ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಗೆ ಅರಿಶಿನ ದಾರ ಜತೆಗೆ 'ಆಧಾರ'ವೂ ಮುಖ್ಯ

By Mahesh
|
Google Oneindia Kannada News

ನವದೆಹಲಿ, ಡಿ.16: ಮದುವೆಗೆ ಅರಿಶಿನ ದಾರ ಕೊಂಬು ಇದ್ದರೆ ಸಾಲದು ಆಧಾರವೂ ಮುಖ್ಯ ಎಂಬ ನಿಯಮ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಮ್ಯಾಟ್ರಿಮೊನಿ ವೆಬ್ ಸೈಟ್ ಗಳ ನೈಜತೆಯ ಪ್ರಶ್ನೆಗೆ ಆಧಾರ್ ಕಾರ್ಡ್ ಮೂಲಕ ಸರ್ಕಾರ ಉತ್ತರಿಸುತ್ತಿದೆ.

ಮ್ಯಾಟ್ರಿಮೊನಿ ವೆಬ್ ಸೈಟ್ ಗಳಲ್ಲಿ ಪ್ರೊಫೈಲ್ ಹಾಕುವ ವಿವಾಹಾರ್ಥಿಗಳು ಆಧಾರ್ ಕಾರ್ಡ್ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸಲು ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಚಿವೆ ಮೇನಕಾ ಗಾಂಧಿ ಮುಂದಾಗಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು, ಆನ್ ಲೈನ್ ವಿವಾಹ, ಡೇಟಿಂಗ್ ಗಳ ಹಾವಳಿಯನ್ನು ನಿಯಂತ್ರಿಸಲು ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ಸದ್ಯಕ್ಕೆ ವೈಯಕ್ತಿಕ ವಿವರಗಳ ಸತ್ಯಾಸತ್ಯತೆ ತಿಳಿಯಲು ಯಾವುದೇ ವಿಧಾನಗಳನ್ನು ಅನೇಕ ವೆಬ್ ಸೈಟ್ ಗಳು ಅನುಸರಿಸುತ್ತಿಲ್ಲ. ಮೊಬೈಲ್ ಸಂಖ್ಯೆ ಬಿಟ್ಟರೆ ಮತ್ತ್ಯಾವುದೇ ಮಾಹಿತಿಯನ್ನು ದೃಢೀಕರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರೊಫೈಲ್ ಹಾಕುವವರ ಸಂಪೂರ್ಣ ಮಾಹಿತಿ ಪಡೆಯಲು ಈ ವಿಧಾನ ನೆರವಾಗುತ್ತದೆ ಎಂದಿದ್ದಾರೆ. [ಆಧಾರ್ ಕಾರ್ಡ್ ಯೋಜನೆ ರದ್ದಾಗಲ್ಲ]

Government asks matrimonial websites to authenticate profiles using Aadhaar cards

ಮ್ಯಾಟಿಮೊನಿ ಸೈಟ್ ಗಳಲ್ಲಿ 35 ರಿಂದ 40 ಮಿಲಿಯನ್ ಆನ್ ಲೈನ್ ನೊಂದಣಿಯಾಗುತ್ತಿದ್ದು, ಪ್ರತಿ ತಿಂಗಳು 2.2 ಮಿಲಿಯನ್ ಪ್ರೊಫೈಲ್ ಸೃಷ್ಟಿಯಾಗುತ್ತಿದೆ. ಶೇ 10ರಷ್ಟು ಮಂದಿ ಮಾತ್ರ ಇದರಿಂದ ಲಾಭ ಪಡೆದು ಮದುವೆಯಾಗಿರುವುದು ಕಂಡು ಬಂದಿದೆ.

ಇತ್ತೀಚೆಗೆ ದೆಹಲಿಯಲ್ಲಿ ಬಂಧಿತನಾದ ವ್ಯಕ್ತಿಯೊಬ್ಬ ಮೂರು ಆನ್ ಲೈನ್ ಮ್ಯಾಟಿಮೋನಿ ಸೈಟ್ ಗಳಲ್ಲಿ ತನ್ನ ಖಾತೆ ಹೊಂದಿದ್ದ ಸುಮಾರು 1000ಕ್ಕೂ ಅಧಿಕ ಯುವತಿಯರಿಗೆ ಮನವಿ ಕಳಿಸಿದ್ದ. 30ಕ್ಕೂ ಅಧಿಕ ಯುವತಿಯರ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿತ್ತು.

ಭಾರತದ ಅತಿದೊಡ್ಡ ಮದುವೆ ವೆಬ್ ಸೈಟ್ ಭಾರತ್ ಮ್ಯಾಟ್ರಿಮೊನಿ.ಕಾಂ ಇತ್ತೀಚೆಗೆ ತನ್ನ ವೆಬ್ ಸೈಟ್ ನಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದು ರೇಷನ್ ಕಾರ್ಡ್ ಸೇರಿದಂತೆ ಯಾವುದೇ ದಾಖಲಾತಿ ಕಡ್ಡಾಯಗೊಳಿಸುವ ಮುನ್ನ ಗ್ರಾಹಕರ ಅಭಿಮತ ಮುಖ್ಯ ಎಂದಿದೆ. ಆಧಾರ್ ಕಾರ್ಡ್ ಕಡ್ಡಾಯ ಮಾಡುವುದರಿಂದ ಆನ್ ಲೈನ್ ವಂಚನೆ ಜಾಲ ಮುಗಿಸಲು ಸಾಧ್ಯವಿಲ್ಲ. ಸಂಬಳ, ಎತ್ತರದ ಬಗ್ಗೆ ಸುಳ್ಳು ಮಾಹಿತಿ ನೀಡಬಹುದು ಇದನ್ನು ಆಧಾರ್ ಕಾರ್ಡ್ ಮೂಲಕ ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ವೆಬ್ ಸೈಟ್ ಗಳು ಹೇಳಿವೆ.

ಯುಪಿಎ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಆಧಾರ್ ಗುರುತಿನ ಪತ್ರ ಯೋಜನೆ(UIDAI)ಯನ್ನು ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಮೋದಿ ಸರ್ಕಾರ ಕಳೆದ ಜುಲೈ ತಿಂಗಳಿನಲ್ಲಿ ಸ್ಪಷ್ಟಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The Aadhaar card could soon be your passport to a married life with the government asking all matrimonial websites to verify the authenticity of the profiles they put up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X