• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೇಪಾಳ, ಭೂತಾನ್ ಗಡಿ ಕಾವಲುಪಡೆಗೆ ಎಸ್‌ಎಸ್‌ಬಿ ಬೆಟಾಲಿಯನ್ ಬಲ

|
Google Oneindia Kannada News

ನವದೆಹಲಿ, ಮಾರ್ಚ್ 03: ನೇಪಾಳ ಹಾಗೂ ಭೂತಾನ್ ಗಡಿ ಕಾವಲು ಪಡೆಯ ಬಲ ವೃದ್ಧಿಸಲು 13 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನೊಳಗೊಂಡ 12 ಸಶಸ್ತ್ರ ಸೀಮಾ ಬಲದ ಬೆಟಾಲಿಯನ್ ನಿಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಭೂತಾನ್ ಹಾಗೂ ಟಿಬೆಟ್‌ಗೆ ಹೊಂದಿಕೊಂಡಿರುವ ಸಿಕ್ಕಿಂನ ತ್ರಿ-ಜಂಕ್ಷನ್ ಪ್ರದೇಶ ಸೇರಿದಂತೆ ನೇಪಾಳ, ಭೂತಾನ್ ಗಡಿ ಭಾಗಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಬಲಪಡಿಸಲು ಬೆಟಾಲಿಯನ್‌ಗಳು ನೆರವಾಗಲಿವೆ.

ಗಡಿ ಪಡೆಗೆ ಹೊಸ ಬೆಟಾಲಿಯನ್ ನಿಯೋಜನೆಗೆ ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿದೆಯಾದರೂ ಎಸ್‌ಎಸ್‌ಬಿಗೆ, 5-6 ಬೆಟಾಲಿಯನ್‌ ಕಾರ್ಯಾಚರಣೆಯೊಂದಿಗೆ ಮೂರು ಹೊಸ ವಲಯಗಳಲ್ಲಿ ಒಂದನ್ನು ರಚಿಸಲು ಅವಕಾಶ ಮಾಡಿಕೊಟ್ಟಿರುವುದಾಗಿ ತಿಳಿದುಬಂದಿದೆ.

ನಾರಾಯಣಿ ಸೇನಾ ಬೆಟಾಲಿಯನ್ ಸ್ಥಾಪನೆ: ಅಮಿತ್ ಶಾ ಭರವಸೆನಾರಾಯಣಿ ಸೇನಾ ಬೆಟಾಲಿಯನ್ ಸ್ಥಾಪನೆ: ಅಮಿತ್ ಶಾ ಭರವಸೆ

"ಸರ್ಕಾರ ಬೆಟಾಲಿಯನ್‌ಗಳ ನಿಯೋಜನೆಗೆ ಅನುಮತಿ ನೀಡಿದೆ. ಇದರಿಂದ ಗಡಿ ಭದ್ರತೆಯನ್ನು ಇನ್ನಷ್ಟು ಬಲಗೊಳಿಸಲಾಗುವುದು. ಮುಂದಿನ ನಾಲ್ಕು ವರ್ಷಗಳಲ್ಲಿ 12 ಹೊಸ ಬೆಟಾಲಿಯನ್ ಗಳನ್ನು ಹಂತ ಹಂತವಾಗಿ ಮೂರು ಘಟಕಗಳನ್ನಾಗಿ ಹೆಚ್ಚಿಸಲಾಗುವುದು" ಎಂದು ಎಸ್‌ಎಸ್‌ಬಿ ಮಹಾನಿರ್ದೇಶಕ ಡಿಜಿ ಕುಮಾರ್ ರಾಜೇಂದ್ರ ಚಂದ್ರ ಮಾಹಿತಿ ನೀಡಿದ್ದಾರೆ.

English summary
Government has sanctioned 12 Sashastra Seema Bal battalions which consists of 13 thousand personnel for nepal bhutan borders guarding force
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X