ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲುಗಳಲ್ಲಿ ಬೀರುವ ಗಬ್ಬು ವಾಸನೆಗೆ ಫುಲ್ ಸ್ಟಾಪ್

By Vanitha
|
Google Oneindia Kannada News

ನವದೆಹಲಿ, ಜುಲೈ, 18 : ನಾವು ರೈಲಿನಲ್ಲಿ ಪ್ರಯಾಣಿಸುವಾಗ ಒಮ್ಮೆಯಾದರೂ ವಾಕರಿಸಿರುತ್ತೇವೆ. ಇಲ್ಲಾ ಅಂದ್ರೆ ಮೂಗು ಮುಚ್ಚಿಕೊಂಡು ನಮ್ಮ ಊರು ಯಾವಾಗ ಬರುತ್ತೋ ಎಂದು ಕಾಯ್ತಾ ಕೂತಿರುತ್ತೇವೆ. ಇದಕ್ಕೆಲ್ಲಾ ಕಾರಣ ರೈಲಿನಲ್ಲಿ ಗಬ್ಬು ನಾರುವ ಶೌಚಾಲಯ.

ಇನ್ನು ಮುಂದೆ ಗಬ್ಬು ವಾಸನೆಗೆ ವಿರಾಮ ನೀಡುವ ಸಲುವಾಗಿ ರೈಲುಗಳಲ್ಲಿ ಕೆಟ್ಟ ವಾಸನೆ ಬೀರುತ್ತಿರುವ ಶೌಚಾಲಯದ ಜಾಗದಲ್ಲಿ ವ್ಯಾಕ್ಯುಮ್ ಶೌಚಾಲಯ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಜನರ ಆರೋಗ್ಯ ದೃಷ್ಟಿಯಿಂದ ಈ ವ್ಯವಸ್ಥೆ ರೂಪಿಸುತ್ತಿದ್ದು, ಆಗಸ್ಟ್ ತಿಂಗಳ ಕೊನೆಯಲ್ಲಿ ಸ್ವಮುಕ್ತ್ ವೇಸ್ಟ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ವತಿಯಿಂದ ಈ ಯೋಜನೆ ಜಾರಿಗೆ ಬರಲಿದೆ ಎಂದು ಡಿಆರ್ ಎಂ ಹೇಳಿದರು.[ಪಬ್ಲಿಕ್ ಟಾಯ್ಲೆಟ್ ನಿರ್ಮಾಣದಲ್ಲಿ ಕರ್ನಾಟಕ ನಂ.5]

Good news from Railways: Vaccum toilets may soon replace dirty ones

ಸ್ವಚ್ಚತೆ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಹಲವಾರು ರೀತಿಯ ದೂರುಗಳು ರೈಲ್ವೆ ನಿಲ್ದಾಣ ಕಛೇರಿಗೆ ದಾಖಲಾಗುತ್ತಲೇ ಇತ್ತು. ಹಳೆ ಪದ್ದತಿಯ ಶೌಚಾಲಯಗಳಿಂದ ಜನರು ಯಾವಾಗಲೂ ಅಸಮಾಧಾನ ತಾಳುತ್ತಿದ್ದರಲ್ಲದೆ, ರೈಲ್ವೆ ಟ್ರಾಕ್‌ಗಳು ತುಕ್ಕುಹಿಡಿದು ದೀರ್ಘಕಾಲ ಬಾಳಿಕೆ ಬರುವುದೇ ಕಷ್ಟಕರವಾಗಿತ್ತು. ಆದ್ದರಿಂದ ಈ ಯೋಜನೆಗೆ ಮುಂದಾಗಿದ್ದೇವೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.

ವ್ಯಾಕ್ಯೂಮ್ ಶೌಚಾಲಯ ಸೀಟುಗಳನ್ನು ಯುಎಸ್ಎ ಯಿಂದ ತರಿಸಿಕೊಂಡಿರುವುದರ ಜೊತೆಯಲ್ಲಿ ಇದಕ್ಕೆ ಅಲ್ಪ ನೀರು ಮತ್ತು ವಿದ್ಯುತ್ ಶಕ್ತಿಗೂ ಕಡಿಮೆ ವೆಚ್ಚ ತಗುಲಲಿದೆ. ಇದರ ಸ್ವಚ್ಚಕಾರ್ಯವೂ ಹೊರೆ ಆಗಲಾರದು ಎಂದು ಅಧಿಕಾರಿಗಳು ಶೌಚಾಲಯ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.

English summary
Sticking toilets will soon be replaced with vacuum toilets.Beginning from New Delhi, the pilot project will cover the main railway stations.The 1st vacuum toilet will be ready by August end and a private firm 'Swamukt Waste Energy Private Limited has been roped by the project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X