• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Just in: ಗುಜರಾತ್ ಕಳ್ಳಭಟ್ಟಿ ದುರಂತಕ್ಕೆ ರಾಹುಲ್ ಗಾಂಧಿ ಕಳವಳ

|
Google Oneindia Kannada News

ನವದೆಹಲಿ, ಜುಲೈ, 29: ಇತ್ತೀಚಿನ ಗುಜರಾತ್ ಕಳ್ಳಭಟ್ಟಿ ದುರಂತದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಜ್ಯದಲ್ಲಿ ಅಕ್ರಮ ಮದ್ಯ ಮತ್ತು ಮಾದಕ ವಸ್ತುಗಳ ವ್ಯವಹಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಈ ಪ್ರಕರಣದಲ್ಲಿ ಭಾಗಿಯಾಗಿರುವ "ಮಾಫಿಯಾ" ಗಳಿಗೆ ಆಡಳಿತ ಶಕ್ತಿಗಳು ರಕ್ಷಣೆ ನೀಡುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ಜುಲೈ 25 ರಂದು ವಿಷಕಾರಿ ಮದ್ಯ ಸೇವಿಸಿ ಗುಜರಾತ್‌ನ ಬೊಟಾಡ್ ಮತ್ತು ನೆರೆಯ ಅಹಮದಾಬಾದ್ ಜಿಲ್ಲೆಗಳ 42 ಜನರು ಸಾವನ್ನಪ್ಪಿದ್ದಾರೆ. ಜೊತೆಗ 97 ಮಂದಿ ಇನ್ನೂ ಭಾವನಗರ, ಬೊಟಾಡ್ ಮತ್ತು ಅಹಮದಾಬಾದ್‌ನ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎಂದು ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಹೇಳಿದ್ದಾರೆ.

'ಡ್ರೈ ಸ್ಟೇಟ್' ಗುಜರಾತ್‌ನಲ್ಲಿ ಅಕ್ರಮ ಮದ್ಯ ಸೇವನೆಯಿಂದಾಗಿ ಹಲವು ಮನೆಗಳು ನಾಶವಾಗಿವೆ. ಅಲ್ಲಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಕೂಡ ನಿರಂತರವಾಗಿ ವಶಪಡಿಸಿಕೊಳ್ಳಲಾಗುತ್ತಿದೆ' ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

"ಬಾಪು (ಮಹಾತ್ಮಾ ಗಾಂಧಿ) ಮತ್ತು ಸರ್ದಾರ್ (ವಲ್ಲಭಭಾಯಿ) ಪಟೇಲ್ ಅವರ ನಾಡಿನಲ್ಲಿ, ವಿವೇಚನೆಯಿಲ್ಲದೆ ಮದ್ಯದ ವ್ಯವಹಾರವನ್ನು ಮಾಡುತ್ತಿರುವ ಇವರು ಯಾರು?" ಎಂದು ಪ್ರಶನಿಸಿರುವ ಅವರು, ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ ಎಂದಿದ್ದಾರೆ.

ಜೊತೆಗೆ ಯಾವ ಆಡಳಿತ ಶಕ್ತಿಗಳು ಈ ಮಾಫಿಯಾಗಳಿಗೆ ರಕ್ಷಣೆ ನೀಡುತ್ತಿವೆ ಎಂದು ಪ್ರಶ್ನಿಸಿದ್ದಾರೆ.

Recommended Video

   ಆಸ್ತಿ ಮಾಲೀಕರು ಕಟ್ಟಡದ ಪ್ಲಿಂತ್ ಲೈನ್ (ಬಿಪಿಎಲ್) ಸರಿಪಡಿಸುವಾಗ ಹುಷಾರ್ !! | OneIndia Kannada

   ಈ ಪ್ರಕರಣದಲ್ಲಿ ಅಕ್ರಮ ಮದ್ಯ ತಯಾರಿಸಿದವರು ಮತ್ತು ಜನರಿಗೆ ಅದನ್ನು ಮದ್ಯವನ್ನು ಮಾರಾಟ ಮಾಡಿದವರು ಸೇರಿದಂತೆ 15 ಪ್ರಮುಖ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಗುಜರಾತ್ ಗೃಹ ಇಲಾಖೆ ಗುರುವಾರ ಬೊಟಾಡ್ ಮತ್ತು ಅಹಮದಾಬಾದ್ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಆರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

   English summary
   Gujarat Hooch Tragedy: Congress leader Rahul Gandhi expressed concern and asked who are giving protection to the "mafias". know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X