ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮಹಾನ್ ನೃತ್ಯ ಕಲಾವಿದೆಗೆ ಗೂಗಲ್ ಡೂಡಲ್ ನಮನ

|
Google Oneindia Kannada News

ನವದೆಹಲಿ, ಮೇ 11: ಇಂದು ಗೂಗಲ್ ಹೋಂಪೇಜ್ ಓಪನ್ ಮಾಡಿದರೆ, ಭಾರತದ ಹೆಮ್ಮೆಯ ನೃತ್ಯಗಾರ್ತಿ ಮೃಣಾಲಿನಿ ಸಾರಾಭಾಯಿ ಅವರ 100 ನೇ ಜನ್ಮದಿನೋತ್ಸವದ ಸಂಭ್ರಮಕ್ಕೆ ಗೂಗಲ್ ಡೂಡಲ್ ನಮನ ಸಲ್ಲಿಸಿದೆ.

ಭಾರತದ ಅತ್ಯುನ್ನತ ನಾಗರಿಕ ಗೌರವಗಳಾದ ಪದ್ಮ ಭೂಷಣ, ಪದ್ಮಶ್ರೀ ಪ್ರಶಸ್ತಿ ವಿಜೇತೆಯಾಗಿದ್ದ ಮೃಣಾಲಿನಿ ಅ ವರು ಕೇರಳ ಮೂಲದವರು. 1918ರ ಮೇ 11 ರಂದು ಜನಿಸಿದ ಮೃಣಾಲಿನಿ, ಭರತನಾಟ್ಯ, ಕಥಕ್ಕಳಿ ಮತ್ತು ಮೋಹಿನಿಯಾಟ್ಟಂ ನಲ್ಲಿ ಪರಿಣಿತಿ ಪಡೆದಿದ್ದರು.

ಚಿಪ್ಕೋ ಚಳವಳಿಗೆ ಗೂಗಲ್ ಡೂಡಲ್ ನಮನಚಿಪ್ಕೋ ಚಳವಳಿಗೆ ಗೂಗಲ್ ಡೂಡಲ್ ನಮನ

ತಮ್ಮ ಅಮೋಘ ನೃತ್ಯದ ಮೂಲಕ ಸಾವಿರಾರು ಅಭಿಮಾನಿಗಳನ್ನು ಪಡೆದಿದ್ದ ಅವರು ತಮ್ಮ ಗರಡಿಯಲ್ಲಿ ನೂರಾರು ಉತ್ತಮ ಶಿಷ್ಯರನ್ನು ತಯಾರು ಮಾಡಿದರು. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದೇ ಕರೆಸಿಕೊಳ್ಳುವ ವಿಕ್ರಂ ಸಾರಾಭಾಯಿ ಅವರ ಪತ್ನಿಯಾಗಿದ್ದ ಅವರು, ಕಲಾ ಪ್ರದರ್ಶನಕ್ಕಾಗಿ 1949 ರಲ್ಲಿ ದರ್ಪಣಾ ಅಕಾಡೆಮಿಯನ್ನು ಆರಂಭಿಸಿದರು.

Google Doodle celebrates legendary dancer Mrinalini Sarabhai

ಕಲೆಯ ಮೂಲಕ ಕೇವಲ ಮನರಂಜನೆ ಮಾತ್ರವಲ್ಲದೆ, ಸಮಾಜದ ಹಲವು ಅನಿಷ್ಠಗಳ ವಿರುದ್ಧ ಸಂದೇಶವನ್ನು ನೀಡುವ ಕೆಲಸ ಮಾಡಿದರು. ಅವರು ನೃತ್ಯಲೋಕಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರ 1965 ರಲ್ಲಿ ಪದ್ಮಶ್ರೀ ಮತ್ತು 1992 ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.

ಇಂಥ ಮಹಾನ್ ನೃತ್ಯ ಕಲಾವಿದೆಯನ್ನು ನೆನಪಿಸಿದ ಗೂಗಲ್ ಡೂಡಲ್ ಗೆ ನಮನ.

English summary
Today's Google Doodle celebrates the 100th birth anniversary of legendary dancer and Padma Bhushan and Padma Shri recipient Mrinalini Sarabhai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X