ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆರ್ಸಿ ಹಸು ಆಲಸಿ,ರೋಗಕಾರಕ ಎಂದಿರುವ 'ಹಸು ವಿಜ್ಞಾನ' ಪಠ್ಯವನ್ನು ಕೈಬಿಟ್ಟ ಕಾಮಧೇನು ಆಯೋಗ

|
Google Oneindia Kannada News

ನವದೆಹಲಿ, ಜನವರಿ 21: ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಜೆರ್ಸಿ ಹಸುವನ್ನು ಆಲಸಿ,ರೋಗಕಾರಕ ಎಂಬ ಅಧ್ಯಾಯವನ್ನು ಕಾಮಧೇನು ಆಯೋಗ ಕೈಬಿಟ್ಟಿದೆ.

ರಾಷ್ಟ್ರೀಯ ಕಾಮಧೇನು ಆಯೋಗ ರಾಷ್ಟ್ರೀಯ ಹಸು ವಿಜ್ಞಾನ ಪರೀಕ್ಷೆಯನ್ನು ಆಯೋಜಸಿದೆ. ಇದರ ಮೂಲಕ ಹಸುವಿನ ಬಗ್ಗೆ ಜನರು ಎಷ್ಟು ತಿಳಿದಿದ್ದಾರೆಂಬುದುದು ಅರ್ಥವಾಗಲಿದೆ. ದೇಸಿ ಹಸು ಹಾಗೂ ಜೆರ್ಸ ಹಸುವಿನ ನಡುವೆ ಇರುವ ವ್ಯತ್ಯಾಸ, ಪಂಚಗವ್ಯ ಮತ್ತು ಅದರ ಉಪಯುಕ್ತತೆ, ಹಸು ಮತ್ತು ಕರುಗಳ ಆರೈಕೆ ಮತ್ತು ನಿರ್ವಹಣೆ, ಹಸು ಪರಿಸರ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಹತ್ತು ಅಧ್ಯಾಯವನ್ನು ಕೈಬಿಡಲಾಗಿದೆ.

ಆದರೆ ಹಸು ವಿಜ್ಞಾನ ಪಠ್ಯದಲ್ಲಿ ಜೆರ್ಸಿ ಆಕಳ ಕುರಿತು ಕೆಟ್ಟದಾಗಿ ಮುದ್ರಿಸಲಾಗಿದೆ, ಹಸುವಿನ ಬಗ್ಗೆ ಅರ್ಥಮಾಡಿಕೊಳ್ಳಲು ಮುಂದಾದ ಅಭ್ಯರ್ಥಿಗಳು ಅಲ್ಲಿ ಮುದ್ರಿಸಲಾಗಿರುವ ಕೆಲವು ಮಾಹಿತಿಗಳನ್ನು ಓದಿ ಹೌಹಾರಿದ್ದಾರೆ.

Government Cow Panel Drops Chapters Calling Jersey Cows Lazy

ಅದರಲ್ಲಿ ಭಾರತೀಯ ಹಸು ಜೆರ್ಸಿ ಹಸುಗಳಿಗಿಂತ ಶ್ರೇಷ್ಠ, ಜೆರ್ಸಿ ಹಸು ಆಲಸಿಯಾಗಿದ್ದು, ಅನೇಕ ರೋಗಗಳನ್ನು ಹರಡುತ್ತದೆ ಎಂದು ಬರೆಯಲಾಗಿತ್ತು. ಅದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪಠ್ಯದಲ್ಲಿರುವ 10 ಅಧ್ಯಾಯವನ್ನು ಕೈಬಿಡಲಾಗಿದೆ.

ಸೋಮವಾರ ಹೊಸ ವರ್ಷನ್‌ನ್ನು ಅಪ್‌ಲೋಡ್ ಮಾಡಲಾಗಿದೆ. ದೇಶದೆಲ್ಲೆಡೆ ಸದ್ಯ ಗೋ ಸಂರಕ್ಷಣೆ ಕುರಿತ ವಿಷಯ ಹೆಚ್ಚು ಪ್ರಚಲಿತದಲ್ಲಿದೆ. ರಾಜ್ಯದಲ್ಲಿಯೂ ಕೂಡ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಗೋ ಹತ್ಯೆ ಮಸೂದೆ ಅನೇಕ ಚರ್ಚೆ ಹುಟ್ಟುಹಾಕಿದೆ.

