ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ-ಸೈಕಲ್ ಖರೀದಿಗೆ ದೆಹಲಿ ಸರ್ಕಾರದಿಂದ ಪ್ರೋತ್ಸಾಹ ಧನ

|
Google Oneindia Kannada News

ನವದೆಹಲಿ ಮೇ 26: ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರಕಾರ ಎಲೆಕ್ಟ್ರಿಕ್ ಸೈಕಲ್‌ ಖರೀದಿಸುವವರಿಗೆ ಆರ್ಥಿಕ ಧನ ಸಹಾಯ ಒದಗಿಸುವ ನೂತನ ಯೋಜನೆಯನ್ನು ಜಾರಿಗೆ ತಂದಿದೆ.

ಪ್ಯಾಸೆಂಜರ್ ಮತ್ತು ಕಾರ್ಗೊ ಎರಡು ಸೇರಿ ಮೊದಲು 10,000 ಎಲೆಕ್ಟ್ರಿಕ್ ಸೈಕಲ್‌ ಖರೀದಿದಾರರಿಗೆ ಈ ಆರ್ಥಿಕ ಪ್ರೋತ್ಸಾಹ ಯೋಜನೆ ಅನ್ವಯವಾಗಲಿದೆ.

ಬಾ ದೋಸ್ತಾ ಸೈಕಲ್ ತುಳಿ: ಇಬ್ಬರು ಸವಾರರಿಗೆ ಒಂದೇ ಸೈಕಲ್ - ಆನಂದ್ ಮಹೀಂದ್ರಾ ಮೆಚ್ಚುಗೆ ಬಾ ದೋಸ್ತಾ ಸೈಕಲ್ ತುಳಿ: ಇಬ್ಬರು ಸವಾರರಿಗೆ ಒಂದೇ ಸೈಕಲ್ - ಆನಂದ್ ಮಹೀಂದ್ರಾ ಮೆಚ್ಚುಗೆ

ಯೋಜನೆಯ ಪ್ರಕಾರ ಇ-ಸೈಕಲ್‌ ಖರೀದಿದಾರರಿಗೆ ಪ್ರತಿ ಸೈಕಲ್‌ಗೆ ಗರಿಷ್ಠ 5,500 ರೂ. ಅಥವಾ ಇ-ಸೈಕಲ್ ಬೆಲೆಯ ಶೇ.25ರಷ್ಟು ಧನ ಸಹಾಯ ನೀಡಲಾಗುತ್ತದೆ. ಅಲ್ಲದೇ ಮೊದಲ 1,000 ಇ-ಸೈಕಲ್‌ ಖರೀದಿದಾರರಿಗೆ ಹೆಚ್ಚುವರಿಯಾಗಿ 2,000 ರು. ಪ್ರೋತ್ಸಾಹ ಧನ ನೀಡಲಾಗುತ್ತದೆ.

ಇದೇ ರೀತಿ ಕಾರ್ಗೋ ಇ-ಸೈಕಲ್‌ ಖರೀದಿದಾರರಿಗೆ ಪ್ರತಿ ಸೈಕಲ್‌ಗೆ ಗರಿಷ್ಠ 15,000 ರೂ. ಅಥವಾ ಇ-ಸೈಕಲ್ ಬೆಲೆಯ ಶೇ.33ರಷ್ಟು ಧನ ಸಹಾಯ ನೀಡಲಾಗುತ್ತದೆ.

