ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನ, ಬೆಳ್ಳಿ ಮತ್ತಷ್ಟು ದುಬಾರಿ: ಆಭರಣ ಪ್ರಿಯರು ಕಂಗಾಲು

|
Google Oneindia Kannada News

ನವದೆಹಲಿ, ಜುಲೈ 19: ಆಷಾಢದಲ್ಲಿಯೂ ಹಳದಿ ಲೋಹ ದುಬಾರಿಯಾಗುವುದು ಮುಂದುವರಿದಿದೆ. ಆಭರಣ ಪ್ರಿಯರ ಪಾಲಿಗೆ ಚಿನ್ನ ಜೇಬಿಗೆ ಮತ್ತಷ್ಟು ಕತ್ತರಿ ಹಾಕುವ ತಲೆನೋವಾಗಿ ಪರಿಣಮಿಸಿದೆ. ಚಿನ್ನ ಮತ್ತು ಬೆಳ್ಳಿಗಳೆರಡರ ದರದಲ್ಲಿಯೂ ಏರಿಕೆಯಾಗಿದೆ.

ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ, ಒಂದೇ ದಿನ 930 ರು ಹೆಚ್ಚಳ ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ, ಒಂದೇ ದಿನ 930 ರು ಹೆಚ್ಚಳ

ಜಾಗತಿಕ ಮಟ್ಟದಲ್ಲಿ ಚಿನ್ನ ಬೆಳ್ಳಿಯು ದುಬಾರಿಯಾಗುತ್ತಿರುವುದು ದೇಶಿ ಮಾರುಕಟ್ಟೆಯ ಮೇಲೆಯೂ ಪರಿಣಾಮ ಬೀರುತ್ತಿದೆ. ಆಷಾಢ ಮುಗಿಡ ಬಳಿಕ ಶುಭ ಸಮಾರಂಭಗಳು ಹೆಚ್ಚಾಗಿ ನಡೆಯಲಿವೆ. ಈ ಸಂದರ್ಭಕ್ಕೆ ಆಭರಣ ಖರೀದಿಯ ಉತ್ಸಾಹದಲ್ಲಿರುವ ಜನರನ್ನು ಬೆಲೆ ಏರಿಕೆ ಕಂಗಾಲಾಗಿಸಿದೆ.

ದೇಶದ ಪ್ರಮುಖ ಮಹಾನಗರಗಳಲ್ಲಿ ಚಿನ್ನವು 10 ಗ್ರಾಂಗೆ 300 ರೂ.ನಂತೆ ಏರಿಕೆಯಾಗಿದೆ. ಚಿನ್ನಾಭರಣಕ್ಕೆ ವರ್ತಕರಿಂದ ಬೇಡಿಕೆ ಹೆಚ್ಚುತ್ತಿದೆ. ಅದರ ಜತೆಯಲ್ಲಿಯೇ ಬೆಲೆಯೂ ಮೇಲ್ಮುಖವಾಗಿ ಸಾಗುತ್ತಿದೆ.

gold and silver jewel prices hiked in metro cities

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 35,252 ರೂಪಾಯಿಗೆ ಮುಟ್ಟಿದ್ದರೆ, ಮುಂಬೈನಲ್ಲಿ 35,057 ರೂ. ತಲುಪಿದೆ. ದೆಹಲಿಯಲ್ಲಿ ದರ ಇನ್ನಷ್ಟು ಹೆಚ್ಚಳವಾಗಿದ್ದು, 35,950 ರೂ.ಗೆ ಹೆಚ್ಚಳ ಕಂಡಿದೆ.

ಆಭರಣಗಾರರಿಂದ ತಗ್ಗಿದ ಬೇಡಿಕೆ, ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ ಆಭರಣಗಾರರಿಂದ ತಗ್ಗಿದ ಬೇಡಿಕೆ, ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ

ಬೆಳ್ಳಿ ದರದಲ್ಲಿ ಕೆಜಿಗೆ 500 ರೂ.ನಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ದರ 41,200 ರೂಪಾಯಿ ಇದೆ. ಮುಂಬೈನಲ್ಲಿ 40,585 ರೂ. ಬೆಲೆ ಇದೆ. ಕೈಗಾರಿಕಾ ಘಟಕಗಳು ಮತ್ತು ನಾಣ್ಯ ತಯಾರಕರಿಂದ ಬೇಡಿಕೆ ಹೆಚ್ಚಾಗುತ್ತಿದ್ದು, ಬೆಲೆಯಲ್ಲಿಯೂ ಹೆಚ್ಚಳವಾಗುತ್ತಿದೆ.

English summary
Gold price was hiked Rs 300 per 10 Grams in Indian Market. Silver price increased up to Rs 500 per KG.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X