ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾವ್! ಮತ್ತೆ ಭಾರತೀಯರ ಹೊಟ್ಟೆ ಸೇರಲಿದೆ ಮ್ಯಾಗಿ?

By Vanitha
|
Google Oneindia Kannada News

ನವದೆಹಲಿ, ಜು, 02 : ಮ್ಯಾಗಿ ಪ್ರಿಯರಿಗೊಂದು ಸಿಹಿ ಸುದ್ದಿ. ಏನು ಅಂತ ಗೊತ್ತಾಯ್ತಾ! ಏನು ಇಲ್ಲಾರೀ, ಮ್ಯಾಗಿ ಮತ್ತೆ ಭಾರತೀಯ ಮಾರುಕಟ್ಟೆಗೆ ಬರುತ್ತಿದೆ. ಕೊನೆಗೂ ವಿವಾದಕ್ಕೀಡಾಗಿದ್ದ ಮ್ಯಾಗಿ ಈಗ ನಿರಂಬಳವಾಗಿ ಉಸಿರಾಡುವಂತಾಗಿದೆ.

ಮ್ಯಾಗಿಯಲ್ಲಿ ಹೆಚ್ಚಿನ ವಿಷಕಾರಿ ಅಂಶ ಇದೆ ಎಂದು ಒಂದು ತಿಂಗಳ ಹಿಂದೆಯಷ್ಟೇ ಬ್ಯಾನ್ ಮಾಡಿದ್ದರು. ನಾನಾ ಕಡೆಗಳಿಂದ ಸ್ಯಾಂಪಲ್ ತರಿಸಿಕೊಂಡು ಎಲ್ಲಾ ರೀತಿಯ ಪರೀಕ್ಷೆಗಳನ್ನು ಮುಗಿಸಿಕೊಂಡಿರುವ ಮ್ಯಾಗಿ ಪುನಃ ಮಾರುಕಟ್ಟೆಗೆ ಕಾಲಿಟ್ಟು ಬಿಜಿ ಮಂದಿ ಹಾಗೂ ಮಕ್ಕಳಲ್ಲಿದ್ದ ಬೇಸರವನ್ನು ಕಡಿಮೆ ಮಾಡಿದೆ [ಭಾರತದಿಂದ ಮ್ಯಾಗಿ ಆಮದು ನಿಷೇಧಿಸಿದ ಆಸ್ಟ್ರೇಲಿಯಾ]

Good news for Maggi Lovers: Maggi is likely to return to market soon, here's how

ಸುಮಾರು 320 ಕೋಟಿ ನಷ್ಟ ಅನುಭವಿಸಿರುವ ನೆಸ್ಲೆ ಕಂಪನಿ ಆಹಾರದಲ್ಲಿ ಸುರಕ್ಷತೆ ವಿಚಾರದಲ್ಲಿ ಹಲವಾರು ಟೀಕೆಗಳನ್ನು ಎದುರಿಸಿದ ಬಳಿಕ ಎಫ್‌ಎಸ್‌ಎಸ್‌ಎಐ (FSSAI) ಕಡಿಮೆ ಪ್ರಮಾಣದ ಸೀಸ ಮತ್ತು ಮೊನೋಸೋಡಿಯಂ ಬಳಸಬೇಕೆಂದು ಆದೇಶ ಹೊರಡಿಸಿದೆ. ಸುಮಾರು ದಿನಗಳ ಬಳಿಕ ಫುಡ್ ಸ್ಟಾಂಡರ್ಡ್ ಏಜೆನ್ಸಿ (FSA) ಬುಧವಾರ ಜು.1 ರಂದು ಭಾರತದಲ್ಲಿ ಕ್ಲೀನ್ ಚೀಟ್ ನೀಡಿದೆ.

ವಿಯೆಟ್ನಾಂ ಫುಡ್ ಅಡ್ಮಿನಿಸ್ಟ್ರೇಷನ್(VFA) ನ್ಯಾಷನಲ್ ಮೆಶರ್ಮೆಂಟ್ ಇನ್ ಸ್ಟಿಟ್ಯೂಟ್ ಇನ್ ಆಸ್ಟ್ರೇಲಿಯಾ ಮತ್ತು ಸಿಂಗಪೂರಿನ ಅಗ್ರಿ ಫುಡ್ ಮತ್ತು ವೆಟರ್ನರಿ ಅಥಾರಿಟಿ (AVA) ಸಂಸ್ಥೆಗಳು ಭಾರತದಲ್ಲಿ ಮ್ಯಾಗಿಗೆ ಹೇರಿದ್ದ ನಿಷೇಧವನ್ನು ತೆಗೆದುಹಾಕಿ 'ಕಂಪ್ಲೀಟ್ಲಿ ಸೇಫ್ ಈಟ್' ಎಂದು ಹೇಳಿದೆ.

ನೆಸ್ಲೆ ಕಂಪನಿಯು ಎಫ್‌ಎಸ್‌ಎಗೆ ಭಾರತವು ಮ್ಯಾಗಿಗೆ ಬೇಕಾದ ಮಸಾಲೆಯನ್ನು ಯುಕೆಯಿಂದ ತರಿಸಿಕೊಳ್ಳಲಾಗುತ್ತಿತ್ತು ಎಂದಿದೆ. ಮ್ಯಾಗಿಯಲ್ಲಿ ತಲೆದೋರಿದ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಸ್ಥಳೀಯ ಇನ್ನಿತರೆಗಳಿಂದ ಸುಮಾರು 900 ಪ್ಯಾಕೆಟ್‌ಗಳನ್ನು ತರಿಸಿಕೊಳ್ಳಲಾಗಿತ್ತು ಎಂದು ತಿಳಿಸಿದೆ.

English summary
Maggi lovers across the country will be happy to know that their favourite noodle may return to Indian market.Days after recalling the instant noodles from market in India, Nestle finally can heave a sigh of relief. UK's food regulator Food Standards Agency (FSA) on Wednesday, July 1 gave a clean chit to NestNestle for Maggi manufactured in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X