ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತ್ರತಜ್ಞ ಗೋವಿಂದಪ್ಪ ವೆಂಕಟಸ್ವಾಮಿ ಜನ್ಮ ಶತಮಾನಕ್ಕೆ ಗೂಗಲ್ ಗೌರವ

|
Google Oneindia Kannada News

ನವದೆಹಲಿ, ಅ.1: ದೇಶದ ಪ್ರಸಿದ್ಧ ನೇತ್ರ ಚಿಕಿತ್ಸಾ ತಜ್ಞ ಡಾ. ಗೋವಿಂದಪ್ಪ ಅವರ ಜನ್ಮ ಶತಮಾನಕ್ಕೆ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.

ಅ.1ರಂದು ನೇತ್ರಶಾಸ್ತ್ರಜ್ಞ ಡಾ. ಗೋವಿಂದಪ್ಪ ವೆಂಕಟಸ್ವಾಮಿ ಅವರ ಜನ್ಮ ಶತಮಾನೋತ್ಸವ, ಹೀಗಾಗಿ ಅವರ ಭಾವಚಿತ್ರ ಹಾಕುವ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಗಿದೆ. ಗೋವಿಂದಪ್ಪ ಅವರು ಪದ್ಮಶ್ರೀ ಪುರಸ್ಕೃತರಾಗಿದ್ದರು ಹಾಗೆಯೇ ಅರವಿಂದ ಐ ಹಾಸ್ಪಿಟಲ್ ನ ಮುಖ್ಯಸ್ಥರಾಗಿದ್ದರು, 55 ಮಿಲಿಯನ್ ಗೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿರುವ ಕೀರ್ತಿ ಇವರದ್ದಾಗಿದೆ.

ಗೂಗಲ್ 20ರ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷ ವಿಡಿಯೋ ಗೂಗಲ್ 20ರ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷ ವಿಡಿಯೋ

ಹಾಗೆಯೇ 6.8 ಮಿಲಿಯನ್ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಇವರು ಮಾಡಿದ್ದಾರೆ, ದಿನಕ್ಕೆ 100 ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದ್ದ ಅವರು, ಗ್ರಾಮೀಣ ಭಾಗದಲ್ಲಿ ನೇತ್ರ ತಪಾಸಣಾ ಶಿಬಿರಗಳನ್ನು ಆರಂಭಿಸಿದ್ದರು. ಅರವಿಂದ್ ಕಣ್ಣಿನ ಆಸ್ಪತ್ರೆಯಲ್ಲಿ ಪ್ರಾರಂಭದಲ್ಲಿ 11 ಹಾಸಿಗೆಯ ಸಾಮರ್ಥ್ಯವುಳ್ಳ ಸಣ್ಣ ಆಸ್ಪತ್ರೆಯಾಗಿ ಆರಂಭವಾಗಿತ್ತು.

Google honors great ophthalmologist Dr. V with doodle

ಭಾರತರತ್ನ ಸರ್‌ಎಂ. ವಿಶ್ವೇಶ್ವರಯ್ಯನವರಿಗೆ ಗೂಗಲ್ ಡೂಡಲ್ ಗೌರವ ಭಾರತರತ್ನ ಸರ್‌ಎಂ. ವಿಶ್ವೇಶ್ವರಯ್ಯನವರಿಗೆ ಗೂಗಲ್ ಡೂಡಲ್ ಗೌರವ

ಅವರು 1918ರಲ್ಲಿ ತಮಿಳುನಾಡಿನ ವಡಮಲಪುರಂನಲ್ಲಿ ಜನಿಸಿದರು. 1973ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಪುರಸ್ಕೃತರಾದರು. 2006ರ ಜುಲೈ 7ರಂದು ತಮ್ಮ 87ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

English summary
Google on Monday marked the 100th birth anniversary of Indian ophthalmologist Govindappa Venkataswamy with a doodle. He founded the Aravind Eye Hospital, which started as “an 11-bed facility and has grown into a network of clinics providing life-changing care to citizens of a nation struggling with high rates of blindness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X