ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ತಲೆಬಾಗುವ ನಡೆ ದೇಶಕ್ಕೆ ಸಮಸ್ಯೆ ತಂದೊಡ್ಡಬಹುದು: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ನವೆಂಬರ್ 06: ಕೇಂದ್ರ ಸರ್ಕಾರದ ತಲೆ ಬಾಗುವ ನಡೆ ದೇಶಕ್ಕೆ ಗಂಭೀರ ಸಮಸ್ಯೆಯನ್ನು ತಂದೊಡ್ಡಬಹುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿದ್ದು ಚೀನಾದವರು ಶಕ್ತಿ ಮತ್ತು ಸ್ಪಷ್ಟ ಯೋಜನೆಯ ಕ್ರಿಯೆಯನ್ನು ಇಷ್ಟಪಡುತ್ತಾರೆ. ಆದರೆ, ಭಾರತ ಸರ್ಕಾರದ ಎಲ್ಲರಿಗೂ ತಲೆಬಾಗುವ ವರ್ತನೆ ಅಪಾಯಕಾರಿಯಾಗಬಲ್ಲದು ಎಂದಿದ್ದಾರೆ.

ಪೂರ್ವ ಲಡಾಖ್‌ನಲ್ಲಿ ಪರಿಸ್ಥಿತಿ ಉದ್ವಿಗ್ನ: ಬಿಪಿನ್ ರಾವತ್ ಪೂರ್ವ ಲಡಾಖ್‌ನಲ್ಲಿ ಪರಿಸ್ಥಿತಿ ಉದ್ವಿಗ್ನ: ಬಿಪಿನ್ ರಾವತ್

ಇಂದು ಬೆಳಗ್ಗೆ ಬಿಪಿನ್ ರಾವತ್ ಅವರು, ಪೂರ್ವ ಲಡಾಖ್ ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆ ಉದ್ದಕ್ಕೂ ಭಾರತ - ಚೀನಾ ಸೇನೆ ನಡುವೆ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಹೇಳಿದ್ದರು. ಅಲ್ಲದೆ ಚೀನಾದೊಂದಿಗಿನ ಸಂಘರ್ಘ ದೊಡ್ಡ ಸ್ವರೂಪ ಪಡೆದುಕೊಳ್ಳಬಹುದು ಎಂದು ಎಚ್ಚರಿಸಿದ್ದರು.

Govt Kowtowing To Everyone May Become A Serious Problem

ಚೀನಾದೊಂದಿಗಿನ ಕಲಹ ಬಹುದೊಡ್ಡ ಸ್ವರೂಪ ಪಡೆದುಕೊಳ್ಳಬಹುದು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿಕೆಯ ವರದಿಯನ್ನು ಕೂಡ ಲಗತ್ತಿಸಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಅವರು, ದೇಶದಲ್ಲಿ ರಕ್ಷಣಾ ಅಧಿಕಾರಿಗಳ ಕೊರತೆ ಇದೆ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಕಾಳಜಿ ತೋರಿಸುತ್ತಿಲ್ಲ ಎಂದು ಆರೋಪಿಸಿದ್ದರು.

English summary
Former Congress President Rahul Gandhi On Friday accused the government of developing a tendency to bow before others which can be pose a serious problem for the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X