• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾವು ಇಡೀ ದೇಶಕ್ಕೆ ಕೊರೊನಾ ಲಸಿಕೆ ಒದಗಿಸುತ್ತೇವೆ ಎಂದು ಹೇಳಿಲ್ಲ: ಆರೋಗ್ಯ ಸಚಿವಾಲಯ

|

ನವದೆಹಲಿ, ಡಿಸೆಂಬರ್ 1: ನಾವು ಇಡೀ ದೇಶದ ಜನತೆಗೆ ಕೊರೊನಾ ಲಸಿಕೆಯನ್ನು ನೀಡುತ್ತೇವೆ ಎಂದು ಎಂದಿಗೂ ಹೇಳಿಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಈವರೆಗೆ 9,462,809 ಮಂದಿಗೆ ಸೋಂಕು ತಗುಲಿದ್ದು, ಮತ್ತು 137,621 ಮಂದಿ ಸಾವನ್ನಪ್ಪಿದ್ದಾರೆ. ಈ ಕೊರೊನಾ ವೈರಸ್ ವಿರುದ್ಧ ಲಸಿಕೆ ನೀಡುವ ಬಗ್ಗೆ ನಾವು ಮಾತನಾಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಚೀನಾದಿಂದ ಕೊರೊನಾ ಲಸಿಕೆ ತರಿಸಿಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ?

ಇಡೀ ದೇಶಕ್ಕೆ ಲಸಿಕೆ ನೀಡುವ ಬಗ್ಗೆ ಎಂದಿಗೂ ಮಾತನಾಡಿಲ್ಲ, ವಾಸ್ತವಿಕ ಮಾಹಿತಿಯ ಆಧಾರದ ಮೇಲೆ ನಾವು ಇಂತಹ ವೈಜ್ಞಾನಿಕ ವಿಷಯಗಳನ್ನುಚರ್ಚಿಸುವುದು ಬಹಳ ಮುಖ್ಯ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

ನವೆಂಬರ್ 11 ಮತ್ತು ಡಿಸೆಂಬರ್ 1ರ ನಡುವೆ ಸಂಚಿತ ಸಕಾರಾತ್ಮಕ ದರವು ಶೇ.7.15ರಿಂದ ಶೇ.6.69ಕ್ಕೆ ಇಳಿದಿದೆ. ಚೇತರಿಕೆಯ ಸಂಖ್ಯೆ ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆಯನ್ನು ಮೀರಿದೆ.

ಆಸ್ಟ್ರಾಜೆನಿಕಾ-ಆಕ್ಸ್ಫರ್ಡ್ ಲಸಿಕೆಯನ್ನು ಪುಣೆ ಮೂಲದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಮಾರ್ಚ್-ಏಪ್ರಿಲ್ ವೇಳೆಗೆ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವಂತೆ ಮಾಡಲಿದೆ.

ಎಸ್ಐಐ ಕೋವಿಶೀಲ್ಡ್ ಉತ್ಪಾದನೆ ಮಾಡುವುದಕ್ಕಾಗಿ ಪಾಲುದಾರಿಕೆಯನ್ನು ಹೊಂದಿದ್ದು, 1,600 ಸ್ವಯಂ ಸೇವಕರಿಗೆ 2, 3ನೇ ಹಂತದ ಲಸಿಕೆ ಟ್ರಯಲ್ ನ್ನು ಸ್ಪಾನ್ಸರ್ ಮಾಡುತ್ತಿದೆ.

ಸೆರಮ್ ಇನ್ಸ್ಟಿಟ್ಯೂಟ್ ಗೆ ಪ್ರಧಾನಿ ಭೇಟಿ ನೀಡಿದ ಬಳಿಕ ಲಸಿಕೆಯನ್ನು ತುರ್ತು ಬಳಕೆಗೆ ಡ್ರಗ್ಸ್ ನಿಯಂತ್ರಕದಿಂದ ಅನುಮತಿ ಪಡೆಯುವುದಾಗಿ ಎಸ್ಐಐ ಸಿಇಒ ಆದಾರ್ ಪೂನಾವಾಲ ಘೋಷಿಸಿದ್ದರು.

ಜೂನ್-ಜುಲೈ 2021 ರ ವೇಳೆಗೆ 400 ಮಿಲಿಯನ್ ಡೋಸ್ ಗಳಷ್ಟು ಲಸಿಕೆ ತಯಾರಿಸುವುದಕ್ಕೆ ಗುರಿ ಹೊಂದಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಪ್ರತಿ ಡೋಸ್ ಲಸಿಕೆಗೆ 2-3 ಡಾಲರ್ ನಷ್ಟಾಗುತ್ತದೆ ಎಂದು ಎಸ್ಐಐ ಹೇಳಿದೆ.

English summary
The government said on Tuesday it has not talked about vaccinating the entire population of the country against the coronavirus disease (Covid-19), as India reported 9,462,809 infections and 137,621 related deaths so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X