ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ವಿರೋಧಿ ಪ್ರಚಾರ: ಪಾಕ್ ಮೂಲದ ವೆಬ್‌ಸೈಟ್‌ಗಳ ಮೇಲೆ ನಿರ್ಬಂಧ

|
Google Oneindia Kannada News

ನವದೆಹಲಿ, ಜನವರಿ 22: ಭಾರತ ವಿರೋಧಿ ಪ್ರಚಾರ ಮಾಡಿದ ಪಾಕಿಸ್ತಾನ ಮೂಲದ ವೆಬ್‌ಸೈಟ್ ಹಾಗೂ ಯೂಟ್ಯೂಬ್ ಚಾನೆಲ್‌ಗಳ ಮೇಲೆ ಭಾರತ ನಿರ್ಬಂಧ ಹೇರಿದೆ.

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, 35 ಯೂಟ್ಯೂಬ್ ಚಾನೆಲ್‌ಗಳು, ಎರಡು ಟ್ವಿಟರ್​ ಖಾತೆಗಳು, ಎರಡು ಇನ್‌ಸ್ಟಾಗ್ರಾಂ ಹ್ಯಾಂಡಲ್‌, ಎರಡು ವೆಬ್‌ಸೈಟ್‌ಗಳು ಮತ್ತು ಒಂದು ಫೇಸ್‌ಬುಕ್ ಖಾತೆ ಸೇರಿವೆ. ಇವುಗಳ ಮೂಲಕ ಭಾರತ ವಿರೋಧಿ ಪ್ರಚಾರ ಮಾಡಲಾಗುತ್ತಿತ್ತು.

ಗುಪ್ತಚರ ಇಲಾಖೆಯಿಂದ ಖಚಿತ ಮಾಹಿತಿ ಪಡೆದುಕೊಂಡ ನಂತರ ಈ ಕ್ರಮಕೈಗೊಳ್ಳಲಾಗಿದೆ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಯೂಟ್ಯೂಬ್​ ಚಾನೆಲ್​​ 1.2 ಕೋಟಿ ಚಂದಾದಾರರನ್ನ ಹೊಂದಿದ್ದು, ಶೇರ್ ಮಾಡಲಾಗಿರುವ ವಿಡಿಯೋ 130 ಕೋಟಿಗೂ ಅಧಿಕ ವೀಕ್ಷಣೆಯಾಗಿವೆ. ಎಲ್ಲವೂ ಪಾಕಿಸ್ತಾನದಿಂದಲೇ ಕಾರ್ಯನಿರ್ವಹಿಸಿವೆ ಎಂದು ತಿಳಿದು ಬಂದಿದೆ.

Govt Orders Blocking of 35 Pak-based YouTube Channels, 2 Websites Over Anti-India Content, Fake News

ಪ್ರಮುಖವಾಗಿ ಕಳೆದ ಕೆಲ ವಾರಗಳ ಹಿಂದೆ ತಮಿಳುನಾಡಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ನಲ್ಲಿ ಹುತಾತ್ಮರಾದ ಬಿಪಿನ್ ರಾವತ್​​ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಬಿಂಬಿಸಿರುವ ವಿಡಿಯೋ ಕೂಡ ಇದರಲ್ಲಿ ಹರಿದಾಡಿದೆ. ಇದರ ಜೊತೆಗೆ ಭಾರತೀಯ ಸಶಸ್ತ್ರ ಪಡೆ, ಜಮ್ಮು-ಕಾಶ್ಮೀರ ವಿಚಾರ ಸೇರಿದಂತೆ ಅನೇಕ ಭಾರತ ವಿರೋಧಿ ವಿಷಯಗಳು ಯೂಟ್ಯೂಬ್​ನಲ್ಲಿ ಪ್ರಸಾರಗೊಂಡಿವೆ.

