ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19: ಗೃಹಬಂಧನದಲ್ಲಿರುವವರಿಗೆ ಪಲ್ಸ್ ಆಕ್ಸಿಮೀಟರ್ ವ್ಯವಸ್ಥೆ

|
Google Oneindia Kannada News

ನವದೆಹಲಿ, ಜೂನ್ 22: ಕೊರೊನಾ ವೈರಸ್‌ನಿಂದಾಗಿ ದೆಹಲಿಯಲ್ಲಿ ಗೃಹಬಂಧನದಲ್ಲಿ ಎಲ್ಲಾ ರೋಗಿಗಳಿಗೂ ಪಲ್ಸ್ ಆಕ್ಸಿಮೀಟರ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

Recommended Video

ರಾಜಕೀಯ ಹೀರೋ ಆಗಿದ್ದ ಎಚ್.ವಿಶ್ವನಾಥ್ ಈಗ ದುರಂತ ನಾಯಕ | H Vishwanath | Oneindia Kannada

ಪಲ್ಸ್‌ ಆಕ್ಸಿಮೀಟರ್ ಯಂತ್ರವು ರಕ್ತದಲ್ಲಿರುವ ಆಕ್ಸಿಜನ್ ಲೆವೆಲ್ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ. ಇದರಿಂದ ಉಸಿರಾಟದ ತೊಂದರೆ ಆರಂಭಕ್ಕೂ ಮುನ್ನವೇ ರೋಗಿಗಳಿಗೆ ಆಸ್ಪತ್ರೆ ಸೇರಲು ನೆರವಾಗುತ್ತದೆ ಎಂದಿದ್ದಾರೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳೆಷ್ಟು, ಬಲಿಯಾದವರೆಷ್ಟು?ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳೆಷ್ಟು, ಬಲಿಯಾದವರೆಷ್ಟು?

ಈ ಯಂತ್ರವನ್ನು ಗೃಹ ಬಂಧನದಲ್ಲಿರುವವರ ಮನೆಯಲ್ಲಿ ಅಳವಡಿಸಲಾಗುತ್ತದೆ. ಕೊರೊನಾದಿಂದ ಅವರು ಗುಣಮುಖರಾದ ಬಳಿಕ ಸರ್ಕಾರಕ್ಕೆ ಹಿಂದಿರುಗಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ದಿನಕ್ಕೆ 18 ಸಾವಿರ ಕೊರೊನಾ ಟೆಸ್ಟ್‌

ದಿನಕ್ಕೆ 18 ಸಾವಿರ ಕೊರೊನಾ ಟೆಸ್ಟ್‌

ಈ ಮೊದಲು ದೆಹಲಿಯಲ್ಲಿ ನಿತ್ಯ 5 ಸಾವಿರ ಮಂದಿಯ ಪರೀಕ್ಷೆ ನಡೆಸಲಾಗುತ್ತಿತ್ತು, ಇದೀಗ ದಿನಕ್ಕೆ 18 ಸಾವಿರ ಜನರ ಪರೀಕ್ಷೆ ಮಾಡಲಾಗುತ್ತಿದೆ. ಹೆಚ್ಚೆಚ್ಚು ಪರೀಕ್ಷೆಯಿಂದ ಮತ್ತೊಬ್ಬರಿಗೆ ರೋಗ ಹರಡುವುದನ್ನು ತಪ್ಪಿಸಬಹುದಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಚೀನಾದೊಂದಿಗೆ ಭಾರತ ಎರಡು ರೀತಿಯ ಹೋರಾಟ ಮಾಡುತ್ತಿದೆ

ಚೀನಾದೊಂದಿಗೆ ಭಾರತ ಎರಡು ರೀತಿಯ ಹೋರಾಟ ಮಾಡುತ್ತಿದೆ

ಭಾರತವು ಚೀನಾದೊಂದಿಗೆ ಎರಡು ಯುದ್ಧ ಮಾಡುತ್ತಿದೆ, ಒಂದು ಲಡಾಖ್‌ನ ಗಲ್ವಾನ್ ಕಣಿವೆ ಗಡಿಯಲ್ಲಿ ಗಡಿ ಕುರಿತ ಮುಷ್ಠಿಯುದ್ಧ ಇನ್ನೊಂದೆಡೆ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ನಮ್ಮ ಧೈರ್ಯವಂತ ಸೈನಿಕರು ಗೆಲ್ಲುವವರೆಗೂ ಇಟ್ಟ ಹೆಜ್ಜೆಯನ್ನು ಹಿಂದಿಡುವುದಿಲ್ಲ. ನಾವೆಲ್ಲರೂ ಒಟ್ಟಿಗೆ ಸೇರಿ ಹೋರಾಡಬೇಕಿದೆ ಎಂದರು.

ಪಲ್ಸ್‌ ಆಕ್ಸಿಮೀಟರ್

ಪಲ್ಸ್‌ ಆಕ್ಸಿಮೀಟರ್

ನಾಡಿ ಮಿಡಿತವನ್ನು ಅಳೆಯಲು ಹಾಗೂ ರಕ್ತದಲ್ಲಿರುವ ಆಕ್ಸಿಜನ್ ಪ್ರಮಾಣವನ್ನು ತಿಳಿಯಲು ಆಕ್ಸಿಮೀಟರ್ ಅಳವಡಿಸಲಾಗುತ್ತದೆ. ಗೃಹ ಬಂಧನದಲ್ಲಿರುವವರ ಮನೆಯಲ್ಲಿ ಅಳವಡಿಸಲಾಗುತ್ತದೆ. ಗುಣಮುಖರಾದ ಬಳಿಕ ಯಂತ್ರವನ್ನು ಸರ್ಕಾರಕ್ಕೆ ಹಿಂದಿರುಗಿಸಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿರುವ ಕೊರೊನಾ ಸೋಂಕಿತರೆಷ್ಟು?

ದೆಹಲಿಯಲ್ಲಿರುವ ಕೊರೊನಾ ಸೋಂಕಿತರೆಷ್ಟು?

ದೆಹಲಿಯಲ್ಲಿ 59,746 ಮಂದಿ ಕೊರೊನಾ ಸೋಂಕಿತರಿದ್ದಾರೆ. 2,175 ಮಂದಿ ಮೃತಪಟ್ಟಿದ್ದಾರೆ. 33,013 ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ಕೊರೊನಾವೈರಸ್ ಅಂಕಿ-ಅಂಶಗಳಿಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲೇ ಭಾರತದಲ್ಲಿ 14,821 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.
ಭಾರತದಲ್ಲಿ ಮಹಾಮಾರಿ ಕೊವಿಡ್-19 ಸೋಂಕಿಗೆ ಇದುವರೆಗೂ 13,699 ಮಂದಿ ಅಸುನೀಗಿದ್ದಾರೆ. ಒಟ್ಟು 4,25,282 ಮಂದಿ ಕೊರೊನಾವೈರಸ್ ಸೋಂಕಿತರ ಪೈಕಿ 2,37,196ಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ. 1,74,387 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

English summary
Delhi Chief minister Arvind Kejriwal Says The Delhi government, he said, will be providing "Pulse Oxymeter" -- a special machine to measure oxygen levels in blood -- at home, so patients can request for oxygen even before they have breathing difficulties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X