ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Just in: 500 ಮದ್ಯದಂಗಡಿ ತೆರೆಯಲಿರುವ ದೆಹಲಿ ಸರ್ಕಾರ

|
Google Oneindia Kannada News

ನವದೆಹಲಿ, ಆ.05: ಹಳೆಯ ಅಬಕಾರಿ ನೀತಿಗೆ ಹಿಂತಿರುಗಿದ ನಂತರ, ದೆಹಲಿ ಸರ್ಕಾರವು ಸೆಪ್ಟೆಂಬರ್ 1 ರಿಂದ 500 ಮದ್ಯ ಮಾರಾಟ ಮಳಿಗೆಗಳನ್ನು ನಿರ್ವಹಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಸರ್ಕಾರದ ಉಪಸಮಿತಿಯು ನಾಲ್ಕು ಉದ್ಯಮಗಳಾದ ದೆಹಲಿ ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ನಿಗಮ (DTTDC), ದೆಹಲಿ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ (DSIIDC), ದೆಹಲಿ ಗ್ರಾಹಕರ ಸಹಕಾರಿ ಸಗಟು ಮಳಿಗೆಗಳು ( DCCWS) ಮತ್ತು ದೆಹಲಿ ರಾಜ್ಯ ನಾಗರಿಕ ಸರಬರಾಜು ನಿಗಮ (DSCSC) ಈ ತಿಂಗಳ ಅಂತ್ಯದ ವೇಳೆಗೆ ಈ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಿದೆ.

ಡಿಸೆಂಬರ್ 31ರೊಳಗೆ ಇನ್ನೂ 200 ಮದ್ಯದಂಗಡಿಗಳನ್ನು ತೆರೆಯಲಾಗುವುದು ಎಂದು ವರದಿ ತಿಳಿಸಿದೆ. ಒಟ್ಟು ಈ 700 ಮದ್ಯ ಮಳಿಗೆಗಳಲ್ಲಿ, ಪ್ರತಿಯೊಂದು ನಿಗಮಗಳು ಉನ್ನತ-ಮಟ್ಟದ ಬ್ರ್ಯಾಂಡ್‌ಗಳನ್ನು ಮಾರಾಟ ಮಾಡಲು ಐದು ಪ್ರೀಮಿಯಂ ಮಾರಾಟಗಳನ್ನು ನಡೆಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದು, ಈ ಐದು ಮಾರಾಟ ಮಳಿಗೆಗಳಲ್ಲಿ ಎರಡು ಈ ತಿಂಗಳ ಅಂತ್ಯದ ವೇಳೆಗೆ ಮತ್ತು ಉಳಿದವು ಡಿಸೆಂಬರ್ 31 ರೊಳಗೆ ತೆರೆಯುವ ಸಾಧ್ಯತೆಯಿದೆ.

Government of New Delhi To Open 500 Liquor Stores

ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ತನ್ನ ಮಳಿಗೆಗಳನ್ನು ವಲಯ 1ರಿಂದ 9ರಲ್ಲಿ, 10-18 ರಲ್ಲಿ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ, 19-24 ರಲ್ಲಿ ಗ್ರಾಹಕರ ಸಹಕಾರಿ ಸಗಟು ಮಳಿಗೆಗಳು ಮತ್ತು ರಾಜ್ಯ ನಾಗರಿಕ ಸರಬರಾಜು ನಿಗಮ 25-30 ವಲಯಗಳಲ್ಲಿ ಮಳಿಗೆಗಳನ್ನು ನಡೆಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದಲ್ಲದೇ, ಹಲಿ ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ನಿಗಮವು ವಿಮಾನ ನಿಲ್ದಾಣ ವಲಯವನ್ನು ನಿರ್ವಹಿಸುತ್ತದೆ ಮತ್ತು ಡಿಎಸ್‌ಐಐಡಿಸಿ ದೆಹಲಿ ಕಂಟೋನ್ಮೆಂಟ್ ಮತ್ತು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಅಡಿಯಲ್ಲಿ ಪ್ರದೇಶಗಳನ್ನು ನಿರ್ವಹಿಸುತ್ತದೆ ಎಂದು ವರದಿ ಹೇಳಿದೆ.

ಆಗಸ್ಟ್ 31 ರಂದು ಕೊನೆಗೊಳ್ಳುವ ಪ್ರಸ್ತುತ ಅಬಕಾರಿ ನೀತಿಯಲ್ಲಿ, ಚಿಲ್ಲರೆ ಪರವಾನಗಿಗಳನ್ನು ಖಾಸಗಿ ಸಂಸ್ಥೆಗಳ 32 ವಲಯಗಳು ಮತ್ತು 849 ಮಾರಾಟಗಾರರಿಗೆ ನೀಡಲಾಗಿತ್ತು. ನವೆಂಬರ್ 17 ರಂದು ಅಬಕಾರಿ ನೀತಿ 2021-22 ಅನ್ನು ಜಾರಿಗೊಳಿಸಿದ ನಂತರ ಚಿಲ್ಲರೆ ಮದ್ಯದ ವ್ಯಾಪಾರವನ್ನು ತ್ಯಜಿಸಿದ ಸರ್ಕಾರವು ಸೆಪ್ಟೆಂಬರ್ 1 ರಿಂದ ಮತ್ತೆ ಮದ್ಯ ಮಾರಾಟಕ್ಕೆ ಮರಳಲಿದೆ.

Government of New Delhi To Open 500 Liquor Stores

ಅಬಕಾರಿ ನೀತಿಯನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ಪ್ರಧಾನ ಕಾರ್ಯದರ್ಶಿ (ಹಣಕಾಸು), ಪ್ರಧಾನ ಕಾರ್ಯದರ್ಶಿ (ಕಂದಾಯ), ಅಬಕಾರಿ ಆಯುಕ್ತರು ಮತ್ತು ಅಬಕಾರಿ ಆಡಳಿತದಲ್ಲಿ ಪರಿಣತಿ ಹೊಂದಿರುವ ಇನ್ನೊಬ್ಬ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ಸರ್ಕಾರ ರಚಿಸಿದೆ. ಸಮಿತಿಯು ಒಂದು ತಿಂಗಳೊಳಗೆ ವರದಿ ಸಲ್ಲಿಸಲಿದೆ.

English summary
Delhi Government To Open 500 Liquor Stores By September 1 After reverting to the old excise policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X