ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಬಾಲ್ಯದ ನೆನಪುಗಳ ಸುತ್ತ ಗಿರಕಿಹೊಡೆಸಿದ ಗೂಗಲ್ ಡೂಡಲ್

|
Google Oneindia Kannada News

ನವದೆಹಲಿ, ನವೆಂಬರ್ 14: ಮಕ್ಕಳ ದಿನಾಚರಣೆಗೆ ಶುಭಕೋರುವ ಮೂಲಕ ಗೂಗಲ್ ಡೂಡಲ್ ನಮ್ಮೆಲ್ಲರನ್ನೂ ಮತ್ತೆ ಬಾಲ್ಯಕ್ಕೆ ಕರೆದೊಯ್ದಿದೆ.

ಗೂಗಲ್ ವಿಶೇಷ ಡೂಡಲ್ ರಚಿಸುವ ಮೂಲಕ ಮಕ್ಕಳಿಗೆ ಶುಭಹಾರೈಸಿದೆ. ಮಕ್ಕಳು ಸಾಮಾನ್ಯವಾಗಿ ರಚಿಸುವ ಕ್ರಯಾನ್ಸ್ ನಿಂದ ಮಾಡಿರುವಂತಹ ಪರಿಸರ ಚಿತ್ರವನ್ನು ಬಳಸಿಕೊಂಡು ಗೂಗಲ್ ಈ ಬಾರಿ ವಿಶೇಷ ಡೂಡಲ್ ರಚಿಸಿದೆ.

ಮೌಂಟ್ ಎವರೆಸ್ಟ್ ಮೊದಲ ಮಹಿಳೆ ಜಂಕೋ ತಾಬಿ ಸ್ಮರಿಸಿದ ಗೂಗಲ್ ಮೌಂಟ್ ಎವರೆಸ್ಟ್ ಮೊದಲ ಮಹಿಳೆ ಜಂಕೋ ತಾಬಿ ಸ್ಮರಿಸಿದ ಗೂಗಲ್

ಮಕ್ಕಳಿಗೆ ಗೂಗಲ್ ಡೂಡಲ್ ರಚಿಸುವ ಸ್ಪರ್ಧೆಯನ್ನು ಕೂಡ ಹಮ್ಮಿಕೊಳ್ಳುತ್ತದೆ. ಆಯ್ದ ಚಿತ್ರಗಳಿಗೆ ವಿಶೇಷ ಬಹುಮಾನವನ್ನು ಕೂಡ ಗೂಗಲ್ ನೀಡಲಿದೆ ಎಂದು ತಿಳಿದು ಬಂದಿದೆ.

Google Doodle Celebrates Childrens Day

ಭಾರತದಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರು ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ಬಣ್ಣ ಬಣ್ಣದ ಡೈಡಲ್‌ನ್ನು ಗೂಗಲ್ ಮಾಡಿದೆ. 2009ರಿಂದ ಮಕ್ಕಳ ದಿನಾಚರಣೆ ಗೂಗಲ್ ಮಕ್ಕಳಿಗೆ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದೆ.

1956ಕ್ಕೂ ಮುನ್ನ ದೇಶದಲ್ಲಿ ನವೆಂಬರ್ 20ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿತ್ತು, 1954ರಲ್ಲಿ ವಿಶ್ವ ಮಕ್ಕಳ ದಿನವನ್ನಾಗಿ ಘೋಷಣೆ ಮಾಡಲಾಯಿತು. ಆದರೆ 1964ರಲ್ಲಿ ಜವಾಹರಲಾಲ್ ನೆಹರೂ ಅವರು ನಿಧನರಾದ ಬಳಿಕ ಮಕ್ಕಳ ದಿಮಾಚರಣೆಯನ್ನು ನವೆಂಬರ್ 14 ರಂದು ಮಾಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ನೆಹರೂ ಅವರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡಿದ್ದರು, ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎನ್ನುವುದನ್ನು ದೇಶದುದ್ದಗಲಕ್ಕೂ ಸಾರಿದ್ದರು. ಈಗ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಕಥೆ, ಮಕ್ಕಳ ಬಗ್ಗೆ ಅವರಿಗಿದ್ದ ಪ್ರೀತಿ ನಮಗೆ ಅವರ ಮೇಲಿರುವ ಗೌರವವನ್ನು ಇಮ್ಮಡಿಗೊಳಿಸುತ್ತದೆ.

English summary
Google is set to celebrate Children's Day 2019 by announcing the National winner of 'Doodle for Google' on Thursday, November 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X