ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಮಿಕಶಕ್ತಿಗೆ ಡೂಡಲ್ ಮೂಲಕ ಗೌರವಿಸಿದ ಗೂಗಲ್

By Nayana
|
Google Oneindia Kannada News

ನವ ದೆಹಲಿ, ಮೇ.1: ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಗೌರವಾರ್ಥ ವಿಶೇಷ ಡೂಡಲ್‌ ಅನ್ನು ಗೂಗಲ್‌ ಬಿಡುಗಡೆ ಮಾಡಿದೆ.

ವಿಶ್ವದ ಎಲ್ಲಾ ಶ್ರಮಜೀವಿಗಳಿಗೆ ಜಗತ್ತಿನ ದೈತ್ಯ ಸರ್ಚ್ ಎಂಜಿನ್ ಸಂಸ್ಥೆ ಗೂಗಲ್ ನಲ್ಲಿ ಕಾರ್ಮಿಕರ ಘನತೆಗೆ ಗೌರವಿಸುವ ಡೂಡಲ್‌ನ್ನು ಪ್ರಕಟಿಸಿದೆ. ವಿವಿಧ ವೃತ್ತಿಗಳಲ್ಲಿ ಕಾರ್ಮಿಕರು ಬಳಸುವ ನಾನಾ ಬಗೆಯ ಉಪಕರಣಗಳಿರುವ ಡೂಡಲ್‌ಅನ್ನು ತಯಾರಿಸಲಾಗಿದ್ದು, ಕಾರ್ಮಿಕ ಶಕ್ತಿಗೆ ಗೌರವ ಸಲ್ಲಿಸಲಾಗಿದೆ.

ಭಾರತದಲ್ಲಿ ಮೇ 1 ಕಾರ್ಮಿಕರ ದಿನ: ಆಚರಣೆ ಹೇಗೆ ಬಂತು?ಭಾರತದಲ್ಲಿ ಮೇ 1 ಕಾರ್ಮಿಕರ ದಿನ: ಆಚರಣೆ ಹೇಗೆ ಬಂತು?

ಈ ದಿನದ ಆಚರಣೆಯ ಮೂಲ ಇರುವುದು ಅಮೆರಿಕಾದಲ್ಲಿ 19ನೇ ಶತಮಾನದಲ್ಲಿ ನಡೆದ ಕಾರ್ಮಿಕ ಚಳವಳಿಗಳಲ್ಲಿ. ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆ ನಿಗದಿ ಪಡಿಸಲು, ದುಡಿಯುವ ಪರಿಸರದಲ್ಲಿ ಮೂಲಸೌಕರ್ಯ ಒದಗಿಸಲು ಮತ್ತು ಕಾರ್ಮಿಕರ ಹಿತರಕ್ಷಣೆ ಕಾನೂನುಗಳನ್ನು ರೂಪಿಸಲು ಪಟ್ಟುಹಿಡಿದ ಕಾರ್ಮಿಕ ಒಕ್ಕೂಟದ ಸದಸ್ಯರು, ಸಮಾಜವಾದಿಗಳು ಮತ್ತು ಕಮ್ಯೂನಿಸ್ಟರು ಧರಣಿ ಹೂಡಿದ್ದರು.

Google respects dignity of labours on May Day

ದಿನದ 24 ಗಂಟೆಗಳಲ್ಲಿ 8 ಗಂಟೆ ಕೆಲಸಕ್ಕೆ, 8 ಗಂಟೆ ಮನೋಲ್ಲಾಸಕ್ಕೆ ಮತ್ತು 8 ಗಂಟೆ ವಿಶ್ರಾಂತಿಗೆ ಮೀಸಲಿಡಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿತ್ತು.

ಭಾರತದಲ್ಲಿ 1923 ಮೇ 1ರಂದು ಚೆನ್ನೈನಲ್ಲಿ(ಮದ್ರಾಸ್‌) ಮೊದಲಿಗೆ ಈ ದಿನ ಆಚರಿಸಲಾಯಿತು. ಅಂದಿನ ಹಿಂದೂಸ್ತಾನ್‌ ಕಿಸಾನ್‌ ಪಕ್ಷವು ಈ ಆಚರಣೆಗೆ ನಾಂದಿಹಾಡಿತು. ಈ ದಿನವನ್ನು ರಾಷ್ಟ್ರೀಯ ರಜಾ ದಿನವೆಂದು ಘೋಷಿಸಲು ಪಕ್ಷವು ಅಂದೇ ಒತ್ತಾಯಿಸಿತ್ತು.

ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಮೇ 1ನ್ನು ಕಾರ್ಮಿಕ ದಿನಾಚರಣ ಪ್ರಯುಕ್ತ ಸಾರ್ವಜನಿಕ ರಜೆ ಇರುತ್ತದೆ. 1923ರ ಇದೇ ದಿನದಂದು, ಲೇಬರ್‌ ಕಿಸಾನ್‌ ಪಕ್ಷ ಮೊದಲ ಬಾರಿಗೆ ಭಾರತದಲ್ಲಿ ಕಾರ್ಮಿಕ ದಿನಾಚರಣೆ ಆಚರಿಸಿತ್ತು. ವಿವಿಧ ವೃತ್ತಿರಂಗದ ಕಾರ್ಮಿಕರು ಬಳಸುವ ಸಲಕರಣೆ-ಸಾಧನಗಳ ಚಿತ್ರಗಳನ್ನು ಡೂಡಲ್‌ನಲ್ಲಿ ಬಿಂಬಿಸಿದೆ. ಕಾರ್ಮಿಕರಿಗೆ ಗೌರವ ಸೂಚಕವಾಗಿ ಆಚರಿಸುವ ಈ ದಿನಕ್ಕೆ 'ಮೇ ಡೇ' ಎಂತಲೂ ಕರೆಯುತ್ತಾರೆ.

English summary
Google search engine had paid great respect to the working class who were involved in betterment of the world. That Google has published its doodle with symbol of many tools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X