ಖರೀದಿದಾರರ ಖಾತೆಗೆ ನೇರ ಜಮಾವಣೆ

ಖರೀದಿದಾರರ ಖಾತೆಗೆ ನೇರ ಜಮಾವಣೆ

ಇ-ಸೈಕಲ್ ಖರೀದಿಯ ನಂತರ ಖರೀದಿದಾರರು ಮಾಡಿದ ಕ್ಲೈಮ್ ಗಳ ಆಧಾರದ ಮೇಲೆ ಸಾರಿಗೆ ಇಲಾಖೆಯಿಂದ ಮಾಲೀಕರ ಖಾತೆಗಳಿಗೆ ನೇರವಾಗಿ ಪ್ರೋತ್ಸಾಹ ಧನ ಜಮಾ ಮಾಡಲಾಗುತ್ತದೆ. ಕ್ಲೈಮ್ ವೇಳೆ ಖರೀದಿದಾರರು ಇ-ಸೈಕಲ್ ಖರೀದಿಸಿದ ಬಗ್ಗೆ ತಯಾರಕರು ಅಥವಾ ಡೀಲರ್ ಗಳಿಂದ ಪಡೆದ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು ಎಂದು ದೆಹಲಿ ಸರಕಾರದ ಪ್ರಕಟಣೆ ತಿಳಿಸಿದೆ.

ಡೀಲರ್‌ಗಳು ಜಿಎಸ್ಟಿ ನೋಂದಣಿ ಹೊಂದಿರುವುದು ಅಗತ್ಯ

ಡೀಲರ್‌ಗಳು ಜಿಎಸ್ಟಿ ನೋಂದಣಿ ಹೊಂದಿರುವುದು ಅಗತ್ಯ

ಅರ್ಜಿಯನ್ನು ಆನ್ ಲೈನ್ ಪ್ಲಾಟ್‌ಫಾರ್ಮ್ ಮೂಲಕ ಖರೀದಿದಾರರ ಪರವಾಗಿ ತಯಾರಕರು ಅಥವಾ ಡೀಲರ್‌ ಮೂಲಕ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ಏಳು ದಿನಗಳಲ್ಲಿ ಖರೀದಿದಾರರ ಖಾತೆಗೆ ಪ್ರೋತ್ಸಾಹ ಧನ ಜಮೆಯಾಗುತ್ತದೆ. ಇದಕ್ಕೆ ತಯಾರಕರು ಅಥವಾ ಡೀಲರ್‌ಗಳು ಸೂಕ್ತ ಜಿಎಸ್ಟಿ ನೋಂದಣಿ ಹೊಂದಿರುವುದು ಅಗತ್ಯ.

ಹಳೆಯ ವಾಹನಗಳ ಸ್ಕ್ರಾಪಿಂಗ್ ಗೆ ಪ್ರೋತ್ಸಾಹ ಧನ

ಹಳೆಯ ವಾಹನಗಳ ಸ್ಕ್ರಾಪಿಂಗ್ ಗೆ ಪ್ರೋತ್ಸಾಹ ಧನ

ದೆಹಲಿಯ ಎಲೆಕ್ಟ್ರಿಕ್ ವಾಹನಗಳ ನಿಯಮದ ಪ್ರಕಾರ, ಹಳೆಯ ಇಂಟರ್ನಲ್ ಕಂಬಷನ್ ಎಂಜಿನ್ ಹೊಂದಿರುವ ಇ-ಕಾರ್ಗೋ ವಾಹನಗಳ ಸ್ಕ್ರಾಪಿಂಗ್ ಗೆ ಪ್ರೋತ್ಸಾಹ ಧನವಾಗಿ 3,000 ರು. ಸಹ ಪಡೆಯಬಹುದಾಗಿದೆ. ಸಾರಿಗೆ ಇಲಾಖೆಯ ಅಧಿಕೃತ ಸಕ್ರ್ಯಾಪಿಂಗ್ ಡೀಲಿರ್ ನಿಂದ ಮಾಡಲಾದ ವಾಹನಗಳ ಸಕ್ರ್ಯಾಪಿಂಗ್ ಗೆ ಇದು ಅನ್ವಯವಾಗುತ್ತದೆ. ಈ ಸಂಬಂಧ ಅರ್ಜಿ ಪಡೆದ ಐದು ದಿನಗಳಲ್ಲಿ ವಾಹನ ಮಾಲೀಕರ ಬ್ಯಾಂಕ್ ಖಾತೆಗೆ ಪ್ರೋತ್ಸಾಹ ಧನ ಜಮೆಯಾಗಲಿದೆ.

