ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ಮುಖ್ಯಸ್ಥರ ಹುದ್ದೆ: ಮಹಿಳೆ ಸೇರಿದಂತೆ ಪಟ್ಟಿಯಲ್ಲಿ 11 ಹೆಸರು

|
Google Oneindia Kannada News

Recommended Video

11 ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಅಂತಿಮಗೊಳಿಸಿದ ಮೋದಿ..! | Oneindia Kannada

ನವದೆಹಲಿ, ಜನವರಿ 31: ತೀವ್ರ ವಿವಾದದಲ್ಲಿ ಸಿಲುಕಿರುವ ಸಿಬಿಐ ಮುಖ್ಯಸ್ಥರ ಹುದ್ದೆಗೆ ನರೇಂದ್ರ ಮೋದಿ ಅವರ ಸರ್ಕಾರ 11 ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಬುಧವಾರ ಅಂತಿಮಗೊಳಿಸಿದೆ.

ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಫೆ. 1ರಂದು ಸಭೆ ನಡೆಸಿ ಮುಖ್ಯಸ್ಥರನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ.

ಸಿಬಿಐ ನಿರ್ದೇಶಕರ ಆಯ್ಕೆ : ಮೋದಿ ನೇತೃತ್ವದ ಸಭೆಯಲ್ಲಿ ಯಾವುದೇ ನಿರ್ಧಾರವಿಲ್ಲ ಸಿಬಿಐ ನಿರ್ದೇಶಕರ ಆಯ್ಕೆ : ಮೋದಿ ನೇತೃತ್ವದ ಸಭೆಯಲ್ಲಿ ಯಾವುದೇ ನಿರ್ಧಾರವಿಲ್ಲ

ಸಿಬಿಐ ನಿರ್ದೇಶಕರ ಜತೆಗಿನ ಜಗಳ ಮತ್ತು ಲಂಚ ಪಡೆದ ಆರೋಪದಡಿ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದ್ದ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರ ಹೆಸರೂ ಪಟ್ಟಿಯಲ್ಲಿದೆ.

government shortlisted 11 ips officers name for cbi post including lady rina mitra

1982-1985ರ ಅವಧಿಯ ಬ್ಯಾಚ್‌ಗಳ ಐಪಿಎಸ್ ಅಧಿಕಾರಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ.

ಪಶ್ಚಿಮ ಬಂಗಾಳ ಮೂಲದವರಾದ ಮಧ್ಯಪ್ರದೇಶ ಕೇಡರ್‌ನ 1983ರ ಬ್ಯಾಚ್ ಅಧಿಕಾರಿ ರೀನಾ ಮಿತ್ರಾ ಅವರ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗಿದೆ. ಒಂದು ವೇಳೆ ರೀನಾ ಅವರನ್ನು ಆಯ್ಕೆ ಮಾಡಿದರೆ, ಸಿಬಿಐನ ಮುಖ್ಯಸ್ಥರಾಗಲಿರುವ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾರೆ.

ಸಿಬಿಐ ವಿವಾದ: ವಿಚಾರಣೆಯಿಂದ ಹಿಂದೆ ಸರಿದ ಮತ್ತೊಬ್ಬ ನ್ಯಾಯಮೂರ್ತಿ ಸಿಬಿಐ ವಿವಾದ: ವಿಚಾರಣೆಯಿಂದ ಹಿಂದೆ ಸರಿದ ಮತ್ತೊಬ್ಬ ನ್ಯಾಯಮೂರ್ತಿ

ಕೇಂದ್ರ ಗೃಹ ಸಚಿವಾಲಯದಲ್ಲಿ ವಿಶೇಷ ಕಾರ್ಯದರ್ಶಿಯಾಗಿರುವ (ಆಂತರಿಕ ಭದ್ರತೆ) ಅವರು ಸಿಬಿಐನಲ್ಲಿ ಐದು ವರ್ಷ ಅನುಭವ ಹೊಂದಿದ್ದು, ಯಾವುದೇ ವಿವಾದ ಹೊಂದಿರದ ಕಳಂಕ ರಹಿತ ದಾಖಲೆ ಹೊಂದಿದ್ದಾರೆ.

ಸಿಬಿಐನಲ್ಲಿ ಕೆಲಸ ಮಾಡಿದ ಅನುಭವದ ಆಧಾರದಲ್ಲಿ 11 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಗೃಹಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಗೆ ಆಘಾತ, ಸಿಬಿಐಯಿಂದ ವರ್ಗಾವಣೆ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಗೆ ಆಘಾತ, ಸಿಬಿಐಯಿಂದ ವರ್ಗಾವಣೆ

ರಾಕೇಶ್ ಅಸ್ಥಾನಾ ಅವರು 1984ನೇ ಬ್ಯಾಚ್ ಅಧಿಕಾರಿಯಾಗಿದ್ದು, ಸಿಬಿಐನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ಅವರ ಹೆಸರು ಪಟ್ಟಿಯಲ್ಲಿದೆ. ಆದರೆ, ಅವರನ್ನು ಸರ್ಕಾರ ಆಯ್ಕೆ ಮಾಡುವುದು ಅನುಮಾನ. ಏಕೆಂದರೆ, ಈಗಾಗಲೇ ವಿವಾದದಿಂದಾಗಿ ಕಸಿವಿಸಿ ಅನುಭವಿಸಿರುವ ಸರ್ಕಾರ ಮತ್ತೆ ಮುಜುಗರಕ್ಕೆ ಸಿಲುಕಲು ಬಯಸಲಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Selection panel likely to decide the new chief of CBI on Feb 1, after the Narendra Modi government finalised the list of 11 IPS officers on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X