ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಕಂಪ ಆಗೋಕು ಮೊದಲೇ ವಾರ್ನಿಂಗ್ ಕೊಡಲಿದೆ ನಿಮ್ಮ ಸ್ಮಾರ್ಟ್‌ಫೋನ್..!

|
Google Oneindia Kannada News

ನವದೆಹಲಿ, ಆಗಸ್ಟ್‌ 12: ಕ್ಯಾಲಿಫೋರ್ನಿಯಾದಲ್ಲಿ ಮಂಗಳವಾರ ಭೂಕಂಪ ಎಚ್ಚರಿಕೆ ವ್ಯವಸ್ಥೆಯನ್ನು ಗೂಗಲ್ ಸೇರಿಸಿದ್ದು, ಆ್ಯಂಡ್ರಾಯ್ಡ್ ಚಾಲಿತ ಸ್ಮಾರ್ಟ್‌ಫೋನ್‌ಗಳನ್ನು ಭೂಕಂಪನ ಪತ್ತೆ ಹಚ್ಚುವ ಹೊಸ ವೈಶಿಷ್ಟ್ಯವು ಗ್ರಾಹಕರಿಗೆ ಲಭ್ಯವಾಗಲಿದೆ.

ಭೂಕಂಪದ ಮೊದಲು ಸ್ಮಾರ್ಟ್‌ಫೋನ್ ಬಳಕೆದಾರರನ್ನು ಎಚ್ಚರಿಸುವಂತಹ ಆ್ಯಂಡ್ರಾಯ್ಡ್ ಆಧಾರಿತ ಭೂಕಂಪ ಪತ್ತೆ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಿರುವುದಾಗಿ ಗೂಗಲ್ ಹೇಳಿಕೊಂಡಿದೆ. ಈ ಮೂಲಕ ನೀವು ಎಲ್ಲೇ ಇದ್ದರೂ ಆ್ಯಂಡ್ರಾಯ್ಡ್ಡ್ ಸ್ಮಾರ್ಟ್‌ಫೋನ್ ಭೂಕಂಪ ಎಚ್ಚರಿಕೆ ವ್ಯವಸ್ಥೆಯ ಭಾಗವಾಗಬಹುದು. ಒಂದು ಅರ್ಥದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಭೂಕಂಪ ಪತ್ತೆ ಹಚ್ಚುವ ಚಿಕ್ಕ ಸೀಸ್ಮೋಮೀಟರ್ ಇದ್ದ ಹಾಗೆ ಅಂದುಕೊಳ್ಳಿ.

ವ್ಯಾಪಾರ ರಹಸ್ಯ ಕಳ್ಳತನ: ಗೂಗಲ್ ಮಾಜಿ ಎಂಜಿನಿಯರ್‌ಗೆ ಜೈಲು ವಾಸ ಗ್ಯಾರೆಂಟಿವ್ಯಾಪಾರ ರಹಸ್ಯ ಕಳ್ಳತನ: ಗೂಗಲ್ ಮಾಜಿ ಎಂಜಿನಿಯರ್‌ಗೆ ಜೈಲು ವಾಸ ಗ್ಯಾರೆಂಟಿ

ಲಕ್ಷಾಂತರ ಇತರ ಆ್ಯಂಡ್ರಾಯ್ಡ್ ಫೋನ್‌ಗಳನ್ನು ಸೇರಿಕೊಂಡು ವಿಶ್ವದ ಅತಿದೊಡ್ಡ ಭೂಕಂಪನ ಪತ್ತೆಹಚ್ಚುವಿಕೆ ನೆಟ್‌ವರ್ಕ್ ಅನ್ನು ಗೂಗಲ್ ಹೊಂದಲಿದೆ ಎಂದು ಹೇಳಿದೆ.

Google Turning Android Smartphones Into Earthquake Detectors

USGS, Cal OES, ಕ್ಯಾಲಿಫೋರ್ನಿಯಾ ಬರ್ಕ್ಲಿ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರಾಜ್ಯದಾದ್ಯಂತ ಸ್ಥಾಪಿಸಿರುವ 700ಕ್ಕೂ ಹೆಚ್ಚು ಭೂಕಂಪಮಾಪಕಗಳಿಂದ ಶೇಕ್ ಅಲರ್ಟ್ ವ್ಯವಸ್ಥೆಯು ಸಂಕೇತಗಳನ್ನು ಬಳಸುತ್ತದೆ.

ಸಿಸ್ಟಂನ ವೆಬ್‌ಸೈಟ್ ಪ್ರಕಾರ, "ಭೂಕಂಪನ ಪ್ರಾರಂಭವಾಗಿದೆ ಮತ್ತು ಅಲುಗಾಡುವಿಕೆಯು ಸನ್ನಿಹಿತವಾಗಿದೆ" ಎಂಬ ಎಚ್ಚರಿಕೆ ಸಂದೇಶಗಳನ್ನು ಶೇಕ್ ಅಲರ್ಟ್ ನೀಡಲಿದೆ. ಇದು ರಾಜ್ಯದಾದ್ಯಂತ ನೂರಾರು ಭೂಕಂಪಮಾಪಕಗಳಿಂದ ಸಂಕೇತಗಳನ್ನು ಬಳಸುತ್ತದೆ.

ಕ್ಯಾಲಿಫೋರ್ನಿಯಾದಲ್ಲಿ ಭೂಕಂಪನ ಎಚ್ಚರಿಕೆಗಳು ಮೊದಲು ಪ್ರಾರಂಭವಾಗುತ್ತಿವೆ. ಏಕೆಂದರೆ ರಾಜ್ಯವು ವ್ಯಾಪಕವಾದ ಭೂಕಂಪಮಾಪಕ ಜಾಲವನ್ನು ಹೊಂದಿದೆ. ಫೋನ್ ಆಧಾರಿತ ಪತ್ತೆ ಜಾಲವನ್ನು ಸ್ಥಾಪಿಸಿದ ಕಾರಣ ಮುಂಬರುವ ವರ್ಷದಲ್ಲಿ ಇತರ ಸ್ಥಳಗಳಿಗೆ ಇದು ಸಿಗಲಿದೆ.

English summary
Google added an earthquake alert system in California on Tuesday, saying it is working on letting Android-powered smartphones double as tremor detectors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X