ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರ್ಗಾ ಪೂಜೆ ಅವಧಿಯಲ್ಲಿ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ಹೆಚ್ಚಿಸಿ: ಕೇಂದ್ರ

|
Google Oneindia Kannada News

ನವದೆಹಲಿ, ಅಕ್ಟೋಬರ್ 13: ದುರ್ಗಾ ಪೂಜೆ ಸಂದರ್ಭದಲ್ಲಿ ಪ್ರತಿ ದಿನ 55-1.6 ಮಿಲಿಯನ್ ಟನ್‌ಗಳಷ್ಟು ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸಿ ಮತ್ತು ಅಕ್ಟೋಬರ್ 20 ರ ನಂತರ ಅದನ್ನು 1.7 ಮಿಲಿಯನ್ ಟನ್ ಗೆ ಹೆಚ್ಚಿಸುವಂತೆ ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್(CIL)ಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಹಬ್ಬದ ಸೀಸನ್ ಈಗಾಗಲೇ ಆರಂಭವಾಗಿರುವ ಸಮಯದಲ್ಲಿ ದೇಶದ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಎದುರಿಸುತ್ತಿದ್ದು, ಹಲವು ರಾಜ್ಯಗಳಲ್ಲಿ ಅನಿಯಮಿತ ಲೋಡ್​ ಶೆಡ್ಡಿಂಗ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ಸೂಚನೆ ಮಹತ್ವ ಪಡೆದುಕೊಂಡಿದೆ.

ವಿದ್ಯುತ್ ವಲಯಕ್ಕೆ ಸಿಐಎಲ್ ನಿಂದ 1.615 ಮೆ.ಟನ್ ಕಲ್ಲಿದ್ದಲು ರವಾನೆ ಆಗಿದೆ. ದೇಶದಲ್ಲಿ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇಕಡಾ 69 ರಷ್ಟು ಕಲ್ಲಿದ್ದಲು ಆಧಾರಿತವಾಗಿದೆ. ಸಿಐಎಲ್ ಶೇ. 80 ರಷ್ಟು ಕಲ್ಲಿದ್ದಲನ್ನು ವಿದ್ಯುತ್ ವಲಯಕ್ಕೆ ಪೂರೈಸುತ್ತದೆ.

ವಿದ್ಯುತ್ ಸ್ಥಾವರಗಳು ಉತ್ಪಾದನೆಗೆ ಅಗತ್ಯವಿರುವ ಕಲ್ಲಿದ್ದಲಿನ ಪ್ರಮಾಣವನ್ನು ಪಡೆಯುತ್ತಿವೆ. ಆದರೆ ಅವುಗಳು ಕಲ್ಲಿದ್ದಲು ಸಂಗ್ರಹ ಮಾಡುತ್ತಿಲ್ಲ. ನವೆಂಬರ್ 1 ರಿಂದ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದ್ದಾರೆ.

Explained: ಭಾರತದಲ್ಲಿ ಕಲ್ಲಿದ್ದಲು ಬಿಕ್ಕಟ್ಟು ಸುತ್ತಲಿನ ಪ್ರಮುಖ ಬೆಳವಣಿಗೆಗಳು Explained: ಭಾರತದಲ್ಲಿ ಕಲ್ಲಿದ್ದಲು ಬಿಕ್ಕಟ್ಟು ಸುತ್ತಲಿನ ಪ್ರಮುಖ ಬೆಳವಣಿಗೆಗಳು

ದುರ್ಗಾ ಪೂಜೆಯ ಅವಧಿಯಲ್ಲಿ ಪ್ರತಿ ದಿನ 1.55-1.6 ಮಿಲಿಯನ್ ಟನ್‌ಗಳಷ್ಟು ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸಿ ಮತ್ತು ಅಕ್ಟೋಬರ್ 20 ರ ನಂತರ ಅದನ್ನು 1.7 ಮಿಲಿಯನ್ ಟನ್ ಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರ, ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್(CIL)ಗೆ ಸೂಚಿಸಿದೆ.

ದೆಹಲಿಯಲ್ಲಿ ಒಂದು ಸಭೆ ಇತ್ತು. ಈ ಸಭೆಯಲ್ಲಿ ಕೋಲ್ ಇಂಡಿಯಾಗೆ ಹಬ್ಬದ ಸಮಯದಲ್ಲಿ ವಿದ್ಯುತ್ ವಲಯಕ್ಕೆ ಪ್ರತಿದಿನ 1.55-1.6 ಮಿಲಿಯನ್ ಟನ್ ಕಲ್ಲಿದ್ದಲು ಪೂರೈಸುವಂತೆ ಸೂಚಿಸಲಾಯಿತು. ಅಕ್ಟೋಬರ್ 20 ರ ನಂತರ ದಿನಕ್ಕೆ 1.7 ಮೆಟ್ರಿಕ್ ಟನ್ ಪೂರೈಕೆ ಮಾಡಬೇಕಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

 ರಾಜ್ಯಗಳೇ ಕಾರಣ

ರಾಜ್ಯಗಳೇ ಕಾರಣ

ಈಗ ಉದ್ಭವಿಸಿರುವ ಕಲ್ಲಿದ್ದಲು ಕೊರತೆಗೆ ರಾಜ್ಯ ಸರ್ಕಾರಗಳೇ ಕಾರಣ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ನಾವು ಜೂನ್‌ನಲ್ಲೇ ರಾಜ್ಯಗಳಿಗೆ ಕಲ್ಲಿದ್ದಲು ಸಂಗ್ರಹ ಹೆಚ್ಚಿಸಿಕೊಳ್ಳುವಂತೆ ಹೇಳಿದ್ದೆವು. ಆದರೆ ಬಹಳಷ್ಟು ರಾಜ್ಯಗಳು ಈಗ ಬೇಡ ಎಂದು ಹೇಳಿ, ಕೇಂದ್ರ ಸರ್ಕಾರದ ಪ್ರಸ್ತಾವವನ್ನು ತಿರಸ್ಕರಿಸಿದ್ದವು, ಆಗಲೇ ಎಚ್ಚೆತ್ತುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದೆ.

 ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತಿಲ್ಲ

ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತಿಲ್ಲ

ಖಾಸಗಿ ವಿದ್ಯುತ್ ಉತ್ಪಾದನಾ ಕಂಪನಿಗಳು ಈಗಿನ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಕೆಲವು ಕಂಪನಿಗಳು ಹಾಗೂ ರಾಜ್ಯಗಳು ತಮ್ಮ ಗ್ರಾಹಕರಿಗೆ ವಿದ್ಯುತ್ ಒದಗಿಸುವುದನ್ನು ಬಿಟ್ಟು, ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಕರೆಂಟ್ ತೆಗೆಯುತ್ತಿವೆ. ಇದಕ್ಕೆ ಬದಲಾಗಿ ಹೆಚ್ಚಿನ ದರಕ್ಕೆ ಪವರ್ ಎಕ್ಸ್‌ಚೇಂಜ್‌ನಲ್ಲಿ ವಿದ್ಯುತ್ ಅನ್ನು ಮಾರಾಟ ಮಾಡಿಕೊಳ್ಳುತ್ತಿವೆ. ಈ ರೀತಿ ಮಾಡುತ್ತಿರುವ ರಾಜ್ಯಗಳಿಗೆ ನೀಡಲಾಗುತ್ತಿರುವ ವಿದ್ಯುತ್ ಅನ್ನು ವಾಪಸ್ ಪಡೆದು, ಬೇರೆ ರಾಜ್ಯಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಹೇಳಿದೆ.

 ಕಲ್ಲಿದ್ದಲು ದಾಸ್ತಾನಿಗೆ ರಾಜ್ಯಗಳ ನಿರಾಕರಣೆ ಸುಳ್ಳು

ಕಲ್ಲಿದ್ದಲು ದಾಸ್ತಾನಿಗೆ ರಾಜ್ಯಗಳ ನಿರಾಕರಣೆ ಸುಳ್ಳು

ಕಲ್ಲಿದ್ದಲು ಕೊರತೆಗೆ ರಾಜ್ಯಗಳೇ ಕಾರಣ ಎಂಬ ಕೇಂದ್ರ ಸರ್ಕಾರದ ಟೀಕೆಗೆ ರಾಜ್ಯಗಳು ತಿರುಗೇಟು ನೀಡಿವೆ. ಅಲ್ಲದೆ ಕಲ್ಲಿದ್ದಲು ದಾಸ್ತಾನು ಇದೆ ಎಂಬ ಕೇಂದ್ರದ ವಾದವನ್ನೂ ತಳ್ಳಿ ಹಾಕಿವೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ. ಕಲ್ಲಿದ್ದಲು ಇದ್ದಿದ್ದರೆ , ವಿದ್ಯುತ್ ಉತ್ಪಾದನಾ ಘಟಕಗಳು ಏಕೆ ಕಾರ್ಯಾಚರಣೆ ನಿಲ್ಲಿಸುತ್ತಿದ್ದವು ಎಂದು ರಾಜಸ್ಥಾನ ಪ್ರಶ್ನಿಸಿದೆ.

 ಗುರಿ ತಲುಪಲು ಸಾಧ್ಯವಾಗಿಲ್ಲ

ಗುರಿ ತಲುಪಲು ಸಾಧ್ಯವಾಗಿಲ್ಲ

2024ರ ಆರ್ಥಿಕ ವರ್ಷದ ವೇಳೆಗೆ ಒಂದು ಬಿಲಿಯನ್ ಟನ್‌ ಅಷ್ಟು ಕಲ್ಲಿದ್ದಲು ಉತ್ಪಾದಿಸಬೇಕು ಎಂಬ ಕೋಲ್ ಇಂಡಿಯಾದ ಗುರಿ ತಲುಪಲು ಸಾಧ್ಯವಿಲ್ಲ. ಇದಕ್ಕೆ ಕೊರೊನಾ ಕಾರಣ. ಆದರೆ ಈಗ ಆರ್ಥಿಕತೆಯೂ ಚೇತರಿಸಿಕೊಳ್ಳುತ್ತಿದ್ದು, ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ. ಕೇವಲ ನಾಲ್ಕು ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ಮಾತ್ರ ಸ್ಥಾವರಗಳ ಬಳಿ ಇದೆ ಎಂಬ ವಿಚಾರದ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಕೋಲ್ ಇಂಡಿಯಾ ಪ್ರತಿ ದಿನ 1.95 ಮಿಲಿಯನ್ ಟನ್‌ ಅಷ್ಟು ಕಲ್ಲಿದ್ದಲು ಪೂರೈಕೆ ಮಾಡುತ್ತಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

English summary
The government has asked state-owned Coal India Ltd (CIL) to augment the coal supply to power producers to 1.55-1.6 million tonnes (MT) per day around the Durga Puja period, and to further scale it to 1.7 MT per day after October 20, according to a source.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X