ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಹುದ್ದೆ ಕಾಂಗ್ರೆಸ್ ಗೆ ಬೇಕಿಲ್ಲ: ಯೂಟರ್ನ್ ಹೊಡೆದ ಗುಲಾಂ

|
Google Oneindia Kannada News

ನವದೆಹಲಿ, ಮೇ 17: "ಕಾಂಗ್ರೆಸ್ ಗೆ ಪ್ರಧಾನಿ ಪಟ್ಟ ಬೇಕಂತಿಲ್ಲ" ಎನ್ನುವ ಮೂಲಕ ಅಚ್ಚರಿಯ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಇಂದು ಯೂಟರ್ನ್ ತೆಗೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

"ಕಾಂಗ್ರೆಸ್ ಗೆ ಪ್ರಧಾನಿ ಪಟ್ಟ ಬೇಕಿಲ್ಲ ಎಂಬ ಹೇಳಿಕೆ ಸತ್ಯವಲ್ಲ. ನಾವು ಈ ದೇಶದ ಅತ್ಯಂತ ದೊಡ್ಡ ಮತ್ತು ಹಳೆಯ ಪಕ್ಷವಾಗಿ ನಮಗೆ ಐದು ವರ್ಷಗಳ ಕಾಲ ಸರ್ಕಾರವನ್ನು ನಡೆಸುವ ಅವಕಾಶ ಸಿಕ್ಕರೆ ಖಂಡಿತ ಬೇಡ ಎನ್ನುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಪಟ್ಟ ಬೇಕಿಲ್ಲ ಎಂದು ಸೋಲೊಪ್ಪಿಕೊಂಡಿತೇ ಕಾಂಗ್ರೆಸ್? ಪ್ರಧಾನಿ ಪಟ್ಟ ಬೇಕಿಲ್ಲ ಎಂದು ಸೋಲೊಪ್ಪಿಕೊಂಡಿತೇ ಕಾಂಗ್ರೆಸ್?

"ನಾವು ಈಗಾಗಲೇ ನಮ್ಮ ನಿರ್ಧಾರವನ್ನು ಹೇಳಿದ್ದೇವೆ. ಪ್ರಧಾನಿ ನರೇಂದ್ರ ಮೊದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದು ನಮ್ಮ ಆದ್ಯ ಉದ್ದೇಶ. ಅದಕ್ಕೆ ನಾವು ಬದ್ಧರಾಗಿದ್ದೇವೆ. ಪ್ರಧಾನಿ ಹುದ್ದೆಯೂ ನಮಗೆ ಬೇಕೆಂದಿಲ್ಲ. ಈ ಬಗ್ಗೆ ನಾವು ನಂತರ ನಿರ್ಧರಿಸುತ್ತೇವೆ" ಎಂದು ಗುಲಾಂ ನಬಿ ಆಜಾದ್ ಗುರುವಾರ ಹೇಳಿಕೆ ನೀಡಿದ್ದರು.

Gulam Nabi Azad on PM Post remark takes u-turn

ಕಾಂಗ್ರೆಸ್ ಯಾವಾಗಲೂ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರನ್ನೇ ತನ್ನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತ ಬಂದಿದೆ. 2014 ರ ಲೋಕಸಭೆ ಚುನಾವಣೆಯಲ್ಲೂ ಹಾಗೇ ಬಿಂಬಿಸಿದೆ. ಆದರೆ ಇದೀಗ ಗುಲಾಂ ನಬಿ ಆಜಾದ್ ನೀಡಿದ್ದ ಹೇಳಿಕೆ ಕಾಂಗ್ರೆಸ್ ಅನ್ನು ಪೇಚಿಗೆ ಸಿಲುಕಿಸಿತ್ತು.

"ವಿಪಕ್ಷಗಳಿಗೆ ಧೈರ್ಯವಿದ್ದರೆ ತಮ್ಮ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಘೋಷಿಸಲಿ" ಎಂದು ಗೃಹಸಚಿವ ರಾಜನಾಥ್ ಸಿಂಗ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಗುಲಾಂ ನಬಿ ಆಜಾದ್ ಈ ಹೇಳಿಕೆ ನೀಡಿದ್ದರು.

English summary
Congress leader Ghulam Nabi Azad takes u turn on his 'Congress has no problem if it does not get PM Post' Comment. No he said, this is not true that Congress will not claim or Congress is not interested in Prime Minister post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X