ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಕಾರ್ಮಿಕರಿಗೆ ಸರ್ಕಾರದ ಕೈಗೆಟುಕುವ ಬಾಡಿಗೆ ವಸತಿ ಯೋಜನೆ

|
Google Oneindia Kannada News

ನವದೆಹಲಿ, ಮೇ 14: ವಲಸೆ ಕಾರ್ಮಿಕರಿಗೆ ಕಡಿಮೆ ಬಾಡಿಗೆಯ ವಸತಿ ಯೋಜನೆಯನ್ನು ಸರ್ಕಾರ ಪ್ರಾರಂಭಿಸಲಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇಂದು (ಗುರುವಾರ) ಹೇಳಿದ್ದಾರೆ.

ನಗರಗಳಲ್ಲಿನ ಸರ್ಕಾರಿ ಅನುದಾನಿತ ಮನೆಗಳನ್ನು ಪಿಪಿಪಿ ಅಡಿಯಲ್ಲಿ ರಿಯಾಯಿತಿಯ ಮೂಲಕ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳಾಗಿ (Affordable Rental Housing Complexes) ಪರಿವರ್ತಿಸುವ ಮೂಲಕ ವಲಸೆ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಬಾಡಿಗೆ ವಸತಿಗೆ ನೀಡುವ ಯೋಜನೆಯನ್ನು ಹಣಕಾಸು ಸಚಿವೆ ತಿಳಿಸಿದರು.

ವಲಸಿಗರಿಗೆ ಎರಡು ತಿಂಗಳ ಕಾಲ ಉಚಿತ ಆಹಾರ ಧಾನ್ಯವಲಸಿಗರಿಗೆ ಎರಡು ತಿಂಗಳ ಕಾಲ ಉಚಿತ ಆಹಾರ ಧಾನ್ಯ

6 ಲಕ್ಷದಿಂದ 18 ಲಕ್ಷ ರೂಪಾಯಿಗಳ ವಾರ್ಷಿಕ ಆದಾಯ ಹೊಂದಿರುವ ಮಧ್ಯಮ ಆದಾಯದ ಗುಂಪಿಗೆ 2021 ರ ಮಾರ್ಚ್ ವರೆಗೆ ಈ ವಸತಿ ಯೋಜನೆಯನ್ನು ವಿಸ್ತರಿಸುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಇನ್ನೂ 2.5 ಲಕ್ಷ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆಯಲಿದೆಯಂತೆ.

 Govt To Launch Affordable Rental Housing Scheme For Migrant Workers

ಅದರೊಂದಿಗೆ ವಲಸೆ ಕಾರ್ಮಿಕರಿಗಾಗಿ ಕ್ರಮಗಳನ್ನು ಘೋಷಿಸುವಾಗ, 'ಒನ್ ನೇಷನ್, ಒನ್ ರೇಷನ್ ಕಾರ್ಡ್' ನಿಯಮದ ಬಗ್ಗೆ ಹಣಕಾಸು ಸಚಿವೆ ತಿಳಿಸಿದ್ದಾರೆ. ಮಾರ್ಚ್ 2021ರೊಳಗೆ 100 ಪ್ರತಿಶತದಷ್ಟು ಪಡಿತರ ಚೀಟಿದಾರರನ್ನು ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯಲ್ಲಿ ಒಳಗೊಳ್ಳುತ್ತಾರೆ ಎಂದು ಹೇಳಿದರು.

ಒಂದು ದೇಶ, ಒಂದು ರೇಷನ್ ಕಾರ್ಡ್ ಮಹತ್ವದ ಘೋಷಣೆಒಂದು ದೇಶ, ಒಂದು ರೇಷನ್ ಕಾರ್ಡ್ ಮಹತ್ವದ ಘೋಷಣೆ

ಅಲ್ಲದೆ, ವಲಸಿಗರಿಗೆ ಮುಂದಿನ ಎರಡು ತಿಂಗಳವರೆಗೆ ಉಚಿತ ಆಹಾರ ಧಾನ್ಯ ಪೂರೈಕೆ ಮಾಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

English summary
Finance Minister Nirmala Sitharaman on Thursday said that the Government will launch affordable rental housing scheme for migrant workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X