ಈ ನಡುವೆ ಗೋವಿನ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಹಾಗೂ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 'ರಾಷ್ಟ್ರೀಯ ಕಾಮುಧೇನು ಆಯೋಗ' "ಹಸು ವಿಜ್ಞಾನ" (Cow Science) ವಿಷಯಾಧಾರದ ಮೇಲೆ ರಾಷ್ಟ್ರಮಟ್ಟದ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ.

ಫೆ 25ರಂದು ದೇಶಾದ್ಯಂತ ಆನ್​ಲೈನ್​ ಮೂಲಕ ಈ ಪರೀಕ್ಷೆ ನಡೆಯಲಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಈ ರಾಷ್ಟ್ರೀಯ ಕಾಮಧೇನು ಆಯೋಗ ಬರಲಿದ್ದು, ಪ್ರತಿವರ್ಷ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ. ಇದೇ ಮೊದಲ ಬಾರಿ 'ಕಾಮಧೇನು ಗೋ ವಿಜ್ಞಾನ ಪ್ರಸಾರ್​ ಪರೀಕ್ಷೆ' ನಡೆಯಲಿದೆ .

ಹಸುಗಳ ಸಂರಕ್ಷಣೆ, ಅಭಿವೃದ್ಧಿ, ಸಂತತಿ ರಕ್ಷಣೆ ದೃಷ್ಟಿಯಿಂದ ಈ ಪ್ರಕ್ರಿಯೆ ಚಾಲನೆ ನೀಡಲಾಗಿದೆ. ದೇಶದಲ್ಲಿ ಸುಮಾರು 5 ಟ್ರಿಲಿಯನ್​ ಆರ್ಥಿಕತೆಯಲ್ಲಿ ಹಸುವಿನ ಪಾತ್ರ ಇದೆ. ಅಲ್ಲದೇ, ಹಸುವು ಸಂಪೂರ್ಣವಾಗಿ ವಿಜ್ಞಾನದ ವಿಷಯಗಳಿಂದ ಆಧಾರಿಸಿದೆ. ಈ ಹಿನ್ನಲೆ ಹಸುವಿನ ಕುರಿತ ತಿಳುವಳಿಕೆ ಕೂಡ ಅವಶ್ಯವಾಗಿದ್ದು, ಈ ಹಿನ್ನಲೆ ಇದೇ ಮೊದಲ ಬಾರಿ ಗೋ ವಿಜ್ಞಾನ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸ್ಥಳೀಯ ಭಾಷೆಯಲ್ಲಿಯೂ ಪರೀಕ್ಷೆ
ಇನ್ನು ಈ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲೀಷ್​ ಹೊರತು ಪಡಿಸಿ 12 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುತ್ತಿದೆ. 100 ಅಂಕಗಳಿಗೆ ಈ ಪರೀಕ್ಷೆಯನ್ನು ನಡೆಸಲಾಗುವುದು. ಅಲ್ಲದೇ ಪರೀಕ್ಷೆಯೂ ಬಹು ಆಯ್ಕೆ ಉತ್ತರವನ್ನು ಒಳಗೊಂಡಿರಲಿದೆ. ನಾಲ್ಕು ವಿಭಾಗಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯ ಅವಧಿ 1 ಗಂಟೆಯಾಗಿದೆ. ಈ ಪರೀಕ್ಷೆಗೆ ಯಾವುದೇ ಶುಲ್ಕವಿಲ್ಲ.

ನಾಲ್ಕು ವಿಭಾಗದಲ್ಲಿ ಪರೀಕ್ಷೆ: ಪ್ರಾಥಮಿಕ ಹಂತ ಅಂದರೆ 8ನೇ ತರಗತಿವರೆಗೆ, ಎರಡನೇ ಹಂತ- 9ನೇ ತರಗತಿಯಿಂದ 12ನೇ ತರಗತಿವರೆಗೆ ಕಾಲೇಜು ಹಂತ ಅಂದರೆ 12ನೇ ತರಗತಿಯಿಂದ ರಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮತ್ತೊಂದು ಹಂತ ಸಾಮಾನ್ಯ ಜನರಿಗೆ ಇರಲಿದೆ. ಈ ರೀತಿ ನಾಲ್ಕು ವಿಭಾಗದಲ್ಲಿ ಈ ಪರೀಕ್ಷೆ ನಡೆಯಲಿದೆ.

English summary
The Modi government’s cow commission has dropped 10 chapters from the “reference material” compiled for its nationwide ‘cow science’ exam after many of the claims made in the text were termed unscientific.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X