನೀಡುವಂತೆ ತರಬೇತುದಾರರು ಸರ್ಕಾರದ ಎದುರು ಬೇಡಿಕೆ ಇಡುತ್ತಿದ್ದರು. ಈ ಹಿನ್ನೆಲೆ ಕೇಂದ್ರ ಸರ್ಕಾರವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಜಿಮ್ ಗಳ ಪುನಾರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.

Gyms Reopening On August 5: Gyms In Bengaluru Are Carrying Out Sanitation Work

ಸಿಲಿಕಾನ್ ಸಿಟಿಯಲ್ಲಿ ಶುದ್ಧೀಕರಣ ಕಾರ್ಯ ಶುರು:

ಕೊರೊನಾವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಜಿಮ್ ಗಳನ್ನು ತೆರೆಯುುದಕ್ಕೆ ಕೇಂದ್ರ ಸರ್ಕಾರವು ಅನುಮತಿ ನೀಡಿದೆ. ಸಿಲಿಕಾನ್ ಸಿಟಿಯಲ್ಲಿ ಜಿಮ್ ಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೀಡಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಜಿಮ್ ಗಳಿಗೆ ಆಗಮಿಸುವ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ಯಾನಿಂಗ್ ಗೆ ಒಳಪಡಿಸಲಾಗುತ್ತದೆ. ಜೊತೆಗೆ ಪ್ರತಿಯೊಬ್ಬರೂ ಜಿಮ್ ಪ್ರವೇಶಕ್ಕೂ ಮೊದಲು ಸ್ಯಾನಿಟೈಸರ್ ನಿಂದ ಕೈಗಳನ್ನು ತೊಳೆದುಕೊಂಡು ಬರುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಜಿಮ್ ಮಾಲೀಕ ಪ್ರಸಾದ್ ಕುಮಾರ್ ಎಂಬುವವರು ತಿಳಿಸಿದ್ದಾರೆ.

English summary
Gyms Reopening On August 5: Gyms In Bengaluru Are Carrying Out Sanitation Work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X