• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೋಗ್ರಫಿ ಇಂದು ಪ್ರಾರಂಭ

|
Google Oneindia Kannada News

ನವದೆಹಲಿ. ಮೇ 14: ಜ್ಞಾನವಾಪಿ ಮಸೀದಿ ಸಂಕೀರ್ಣದ ಸ್ಥಗಿತಗೊಂಡ ವೀಡಿಯೊಗ್ರಫಿ ಸಮೀಕ್ಷೆಯು ಇಂದು (ಮೇ 14) ಪುನರಾರಂಭಗೊಳ್ಳಲಿದ್ದು, ಮಸೀದಿ ಆಡಳಿತ ಸಮಿತಿಯು ಸ್ಥಳೀಯ ನ್ಯಾಯಾಲಯವು ಈ ಕಾರ್ಯವನ್ನು ನಿಯೋಜಿಸಿದ ತಂಡದೊಂದಿಗೆ ಸದ್ಯಕ್ಕೆ ಸಹಕರಿಸುವುದಾಗಿ ತಿಳಿಸಿದೆ.

"ಸಂಬಂಧಿತ ಎಲ್ಲಾ ಪಕ್ಷಗಳೊಂದಿಗೆ ಶುಕ್ರವಾರ ಮಹತ್ವದ ಸಭೆ ನಡೆಸಲಾಗಿದ್ದು, ಆಯೋಗದ ಕೆಲಸ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಹಕರಿಸುವಂತೆ ಮನವಿ ಮಾಡಲಾಗಿದೆ" ಎಂದು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ. ಇಂದಿನಿಂದ ಸಮೀಕ್ಷೆ ಆರಂಭವಾಗಲಿದೆ. ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಯುತ್ತಿದ್ದೇವೆ. ಆದರೆ, ಅಲ್ಲಿಯವರೆಗೆ ಸಮೀಕ್ಷೆಗೆ ಆದೇಶಿಸಿರುವ ಜಿಲ್ಲಾ ನ್ಯಾಯಾಲಯದೊಂದಿಗೆ ಸಹಕರಿಸುವುದಾಗಿ ಮಸೀದಿ ಸಮಿತಿಯ ಸದಸ್ಯರೊಬ್ಬರು ಹೇಳಿದರು.

ಮಸೀದಿಯು ಐಕಾನಿಕ್ ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿದೆ ಮತ್ತು ಸ್ಥಳೀಯ ನ್ಯಾಯಾಲಯವು ಅದರ ಹೊರಗಿನ ಗೋಡೆಗಳ ಮೇಲೆ ಪ್ರತಿನಿತ್ಯದ ಪ್ರಾರ್ಥನೆಗೆ ಅನುಮತಿ ಕೋರಿ ಮಹಿಳೆಯರ ಗುಂಪಿನ ಮನವಿಯನ್ನು ಆಲಿಸುತ್ತಿದೆ. ಗುರುವಾರ ತಮ್ಮ ಆದೇಶದಲ್ಲಿ, ಜಿಲ್ಲಾ ಸಿವಿಲ್ ನ್ಯಾಯಾಲಯದ (ಹಿರಿಯ ವಿಭಾಗ) ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ಜ್ಞಾನವಾಪಿ-ಗೌರಿ ಶೃಂಗಾರ್ ಸಂಕೀರ್ಣದ ಸಮೀಕ್ಷೆಗೆ ವಕೀಲ ಅಜಯ್ ಕುಮಾರ್ ಮಿಶ್ರಾ ಅವರನ್ನು ನೇಮಿಸಿದ ಮಸೀದಿ ಸಮಿತಿಯ ಮನವಿಯನ್ನು ತಿರಸ್ಕರಿಸಿದರು.