ಪಾಕ್‌ನ ಅನುದಾನಿತ ನಕಲಿ ಸುದ್ದಿ ಜಾಲಗಳ ವಿರುದ್ಧ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಸಮರ ಸಾರಿದೆ. ಪಾಕ್ ಮೂಲದ 35 ಯೂಟ್ಯೂಬ್​​ ಚಾನೆಲ್​ಗಳು, ಎರಡು ಟ್ವಿಟರ್, ಎರಡು ಇನ್​​ಸ್ಟಾಗ್ರಾಂ ಖಾತೆಗಳು ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ್​ ಸಹಾಯ್​, ಈ ಯೂಟ್ಯೂಬ್​ ಚಾನೆಲ್​ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಐಟಿ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ್ ಸಹಾಯ್ ಮಾತನಾಡಿ, ಈ ಯೂಟ್ಯೂಬ್ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಐಟಿ ನಿಯಮಗಳ ಪ್ರಕಾರ ಕ್ರಮ ವಹಿಸಲಾಗಿದೆ. ಈಗಾಗಲೇ ನಾವು 35 ಯೂಟ್ಯೂಬ್ ಚಾನೆಲ್‌ಗಳು, ಎರಡು ಟ್ವಿಟರ್ ಖಾತೆಗಳು, ಎರಡು ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗಳು, ಎರಡು ವೆಬ್‌ಸೈಟ್‌ಗಳು ಮತ್ತು ಒಂದು ಫೇಸ್‌ಬುಕ್ ಖಾತೆಯನ್ನು ನಿಷೇಧಿಸಿದ್ದೇವೆ. ಈ ಚಾನಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು "ಭಾರತ ವಿರೋಧಿ" ಪ್ರಚಾರವನ್ನು ಉತ್ತೇಜಿಸಲು ಬಳಕೆಯಾಗುತ್ತಿವೆ.

ನಕಲಿ ಮಾಹಿತಿ ನೀಡಿ ಸಾರ್ವಜನಿಕರನ್ನು ದಾರಿತಪ್ಪಿಸಲು ಈ ಮಾಧ್ಯಮಗಳನ್ನು ಬಳಸಲಾಗುತ್ತಿದೆ. ಗುಪ್ತಚರ ಸಂಸ್ಥೆಗಳಿಂದ ಮಾಹಿತಿಯನ್ನು ಸ್ವೀಕರಿಸಲಾಗಿದೆ ಮತ್ತು ಈ ನಿಟ್ಟಿನಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳೂ ಇಂತಹ ವಿಷಯವನ್ನು ಗಮನಿಸಬೇಕು ಎಂದು ಹೇಳಿದರು.

ಈ ಚಾನೆಲ್‌ಗಳು ಒಟ್ಟು 1.2 ಕೋಟಿ ಚಂದಾದಾರರನ್ನು ಮತ್ತು 130 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಕಂಡಿವೆ. ಸಹಜವಾಗಿ, ತಡೆಗಟ್ಟುವುದು ಬಹಳ ಕಷ್ಟಕರ. ಆದರೆ ಸಚಿವಾಲಯವು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದರು.

ಸಚಿವಾಲಯವು ನಿರ್ಬಂಧಿಸಿದ 35 ಖಾತೆಗಳು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿವೆ. "ಖಬರ್ ವಿತ್ ಫ್ಯಾಕ್ಟ್ಸ್", "ಗ್ಲೋಬಲ್ ಟ್ರುತ್", "ಇನ್ಫರ್ಮೇಶನ್ ಹಬ್", "ಅಪ್ನಿ ದುನ್ಯಾ ಟಿವಿ" ಮತ್ತು "ಬೋಲ್ ಮೀಡಿಯಾ ಟಿವಿ" ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲಾಗಿದೆ. ಎರಡು ವೆಬ್‌ಸೈಟ್‌ಗಳಾ "whiteproductions.com.pk" ಮತ್ತು "dnowmedia.com" ಅನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Recommended Video

ಶಾಸಕಿ ಪೂರ್ಣಿಮಾ ವಿರುದ್ಧ ಕಾಡುಗೊಲ್ಲರ ಆಕ್ರೋಶ | Oneindia Kannada

"ನಾವು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ ಪತ್ರ ಬರೆದಿದ್ದೇವೆ ಮತ್ತು ಅವರು 24 ಗಂಟೆಗಳ ಕಾಲಾವಕಾಶವನ್ನು ಕೋರಿದ್ದರು ಮತ್ತು ಇದೀಗ ಬಹುತೇಕ ಎಲ್ಲಾ ಖಾತೆಗಳನ್ನು ಈಗಾಗಲೇ ನಿರ್ಬಂಧಿಸಲಾಗಿದೆ" ಎಂದು ಅಪೂರ್ವ ಚಂದ್ರ ಅವರು ಹೇಳಿದ್ದಾರೆ.

English summary
The Ministry of Information and Broadcasting has ordered the blocking of 35 YouTube channels and two websites which were running anti-India propaganda and spreading fake news "in a coordinated manner".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X