ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತಮ ಆಡಳಿತ: ಕರ್ನಾಟಕಕ್ಕೆ 3 ನೇ ಸ್ಥಾನ..!

|
Google Oneindia Kannada News

ನವದೆಹಲಿ, ಡಿಸೆಂಬರ್ 26: ದೇಶದಲ್ಲಿ ಉತ್ತಮ ಆಡಳಿತ ನಡೆಸುವ ರಾಜ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಉತ್ತಮ ಆಡಳಿತ ಸೂಚ್ಯಂಕ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ದೊರೆತಿದೆ.

ಸಮಗ್ರ ಆಡಳಿತ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನ ಗಳಿಸಿದ್ದರೆ, ಮಹಾರಾಷ್ಟ್ರ ಎರಡನೇ ಸ್ಥಾನ ಗಳಿಸಿದೆ. ಇನ್ನು ವಲಯವಾರು ಸಾಧನೆಗಳಲ್ಲಿ ಆರ್ಥಿಕ ಅರ್ಥಿಕ ಆಡಳಿತದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ ಲಭಿಸಿದೆ.

ಕೇಂದ್ರ ಸರ್ಕಾರಕ್ಕೆ ಶಹಬ್ಬಾಶ್ ಎಂದ ಯೋಗ ಗುರು ರಾಮ್ ದೇವ್!ಕೇಂದ್ರ ಸರ್ಕಾರಕ್ಕೆ ಶಹಬ್ಬಾಶ್ ಎಂದ ಯೋಗ ಗುರು ರಾಮ್ ದೇವ್!

ರಾಜ್ಯಗಳ ಸಾಧನೆ ಆಧಾರದ ಮೇಲೆ ಉತ್ತಮ ಆಡಳಿತ ಸೂಚ್ಯಂಕ ತಯಾರು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಅವಧಿಯಲ್ಲಿಯೇ ನಿರ್ಧರಿಸಲಾಗಿತ್ತು, ಆದರೆ ಅದು ಈ ವರ್ಷ ಜಾರಿಗೆ ತರಲಾಗಿದೆ.

Good Governance: 3rd Place For Karnataka

ವರದಿ ಸಿದ್ದಪಡಿಸುವ ಸಮಯದಲ್ಲಿ ಒಟ್ಟು 10 ವಲಯಗಳು, 50 ಸೂಚಿಗಳನ್ನು ಮಾನದಂಡವಾಗಿ ಇಟ್ಟುಕೊಳ್ಳಲಾಗಿತ್ತು. ಶಿಕ್ಷಣ, ಆರೋಗ್ಯ, ಆರ್ಥಿಕ ಪ್ರಗತಿ, ಪರಿಸರ ಸಂರಕ್ಷಣೆ, ಕಾನೂನು ಸೇವೆಗಳು ಸಾರ್ವಜನಿಕರಿಗೆ ಹೇಗೆ ತಲುಪುತ್ತವೆ ಎಂಬುದನ್ನು ಪರಿಗಣಿಸಿ ಅಳೆಯಲಾಗಿದೆ.

ಕೇಂದ್ರ ಸರ್ಕಾರಕ್ಕೂ ಈ ಸಿಎಂಗೂ ಎಣ್ಣೆ-ಸೀಗೆಕಾಯಿ ಸಂಬಂಧ!ಕೇಂದ್ರ ಸರ್ಕಾರಕ್ಕೂ ಈ ಸಿಎಂಗೂ ಎಣ್ಣೆ-ಸೀಗೆಕಾಯಿ ಸಂಬಂಧ!

ಕೇಂದ್ರ ಸರ್ಕಾರ ಸಿದ್ದಪಡಿಸಿರುವ ವರದಿಯನ್ವಯ ಕರ್ನಾಟಕವು ಆರ್ಥಿಕ ಪ್ರಗತಿಯಲ್ಲಿ 1ನೇ ಸ್ಥಾನ, ಕಾನೂನು ಸೇವೆಯಲ್ಲಿ 7, ಪರಿಸರ ಸಂರಕ್ಷಣೆಯಲ್ಲಿ 7, ವಾಣಿಜ್ಯ ವಿಭಾಗದಲ್ಲಿ 9, ಆರೋಗ್ಯ ಕ್ಷೇತ್ರದಲ್ಲಿ 9, ಮೂಲ ಸೌಕರ್ಯ ವಿಭಾಗದಲ್ಲಿ 10, ಸಮಾಜ ಕಲ್ಯಾಣ ಕ್ಷೇತ್ರದಲ್ಲಿ 10, ಕೃಷಿ ವಲಯದಲ್ಲಿ 12, ಮಾನವ ಸಂಪನ್ಮೂಲದಲ್ಲಿ 13 ನೇ ಸ್ಥಾನ ಗಳಿಸಿದೆ.

ಸಮಗ್ರ ಆಡಳಿತ ವಿಭಾಗದಲ್ಲಿ ಕ್ರಮವಾಗಿ ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಛತ್ತೀಸಗಡ, ಆಂಧ್ರಪ್ರದೇಶ ಮತ್ತು ಗುಜರಾತ್ ಇವೆ. ಈಶಾನ್ಯ ರಾಜ್ಯ ವಲಯದ ಪೈಕಿ ಕ್ರಮವಾಗಿ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ತ್ರಿಪುರ ಮೊದಲ ಮೂರು ಸ್ಥಾನ ಗಳಿಸಿವೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಪಾಂಡಿಚೇರಿ, ಚಂಡೀಗಡ ಮತ್ತು ದೆಹಲಿ ಮೊದಲ ಮೂರು ಸ್ಥಾನ ಗಳಿಸಿವೆ.

English summary
This is the first time the central government has released the Good Governance Index for identifying and encouraging good governance states in the country. Karnataka take third Place In this Index.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X