ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಬಸ್ ಎ380 ವಿಮಾನಗಳ ಉತ್ಪಾದನೆ ಅಂತ್ಯ, 2021ಕ್ಕೆ ಕೊನೆಯ ವಿಮಾನ

|
Google Oneindia Kannada News

ನವದೆಹಲಿ, ಫೆಬ್ರವರಿ 14: ಜಗತ್ತಿನ ಅತಿದೊಡ್ಡ ಪ್ರಯಾಣಿಕ ವಿಮಾನ ಏರ್‌ಬಸ್ ಎ380 ವಿಮಾನಗಳ ಉತ್ಪಾದನೆಯನ್ನು ಏರ್‌ಬಸ್ ಕಂಪನಿ ನಿಲ್ಲಿಸುತ್ತಿದೆ.

A380 ಗರಿಷ್ಠ ಸೀಟ್ ಸಾಮರ್ಥ್ಯ 800. ಇಂಧನ ಕ್ಷಮತೆಯ 2 ಎಂಜಿನ್ ವಿಮಾನಗಳು ಅಭಿವೃದ್ಧಿ ಹಾಗೂ ಅವುಗಳು ಧೀರ್ಘ ಪ್ರಯಾಣ ಮಾಡಲು ಸಮರ್ಥವಾಗಿರುವ ಕಾರಣ ಬಿಳಿಯಾನೆ ಎ380ಗೆ ಅಂತ್ಯ ಹಾಡಲಾಗುತ್ತಿದೆ.

Goodbye, gentle giant: Airbus to end production of A

2021ಕ್ಕೆ ಕೊನೆಯ ಎ380 ವಿಮಾನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಈ ಸುದ್ದಿ ಕೇಳಿ ಸಾಕಷ್ಟು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಎ380 ವಿಮಾನದಲ್ಲಿ ಹೋಗುವಾಗ ಉತ್ತಮ ಅನುಭವ ದೊರೆತಿದೆ. ಉತ್ಪಾದನೆ ನಿಲ್ಲಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಕೊನೆಯದಾಗಿ ಬರ್ಮಿಂಗ್‌ಹ್ಯಾಮ್‌ ಏರ್‌ಪೋರ್ಟ್‌ಗೆ ಪ್ರಯಾಣ ಬೆಳೆಸಿದ್ದೆ ಎಂದು ಪ್ರಯಾಣಿಕರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಹಲವು ವರ್ಷಗಳಿಂದ ಈ ವಿಮಾನ ಹಾರಾಟ ಮಾಡುತ್ತಿದೆ. ನಾಲ್ಕು ಎಂಜಿನ್ ವಿಮಾನದ ಯುಗ ಕಳೆಯಿತು ಹಾಗಾಗಿ ಉತ್ಪಾದನೆ ನಿಲ್ಲಿಸುತ್ತಿದ್ದೇವೆ ಎಂದು ಏರ್‌ಬಸ್‌ನ ರೈನರ್ ಓಲರ್ ತಿಳಿಸಿದ್ದಾರೆ.

English summary
Airbus will stop delivery of the worlds largest commercial airliner-the double decker A380 in 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X