ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈ ತೊಳೆಯುವುದರ ಅನುಕೂಲ ಹೇಳಿದ ಮೊದಲ ಡಾಕ್ಟರ್‌ಗೆ ಗೂಗಲ್ ನಮನ

|
Google Oneindia Kannada News

ನವ ದೆಹಲಿ, ಮಾರ್ಚ್ 20: ಕೊರೊನಾ ವೈರಸ್‌ ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಕೈಗಳನ್ನು ಆಗಾಗ ತೊಳೆದುಕೊಳ್ಳಬೇಕು ಎಂದು ತಿಳಿಸಲಾಗುತ್ತಿದೆ. ಕನ್ನಡದ ನಟಿಯರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚಾಲೆಂಜ್‌ ಕೂಡ ಮಾಡುತ್ತಿದ್ದಾರೆ. ಆದರೆ, ಈ ರೀತಿ ಕೈ ತೊಳೆಯುವುದರ ಆಗುವ ಪ್ರಯೋಜನಗಳನ್ನು ಮೊದಲು ತಿಳಿಸಿದ್ದು, ಡಾಕ್ಟರ್ ಇಗ್ನಾಝ್ ಸೆಮ್ಮೆಲ್.

300 ಜನರನ್ನು ಸಂಪರ್ಕಿಸಿದ್ದ ಕೊಡಗಿನ ಕೊರೊನಾ ಪೀಡಿತ300 ಜನರನ್ನು ಸಂಪರ್ಕಿಸಿದ್ದ ಕೊಡಗಿನ ಕೊರೊನಾ ಪೀಡಿತ

ಇಗ್ನಾಝ್ ಸೆಮ್ಮೆಲ್ ಹಂಗೇರಿಯ ಬುಡಾಪೆಸ್ಟ್ ವೈದ್ಯರು. ಕೈ ತೊಳೆಯುವುದರ ಆಗುವ ವೈದ್ಯಕೀಯ ಅನುಕೂಲಗಳನ್ನು ಇವರೇ ಮೊದಲು ಕಂಡು ಹಿಡಿದರು. ಸೂಕ್ಷ್ಮಣು ಜೀವಿಗಳು ಕೈನಲ್ಲಿ ಇರುತ್ತದೆ. ಹಾಗಾಗಿ ಕೈ ತೊಳೆಯಬೇಕು. ಕೈ ತೊಳೆಯದೆ ಇದ್ದರೆ, ಆಗುವ ತೊಂದರೆಗಳನ್ನು ವಿವರಿಸಿದ್ದರು.

Google Pays Tribute to Dr Ignaz Semmelweis

ಕೊರೊನಾ ವೈರಸ್ ವಿರುದ್ಧ ವಿಶ್ವವೇ ಹೋರಾಟ ಮಾಡುತ್ತಿರುವ ಈ ಸಮಯದಲ್ಲಿ ಇಗ್ನಾಝ್ ಸೆಮ್ಮೆಲ್ ಅವರ ಬಗ್ಗೆ ಗೂಗಲ್ ಮಾಹಿತಿ ಹಂಚಿಕೊಂಡಿದೆ. ಗೂಗಲ್ ಡೂಡಲ್ ಮೂಲಕ ನಮನ ಸಲ್ಲಿಸಿದೆ. 'ಗೂಗಲ್‌' ಮೇಲೆ ಕ್ಲಿಕ್ ಮಾಡಿದರೆ, ಸಣ್ಣದೊಂದು ವಿಡಿಯೋ ಪ್ಲೇ ಆಗುತ್ತದೆ. 50 ಸೆಕೆಂಡ್‌ನ ಈ ವಿಡಿಯೋ ಮೂಲಕ ಹೇಗೆ ಕೈತೊಳೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.

ಕೊರೊನಾ: ಹಲವು ರೈಲು ರದ್ದು ಮಾಡಿದ ನೈಋತ್ಯ ರೈಲ್ವೆಕೊರೊನಾ: ಹಲವು ರೈಲು ರದ್ದು ಮಾಡಿದ ನೈಋತ್ಯ ರೈಲ್ವೆ

Google Pays Tribute to Dr Ignaz Semmelweis

1847ರಲ್ಲಿ ವಿಯೆನ್ನಾದ ಜನರಲ್ ಆಸ್ಪತ್ರೆಯಲ್ಲಿ ಇಗ್ನಾಝ್ ಸೆಮ್ಮೆಲ್ ಚೀಫ್ ರೆಸಿಡೆಂಟ್ ಆಗಿ ಕೆಲಸ ಮಾಡಿದ್ದಾರೆ. ಈ ಸಮಯದಲ್ಲಿ ಕೈ ತೊಳೆಯುವುದರ ಅನುಕೂಲವನ್ನು ತಿಳಿಸಿದ್ದಾರೆ. ರೋಗಿಗಳ ಹಾಗೂ ಬಾಣಂತಿಯರ ಚಿಕಿತ್ಸೆಗೆ ಮೊದಲು ಕೈ ತೊಳೆಯುವುದು ಎಷ್ಟು ಮುಖ್ಯ ಎಂದು ವಿವರಿಸಿದ್ದಾರೆ.

English summary
Google Pays Tribute to Dr Ignaz Semmelweis who discover benefits of hand washing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X