ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ ಉಲ್ಲಂಘಿಸಿ ಮದುವೆ ಮೆರವಣಿಗೆ ಮಾಡಿದ್ದಕ್ಕೆ 'ವರ' ಅರೆಸ್ಟ್

|
Google Oneindia Kannada News

ದೆಹಲಿ, ಮಾರ್ಚ್ 27: ಕೊರೊನಾ ವೈರಸ್‌ ಹರಡುವಿಕೆ ತಡೆಯಲು ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. 21 ದಿನಗಳ ವರೆಗೂ ಎಲ್ಲ ರಾಜ್ಯಗಳಲ್ಲಿಯೂ ಲಾಕ್‌ಡೌನ್‌ ಜಾರಿಯಲ್ಲಿದ್ದು, ಯಾರು ಮನೆಯಿಂದ ಹೊರಗೆ ಬರಬಾರದು ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ.

ಲಾಕ್‌ಡೌನ್‌ ನಡುವೆಯೂ ಮದುವೆ ಮಾಡಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ ವರನನ್ನೇ ಬಂಧಿಸಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಉಧಮ್ ಸಿಂಗ್ ನಗರ ಜಿಲ್ಲೆಯ ಖತಿಮಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಸ್ಲಿಂ ಸಮುದಾಯದವರು ಮದುವೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಸರಳವಾಗಿ ಕೆಲವರೇ ಸೇರಿ ಮದುವೆ ಮಾಡಿಕೊಂಡಿದ್ದರೇ ಬಹುಶಃ ಎಲ್ಲವೂ ಸರಿಹೋಗುತ್ತಿತ್ತು.

ಭಾರತದಲ್ಲಿ ಕೊರೊನಾ ರೋಗಿಗಳು-LIve tracker

ಆದರೆ, ಮದುವೆ ಕಾರ್ಯಕ್ರಮದ ವಿಶೇಷವಾಗಿ ಮೆರವಣಿಗೆ ಹಮ್ಮಿಕೊಂಡಿದ್ದು, ಹೆಚ್ಚು ಜನರು ಒಂದೆಡೆ ಸೇರಿದ್ದಾರೆ. ಈ ಮಾಹಿತಿ ಪೊಲೀಸರಿಗೆ ತಿಳಿದಿದೆ. ಖಚಿತ ಮಾಹಿತಿ ಹಿನ್ನೆಲೆ ದಿಢೀರ್ ದಾಳಿ ಮಾಡಿದ ಪೊಲೀಸರು ವರನನ್ನು ಸೇರಿ ಏಂಟು ಜನರನ್ನು ಬಂಧಿಸಿದ್ದಾರೆ.

Groom Arrested For Marriage Procession Amid Covid 19 Lockdown

'ಈ ಪ್ರದೇಶದಲ್ಲಿ ಒಟ್ಟು 8 ಜನರು ಹೋಮ್‌ ಕ್ವಾರೆಂಟೈನ್‌ನಲ್ಲಿದ್ದಾರೆ. ಬಹಳ ಸೂಕ್ಷ್ಮ ಪ್ರದೇಶವಾಗಿತ್ತು. ಆದರೂ ಅನುಮತಿ ಪಡೆಯದೆ ಮದುವೆ ಆಯೋಜಿಸಿದ್ದು, ಮೆರವಣಿಗೆ ಮಾಡಿದ್ದಾರೆ. ಒಟ್ಟು ಏಂಟು ಜನರನ್ನು ನಾವು ಬಂಧಿಸಿದ್ದೇವೆ. ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗುತ್ತೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

'ಐಪಿಸಿ ಸೆಕ್ಷನ್ 188 ಪ್ರಕಾರ ಕೇಸ್ ದಾಖಲಾಗಿದ್ದು, ಅದಕ್ಕೆ ತಕ್ಕಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

English summary
Groom Arrested in uttarakhand for marriage procession without prior approval amid coronavirus lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X