ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾರುಖ್ ಖಾನ್ ಗೆ ಯುಎಸ್ ನಿಂದ ಬಂದ ಶುಭ ಸಂದೇಶ

By Mahesh
|
Google Oneindia Kannada News

ನವದೆಹಲಿ, ಸೆ. 15: ಭಾರತೀಯ ರಾಜಕಾರಣಿಗಳಿಗೆ, ಸೆಲೆಬ್ರಿಟಿಗಳಿಗೆ ಅಮೆರಿಕದ ವಿಮಾನ ನಿಲ್ದಾಣದಿಂದ ಶುಭ ಸಂದೇಶ ಬಂದಿದೆ. ವಿಮಾನ ನಿಲ್ದಾಣದಲ್ಲಿ ಭದ್ರತಾ 'ಚೆಕ್ಕಿಂಗ್ ಕಿರಿಕಿರಿ' ಯಿಂದ ಅನೇಕ ಸೆಲೆಬ್ರಿಟಿಗಳಿಗೆ ಮುಕ್ತಿ ಸಿಗುವ ದಿನಗಳು ಮುಂದೆ ಬರಲಿದೆ. ಈ ಬಗ್ಗೆ ಒಪ್ಪಂದಕ್ಕೆ ಯುಎಸ್ ಸರ್ಕಾರ ಮುಂದಾಗಿದೆ.

ಈ ಹಿಂದೆ ದಿವಂಗತ ಡಾ. ಅಬ್ದುಲ್ ಕಲಾಂ, ಪ್ರಫುಲ್ ಪಟೇಲ್, ನಟ ಶಾರುಖ್ ಖಾನ್, ಅಮೀರ್ ಖಾನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳನ್ನು ಶಂಕಿತರಂತೆ ಭದ್ರತಾ ಸಿಬ್ಬಂದಿಗಳು ತಪಾಸಣೆ ನಡೆಸಿ ಮುಜುಗರಕ್ಕೀಡು ಮಾಡಿದ್ದ ಪ್ರಸಂಗ ನಡೆದಿತ್ತು. ಈ ಬಗ್ಗೆ ಭಾರಿ ಚರ್ಚೆ ನಡೆದಿತ್ತು.

Good News for Shahrukh Khan

ಈಗ ಯುಎಸ್ ಸರ್ಕಾರ ಹಾಗೂ ಭಾರತ ಸರ್ಕಾರದ ನಡುವೆ ವಿಶೇಷ ಒಪ್ಪಂದ ಏರ್ಪಡುವ ಸಾಧ್ಯತೆ ಕಂಡು ಬಂದಿದ್ದು, ಪ್ರಧಾನಿ, ಅಧ್ಯಕ್ಷರು ಸೇರಿದಂತೆ ಸೆಲೆಬ್ರಿಟಿಗಳ ಪಟ್ಟಿಯ ತಯಾರಿಸಲಾಗುತ್ತಿದೆ. ಪಟ್ಟಿಯಲ್ಲಿ ಅಮಿತಾಬ್ ಬಚ್ಚನ್ ಹಾಗೂ ಶಾರುಖ್ ಖಾನ್ ಹೆಸರು ಮೊದಲಿಗೆ ಸೇರಿಸಲಾಗಿದೆ. ಭಾರತ ಸರ್ಕಾರದ ಜೊತೆ ಪರಾಮರ್ಶನೆ ನಂತರ ಸೆಲೆಬ್ರಿಟಿಗಳ ಹೆಸರನ್ನು ಸೇರಿಸಲಾಗುತ್ತದೆ.

ಉಳಿದಂತೆ ರಾಜಕಾರಣಿಗಳ ಪೈಕಿ ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರನ್ನು ಸೇರಿಸಲಾಗಿದೆ. ಈ ಹಿಂದೆ ಶಾರುಖ್ ಖಾನ್ ಅವರನ್ನು 2012ರಲ್ಲಿ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಿದ್ದಲ್ಲದೆ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. 2011ರಲ್ಲಿ ಯುಎಸ್ ಗೆ ತೆರಳಿದ್ದ ಕಲಾಂ ಅವರು ಭಾರತಕ್ಕೆ ಮರಳುವಾಗ ಇದೇ ರೀತಿ ಕಿರಿಕಿರಿ ಅನುಭವಿಸಿದ್ದರು. (ಒನ್ ಇಂಡಿಯಾ ಸುದ್ದಿ)

English summary
Many Indian politicians and celebrities earlier had landed in trouble while dealing with security at airports in US. The list includes people such as Dr Abdul Kalam, Praful Patel, Shahrukh Khan, Aamir Khan and many more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X