ಇನ್ ವಾಯ್ಸ್ ನಲ್ಲಿ ಹೆಸರು ಸರಿಯಾಗಿ ಇರಲಿ

ಇನ್ ವಾಯ್ಸ್ ನಲ್ಲಿ ಹೆಸರು ಸರಿಯಾಗಿ ಇರಲಿ

"ವೈಯಕ್ತಿಕ ಖರೀದಿ ಸಂದರ್ಭದಲ್ಲಿ, ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮತ್ತು ಮಾರಾಟದ ಇನ್ ವಾಯ್ಸ್ ನಲ್ಲಿರುವ ಹೆಸರು ಎರಡೂ ಹೊಂದಿಕೆಯಾಗಿರಬೇಕು. ಇಂದು ವೇಳೆ ಆಧಾರ್ ನೊಂದಿಗೆ ಹೊಂದಿಕೆಯಾಗದಿದ್ದರೆ ಅರ್ಜಿಯನ್ನು ಸಲ್ಲಿಸುವ ಮೊದಲು ಇನ್ ವಾಯ್ಸ್ ನಲ್ಲಿರುವ ಹೆಸರನ್ನು ಸರಿಪಡಿಸುವಂತೆ ಡೀಲರ್‌ಗಳಿಗೆ ತಿಳಿಸಬೇಕು. ಜತೆಗೆ ಆಧಾರ್ ಸಂಖ್ಯೆಯೊಂದಿಗೆ ಸಂಯೋಜಿತಗೊಂಡಿರುವ ಬ್ಯಾಂಕ್ ಖಾತೆಯ ವಿವರಗಳನ್ನು ಖರೀದಿದಾರರು ಸಲ್ಲಿಸಬೇಕು. ಇದರಿಂದ ನೇರವಾಗಿ ಅವರ ಖಾತೆಗೆ ಪ್ರೋತ್ಸಾಹ ಧನ ಹಾಕಲು ಸಾಧ್ಯವಾಗುತ್ತದೆ,'' ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಹಳೆಯ ಇ-ವಾಹನ ಸ್ಕ್ರಾಪ್ ಗೆ ಅವಕಾಶ

ಹಳೆಯ ಇ-ವಾಹನ ಸ್ಕ್ರಾಪ್ ಗೆ ಅವಕಾಶ

ಈಗಿರುವ ಇಂಟರ್ನಲ್ ಕಂಬಷನ್ ಎಂಜಿನ್ ಹೊಂದಿರುವ ಎಲೆಕ್ಟ್ರಿಕ್ ವಾಹನವನ್ನು ಸ್ಕ್ರಾಪ್ ಮಾಡಲು ಬಯಸುವ ಇ-ಸೈಕಲ್ ಖರೀದಿದಾರರು, ಇ-ಸೈಕಲ್ ಮಾರಾಟದಲ್ಲಿ ತೊಡಗಿರುವ ಡೀಲರ್ ಅನ್ನು ಭೇಟಿ ಮಾಡಬೇಕು. ವಾಹನದ ನೋಂದಣಿ ಪ್ರಮಾಣ ಪತ್ರ(ಆರ್ಸಿ) ಮತ್ತು ಹಳೆಯ ಎಲೆಕ್ಟ್ರಿಕ್ ವಾಹನವನ್ನು ಅವರಿಗೆ ಒದಗಿಸಬೇಕು ಎಂದು ದೆಹಲಿ ಸರಕಾರದ ಪ್ರಕಟಣೆ ತಿಳಿಸಿದೆ.

English summary
The Delhi government announced new scheme under this financial incentive will be provided to those buying electric cycles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X