ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳನ್ನು ಅಸಭ್ಯವಾಗಿ ತೋರಿಸುವ ಚಾನೆಲ್ ಗಳಿಗೆ ಸರ್ಕಾರದಿಂದ ಗುದ್ದು

|
Google Oneindia Kannada News

ನವದೆಹಲಿ, ಜೂನ್ 19: ಮಕ್ಕಳನ್ನು ಕೆಟ್ಟದಾಗಿ, ಅಸಭ್ಯವಾಗಿ ತೋರಿಸುವ ಚಾನೆಲ್ ಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎಚ್ಚರಿಕೆ ನೀಡಿದೆ.

ಡಾನ್ಸ್ ರಿಯಾಲಿಟಿ ಶೋಗಳ ಹೆಸರಿನಲ್ಲಿ ಮಕ್ಕಳನ್ನು ಅಸಭ್ಯ, ಪ್ರಚೋದನಾಕಾರಿಯಾಗಿ ಬಿಂಬಿಸುವ ಎಲ್ಲಾ ಖಾಸಗಿ ಚಾನೆಲ್ ಗಳಿಗೂ ಸಚಿವಾಲಯ ಎಚ್ಚರಿಕೆ ನೀಡಿದೆ.

 'ನಮೋ ಟಿವಿ' ಹಿಂದಿ ಸುದ್ದಿ ವಾಹಿನಿ ಅಲ್ಲ: ಟಾಟಾ ಸ್ಕೈ ಸ್ಪಷ್ಟನೆ 'ನಮೋ ಟಿವಿ' ಹಿಂದಿ ಸುದ್ದಿ ವಾಹಿನಿ ಅಲ್ಲ: ಟಾಟಾ ಸ್ಕೈ ಸ್ಪಷ್ಟನೆ

ಡಾನ್ಸ್ ರಿಯಾಲಿಟಿ ಶೋ ಗಳಲ್ಲಿ ವಯಸ್ಕರು ಅಭಿನಯಿಸಿದ, ನೃತ್ಯ ಪ್ರದರ್ಶನ ನೀಡಿದ ಹಾಡುಗಳಿಗೆ ಚಿಕ್ಕ ಮಕ್ಕಳು ಅಭಿನಯಿಸುತ್ತಾರೆ. ಅದರಿಂದ ಮಕ್ಕಳು ವಯೋಸಹಜವಲ್ಲದ ವರ್ತನೆಯಲ್ಲಿ ತೊಡಗಬೇಕಾಗುತ್ತದೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.

Government warns TV channels for showing kids in indecent way in reality show

ಪ್ರಚಾರಕ್ಕೆ ಮಕ್ಕಳ ಬಳಕೆ: ಎಂ.ಎನ್. ರೆಡ್ಡಿ ವಿರುದ್ಧ ಎಫ್‌ಐಆರ್ ಪ್ರಚಾರಕ್ಕೆ ಮಕ್ಕಳ ಬಳಕೆ: ಎಂ.ಎನ್. ರೆಡ್ಡಿ ವಿರುದ್ಧ ಎಫ್‌ಐಆರ್

ಚಾನೆಲ್ ಗಳು ತಮ್ಮ ಸ್ವಾರ್ಥಕ್ಕಾಗಿ ಮಕ್ಕಳನ್ನು ಹೀಗೆ ಅಸಭ್ಯ, ಸಮ್ಮತವಲ್ಲದ ರೀತಿಯಲ್ಲಿ ಚಿತ್ರಿಸುವುದು ಸರಿಯಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಖಡಕ್ ವಾರ್ನಿಂಗ್ ನೀಡಿದೆ.

1995 ರ ಕೇಬಲ್ ಟೆಲಿವಿಶನ್ ನೆಟ್ ವರ್ಕ್ ಕಾಯ್ದೆಯಲ್ಲಿ ಹೇಳಿರುವ ನಿಯಮಗಳಿಗೆ ಎಲ್ಲಾ ಖಾಸಗಿ ಚಾನೆಲ್ ಗಳೂ ಬದ್ಧರಾಗಿರಬೇಕು ಎಂದು ಅದು ಹೇಳಿದೆ. ಈ ನಿಯಮದ ಪ್ರಕಾರ ಮಕ್ಕಳನ್ನು ಅಸಭ್ಯವಾಗಿ ಚಿತ್ರಿಸುವ ಅಥವಾ ಅವರಿಗೆ ಮಾನಿಸಿಕ ಅಥವಾ ದೈಹಿಕವಾಗಿ ಹಿಂಸೆ ನೀದುವ ಯಾವುದೇ ರೀತಿಯ ಕಾರ್ಯಕ್ರಮವನ್ನು ಮಾಡುವಂತಿಲ್ಲ ಎಂದು ಅದು ಹೇಳಿದೆ.

English summary
The union Information and Broadcasting Ministry has asked all private satellite TV channels to avoid showing children in an indecent manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X