ಕಮಿಷನರ್‌ಗೆ ಸಹಾಯ ಮಾಡಲು ಮತ್ತಿಬ್ಬರು ವಕೀಲರನ್ನು ನೇಮಕ ಮಾಡಿದ ನ್ಯಾಯಾಧೀಶರು ಮಂಗಳವಾರದೊಳಗೆ ಪೂರ್ಣಗೊಳಿಸಬೇಕು ಎಂದು ಹೇಳಿದರು. ಜಿಲ್ಲಾಧಿಕಾರಿಗಳು ಶುಕ್ರವಾರ ನಡೆಸಿದ ಸಭೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಪರ ವಕೀಲರು ಉಪಸ್ಥಿತರಿದ್ದರು. ಶುಕ್ರವಾರವೂ ಸರ್ವೋಚ್ಚ ನ್ಯಾಯಾಲಯವು ಸಮೀಕ್ಷೆಯ ಯಥಾಸ್ಥಿತಿಯ ಮಧ್ಯಂತರ ಆದೇಶವನ್ನು ನೀಡಲು ನಿರಾಕರಿಸಿತು. ಆದಾಗ್ಯೂ, ಸರ್ವೋಚ್ಚ ನ್ಯಾಯಾಲಯವು ಸಮೀಕ್ಷೆಯ ವಿರುದ್ಧ ಮುಸ್ಲಿಂ ಪಕ್ಷದ ಮನವಿಯನ್ನು ಪಟ್ಟಿ ಮಾಡಲು ಒಪ್ಪಿಕೊಂಡಿತು.

ಅಂಜುಮನ್ ಇಂತೇಜಾಮಿಯಾ ಮಸೀದಿ

ಅಂಜುಮನ್ ಇಂತೇಜಾಮಿಯಾ ಮಸೀದಿ

ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಸ್ಥಳೀಯ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್‌ಗೆ ತೆರಳುವ ಬಗ್ಗೆ ಯೋಚಿಸಲಾಗುವುದು ಎಂದು ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ಜಂಟಿ ಕಾರ್ಯದರ್ಶಿ ಸೈಯ್ಯದ್ ಮೊಹಮ್ಮದ್ ಯಾಸೀನ್ ಹೇಳಿದ್ದಾರೆ. ಮಸೀದಿ ಸಮಿತಿಯ ಆಕ್ಷೇಪದ ನಡುವೆ ಕಳೆದ ವಾರ ಸಮೀಕ್ಷೆ ಸ್ಥಗಿತಗೊಂಡಿತು, ಆವರಣದೊಳಗೆ ಚಿತ್ರೀಕರಿಸಲು ವಕೀಲ ಕಮಿಷನರ್ ಆದೇಶವಿಲ್ಲ ಎಂದು ಪ್ರತಿಪಾದಿಸಿದ್ದರು. ಸಮಿತಿಯು ಅವರನ್ನು ಪಕ್ಷಪಾತಿ ಎಂದು ಆರೋಪಿಸಿತು ಮತ್ತು ಅವರ ಬದಲಿಗಾಗಿ ಮನವಿ ಸಲ್ಲಿಸಿತು.

"ವಾರಣಾಸಿ ಆಸ್ತಿಗೆ ಸಂಬಂಧಿಸಿದಂತೆ ಸರ್ವೆಗೆ ನಿರ್ದೇಶನ ನೀಡಲಾಗಿದೆ. ಆದರೆ, ಇದು ಪೂಜಾ ಸ್ಥಳಗಳ ಕಾಯ್ದೆ ಅಡಿ ಬರುವ ವಿಚಾರ. ಆದರೆ, ಸರ್ವೆ ನಡೆಸುವಂತೆ ಕೋರ್ಟ್ ಕಮಿಷನರ್‌ಗೆ ನ್ಯಾಯಾಲಯ ಆದೇಶ ನೀಡಿದೆ. ಇದು ಕಾಯ್ದೆ ಉಲ್ಲಂಘನೆ ಆಗುತ್ತದೆ" ಎಂದು ವಕೀಲ ಹುಜೇಫಾ ಅಹ್ಮದಿ ವಾದಿಸಿದ್ದರು.

