ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜ್ಜನಂತೆ ವೇಷ ಧರಿಸಿ ಬಂದು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ವೃದ್ಧನಂತೆ ವೇಷ ಧರಿಸಿ ಬಂದಿದ್ದ 32 ವರ್ಷದ ವ್ಯಕ್ತಿಯೊಬ್ಬ ದೆಹಲಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಿಐಎಸ್‌ಎಫ್ ಸಿಬ್ಬಂದಿಗೆ ಕೈಗೆ ಸಿಕ್ಕಿಬಿದ್ದಿದ್ದಾನೆ. 80 ವರ್ಷ ದಾಟಿದ ವೃದ್ಧ ಪ್ರಯಾಣಿಕನ ಸೋಗಿನಲ್ಲಿ ನಕಲಿ ಪಾಸ್‌ಪೋರ್ಟ್ ಹೊಂದಿದ್ದ ಆತನ ನಿಜರೂಪವನ್ನು ಸಿನಿಮೀಯ ರೀತಿಯಲ್ಲಿ ಪತ್ತೆಹಚ್ಚಲಾಗಿದೆ.

ಗುಜರಾತ್‌ನ ಅಹಮದಾಬಾದ್‌ನ ನಿವಾಸಿಯಾಗಿರುವ ಜಯೇಶ್ ಪಟೇಲ್ ಎಂಬಾತ ತನ್ನ ತಲೆಗೂದಲು ಮತ್ತು ಗಡ್ಡಕ್ಕೆ ಬಿಳಿ ಬಣ್ಣ ಬಳಿದುಕೊಂಡಿದ್ದ. ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ನ್ಯೂಯಾರ್ಕ್‌ಗೆ ತೆರಳು ಆತ ಗಾಲಿಕುರ್ಚಿಯಲ್ಲಿ ಬಂದಿದ್ದ.

ಖಾತೆಗೆ 15 ಲಕ್ಷ ಬರುತ್ತೆ ಎಂದು ಪೋಸ್ಟ್ ಆಫೀಸಿಗೆ ಓಡಿದ ಮುನ್ನಾರ್ ಮಂದಿಖಾತೆಗೆ 15 ಲಕ್ಷ ಬರುತ್ತೆ ಎಂದು ಪೋಸ್ಟ್ ಆಫೀಸಿಗೆ ಓಡಿದ ಮುನ್ನಾರ್ ಮಂದಿ

81 ವರ್ಷದ ಅಮ್ರಿಕ್ ಸಿಂಗ್ ಎಂಬ ಹೆಸರಿನ ನಕಲಿ ಪಾಸ್‌ಪೋರ್ಟ್‌ಅನ್ನು ಆತ ಹೊಂದಿದ್ದ. ಆತನ ನಡವಳಿಕೆ ಬಗ್ಗೆ ಸಿಐಎಸ್‌ಎಫ್ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಯಲ್ಲಿ ಅನುಮಾನ ಮೂಡಿತು. ತನ್ನ ಗಾಲಿಕುರ್ಚಿಯಿಂದ ಏಳಲು ತನಗೆ ಸಾಮರ್ಥ್ಯವಿಲ್ಲ ಎಂದ ಆತ ಅವರೊಂದಿಗೆ ಮುಖಕೊಟ್ಟು ಮಾತನಾಡಲು ಹಿಂದೇಟು ಹಾಕಿದ್ದ. ಹೀಗಾಗಿ ಆತನ ದಾಖಲೆಗಳನ್ನು ಹೆಚ್ಚು ವಿವರವಾಗಿ ಪರಿಶೀಲನೆ ನಡೆಸಿದಾಗ ಆತನ ನೈಜ ಗುರುತು ಪತ್ತೆಯಾಯಿತು.

Gujarat Passenger Impersonate 81 Years Old Fake Beard Delhi Airport

Recommended Video

ರಾಜ್ಯದ 15 ಕಡೆ ಸಣ್ಣ ವಿಮಾನ ನಿಲ್ದಾಣ | Oneindia Kannada

ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಜನರಿಗೆ ವಂಚಿಸುತ್ತಿದ್ದ ಮೈಸೂರಿನ ವ್ಯಕ್ತಿ ಬಂಧನಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಜನರಿಗೆ ವಂಚಿಸುತ್ತಿದ್ದ ಮೈಸೂರಿನ ವ್ಯಕ್ತಿ ಬಂಧನ

ಪಾಸ್‌ಪೋರ್ಟ್‌ನಲ್ಲಿ ಆತನ ವಯಸ್ಸು 81 ಎಂದು ಉಲ್ಲೇಖಿಸಿದ್ದರೂ ಆತನ ಚರ್ಮವನ್ನು ನೋಡಿದಾಗ ಕಡಿಮೆ ವಯಸ್ಸಿನವನು ಎಂಬ ಶಂಕೆ ಮೂಡಿಸಿತ್ತು. ಅಲ್ಲದೆ ಈ ವಯಸ್ಸಿನಲ್ಲಿಯೂ ಝೀರೋ ಪವರ್ ಕನ್ನಡಕ ಧರಿಸಿದ್ದ. ನಕಲಿ ಪಾಸ್‌ಪೋರ್ಟ್ ಮತ್ತು ವೇಷ ಧರಿಸಿದ ಆರೋಪದಲ್ಲಿ ಆತನನ್ನು ವಲಸೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಆತ ಈ ರೀತಿ ಅಕ್ರಮ ಕೃತ್ಯ ಎಸಗಲು ಕಾರಣ ಏನು ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗಿದೆ.

English summary
CISF personnel caught a 32 year old man for allegedly impersonating as 81 year old by using a fake passport in Delhi airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X