ಮಸೀದಿಯ ಹೊರಗೆ ಬಿಗಿ ಭದ್ರತೆಯ

ಮಸೀದಿಯ ಹೊರಗೆ ಬಿಗಿ ಭದ್ರತೆಯ

ಮಸೀದಿಯ ಹೊರಗೆ ಬಿಗಿ ಭದ್ರತೆಯ ನಡುವೆ ಜನರು ಶುಕ್ರವಾರದ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಗುರುವಾರ ತನ್ನ ಆದೇಶದಲ್ಲಿ, ಜಿಲ್ಲಾ ನ್ಯಾಯಾಲಯವು ಸಮೀಕ್ಷೆಗಾಗಿ ಸಂಕೀರ್ಣದ ಕೆಲವು ಪ್ರದೇಶಗಳನ್ನು ಪ್ರವೇಶಿಸಲು ಕೀಗಳು ಲಭ್ಯವಿಲ್ಲದಿದ್ದರೆ ಬೀಗಗಳನ್ನು ಮುರಿಯಬೇಕು ಎಂದು ಹೇಳಿದೆ. ಸಮೀಕ್ಷೆಗೆ ಅವಕಾಶ ನೀಡದಿದ್ದಲ್ಲಿ ಎಫ್‌ಐಆರ್‌ ದಾಖಲಿಸುವಂತೆ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದೆ.

ಕೋರಿಕೆಯನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್

ಕೋರಿಕೆಯನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್

ವಾರಣಾಸಿಯ ಜ್ಞಾನವಾಪಿ ಮಸೀದಿಯ ನಡೆಸಲಾಗುವ ಸರ್ವೆಗೆ ತಡೆ ನೀಡಬೇಕೆಂಬ ಕೋರಿಕೆಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತ್ತು. ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿ ಕಾಂಪ್ಲೆಕ್ಸ್‌ನಲ್ಲಿ ನಡೆಸಬೇಕೆಂದಿರುವ ಸರ್ವೇಕ್ಷಣೆಗೆ ತಡೆ ನೀಡಬೇಕೆಂದು ಕೋರಿ ಅಂಜುಮನ್ ಇಂತೇಜಾಮಿಯಾ ಮಸ್ಜಿದ್ ಕಮಿಟಿ ಸಂಘಟನೆಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ವಾರಣಾಸಿ ಸಿವಿಲ್ ಕೋರ್ಟ್‌ನಲ್ಲಿ ವ್ಯಾಜ್ಯ ಇದ್ದು ಅಲ್ಲಿಯವರೆಗೆ ಯಥಾಸ್ಥಿತಿ ಪಾಲಿಸಿಕೊಂಡು ಹೋಗುವಂತೆ ಆದೇಶ ನೀಡಬೇಕು ಎಂದು ಹಿರಿಯ ವಕೀಲ ಹುಜೇಫಾ ಅಹ್ಮದಿ ಮನವಿ ಮಾಡಿದ್ದರು.

  Rajath Patidar ಹೊಡೆದ ಸಿಕ್ಸರ್‌ನಿಂದ ಆಗಬೇಕಿತ್ತು ದೊಡ್ಡ ಅನಾಹುತ | Oneindia Kannada
  ವಿಡಿಯೋ ಶೂಟ್ ಮಾಡಬೇಕು

  ವಿಡಿಯೋ ಶೂಟ್ ಮಾಡಬೇಕು

  ಮೇ 12ರಂದು ವಾರಣಾಸಿ ಸಿವಿಲ್ ಕೋರ್ಟ್ ನೀಡಿದ ಆದೇಶದಲ್ಲಿ, ಜ್ಞಾನವಾಪಿ ಮಸೀದಿಯಲ್ಲಿ ಪರಿಶೀಲನೆ ನಡೆಸಿ ವಿಡಿಯೋ ಶೂಟ್ ಮಾಡಬೇಕು. ಹಿಂದೂ ದೇವರ ವಿಗ್ರಹಗಳ ಅವಶೇಷವೇನಾದರೂ ಇದ್ದರೆ ಸಾಕ್ಷ್ಯಾಧಾರ ಸಂಗ್ರಹಿಸಬೇಕು ಎಂದು ನಿರ್ದೇಶನ ನೀಡಿತ್ತು. ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಶೃಂಗಾರ್ ಗೌರಿ ಮಂದಿರವೂ ಇದೆ. ಇಲ್ಲಿ ನಿತ್ಯವೂ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕು ಎಂದು ಐವರು ಮಹಿಳೆಯರು ಹಿಂದೆ ಸ್ಥಳೀಯ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

  English summary
  The stalled videography survey of the Gyanvapi Masjid complex is set to resume today.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X