ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್‌ನಲ್ಲಿ ಟಾಪ್ ಟ್ರೆಂಡ್ ಆಯಿತು #GoBackTrump

|
Google Oneindia Kannada News

ಅಹಮದಾಬಾದ್, ಫೆಬ್ರವರಿ 24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಅವರು ಇಂದು ಗುಜರಾತ್‌ನಿಂದ ತಮ್ಮ ಪ್ರವಾಸವನ್ನು ಆರಂಭಿಸಲಿದ್ದಾರೆ.

ಆದರೆ, ಟ್ರಂಪ್ ಭಾರತ ಪ್ರವಾಸವನ್ನು ಹಲವರು ವಿರೋಧಿಸುತ್ತಿದ್ದು, #GoBackTrump ಎನ್ನುವ ಟ್ವಿಟ್ಟರ್ ಹ್ಯಾಶ್‌ಟ್ಯಾಗ್ ಇಂದು ಟಾಪ್ ಟ್ರೆಂಡಿಂಗ್ ಆಗಿದೆ. 'ಡೊನಾಲ್ಡ್ ಟ್ರಂಪ್ ವಾಪಸ್ ಹೋಗು, ಭಾರತಕ್ಕೆ ಬರಬೇಡ' ಎಂದು ನೆಟ್ಟಿಗರು ಟ್ರಂಪ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ನಮಸ್ತೆ ಟ್ರಂಪ್': ಅಮೆರಿಕಾ ಅಧ್ಯಕ್ಷರಿಗೆ ಖುಷಿ, ಭರವಸೆಗಳು ಹುಸಿ'ನಮಸ್ತೆ ಟ್ರಂಪ್': ಅಮೆರಿಕಾ ಅಧ್ಯಕ್ಷರಿಗೆ ಖುಷಿ, ಭರವಸೆಗಳು ಹುಸಿ

ಟ್ರಂಪ್ ಭೇಟಿಯ ಬಗ್ಗೆ ನೆಟ್ಟಿಗರು ಚಿತ್ರ ವಿಚಿತ್ರ ಟ್ರೋಲ್‌ಗಳನ್ನು, ಮೆಮ್‌ಗಳನ್ನು ಪೋಸ್ಟ್‌ ಮಾಡಿ, ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳದಿದ್ದಾರೆ.

ಒಂದು ನಿಮಿಷಕ್ಕೆ 55 ಲಕ್ಷ ರುಪಾಯಿ ಖರ್ಚು

ಒಂದು ನಿಮಿಷಕ್ಕೆ 55 ಲಕ್ಷ ರುಪಾಯಿ ಖರ್ಚು

ಮಜಾರ್ ಆರ್ಯನ್‌ ಎನ್ನುವರು ಟ್ರಂಪ್ ಭಾರತಕ್ಕೆ ಏಕೆ ಭೇಟಿ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿ, ಭಾರತ ಸರ್ಕಾರ ಟ್ರಂಪ್ ಭೇಟಿಗಾಗಿ ಪ್ರತಿ ನಿಮಿಷಕ್ಕೆ 55 ಲಕ್ಷ ರುಪಾಯಿ ಖರ್ಚು ಮಾಡುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ರಂಪ್ ಒಂದೇ ರೀತಿ. ಇಬ್ಬರೂ ತಮ್ಮ ಚುನಾವಣಾ ಪ್ರಚಾರಕ್ಕೋಸ್ಕರ ಗಿಮಿಕ್ ನಡೆಸಿದ್ದಾರೆ ಎಂದು ಛೇಡಿಸಿದ್ದಾರೆ.

ಚುನಾವಣಾ ಪ್ರಚಾರಕ್ಕೋಸ್ಕರ ಗಿಮಿಕ್

ಚುನಾವಣಾ ಪ್ರಚಾರಕ್ಕೋಸ್ಕರ ಗಿಮಿಕ್

ಬಹುತೇಕರು ಗುಜರಾತ್‌ನಲ್ಲಿ ಸ್ಲಂಗಳನ್ನು ಮರೆಮಾಚಲು ಗೋಡೆ ಕಟ್ಟಿರುವ ಬಗ್ಗೆ ಮೋದಿ ಹಾಗೂ ಟ್ರಂಪ್ ಕಾಲೆಳದಿದ್ದಾರೆ. ಭಾರತದ ಬಗ್ಗೆ ಟ್ರಂಪ್‌ಗೆ ತಪ್ಪು ತೋರಿಸಲಾಗುತ್ತಿದೆ. ಹೀಗಾಗಿ ಮೋದಿಯವರ ಕಪಟ ನಾಟಕವನ್ನು ತಿರಸ್ಕರಿಸಿ ಟ್ರಂಪ್ ವಾಪಸ್ ಹೋಗಬೇಕು ಎಂದು ಹಲವರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ವಿರೋಧಿಗಳು ಎಂದೂ ಬದಲಾಗುವುದಿಲ್ಲ

ವಿರೋಧಿಗಳು ಎಂದೂ ಬದಲಾಗುವುದಿಲ್ಲ

ಆದರೆ, ಇನ್ನೂ ಕೆಲವರು ಟ್ರಂಪ್‌ರನ್ನು ಸ್ವಾಗತಿಸಿ, #GoBackTrump ಎಂದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೋದಿ ವಿರೋಧಿಗಳು ಎಂದೂ ಬದಲಾಗುವುದಿಲ್ಲ. ಮೋದಿಗೋಸ್ಕರ ಟ್ರಂಪ್‌ರನ್ನು ಗೋ ಬ್ಯಾಕ್ ಎನ್ನುತ್ತಿದ್ದಾರೆ. ಗೋ ಬ್ಯಾಕ್ ಟ್ರಂಪ್ ಎನ್ನುವರಿಗೆ ಗೋ ಬ್ಯಾಕ್ ಪಾಕಿಸ್ತಾನ್, ಗೋ ಬ್ಯಾಕ್ ಅರಬ್, ಗೋ ಬ್ಯಾಕ್ ಟರ್ಕಿ ಎಂದು ತಿರುಗೇಟು ನೀಡಿದ್ದಾರೆ.

ಟ್ರಂಪ್ ಭೇಟಿಗೆ ಕ್ಷಣಗಣನೆ

ಟ್ರಂಪ್ ಭೇಟಿಗೆ ಕ್ಷಣಗಣನೆ

ಡೊನಾಲ್ಡ್ ಟ್ರಂಪ್ ಭಾರತ ಆಗಮನಕ್ಕೆ ಕ್ಷಣಗಣನೇ ಆರಂಭವಾಗಿದೆ. ಅವರನ್ನು ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್ ವಿಮಾನ ನಿಲ್ದಾಣ ತಲುಪಿದ್ದು ಮೊಟೆರಾ ಕ್ರಿಕೆಟ್ ಮೈದಾನ ಸಂಪೂರ್ಣ ಸಿಂಗಾರಗೊಂಡಿದೆ. ಸುಮಾರು ಒಂದು ಲಕ್ಷ ಜನರ ಮುಂದೆ ಟ್ರಂಪ್ ಭಾಷಣ ಮಾಡಲಿದ್ದಾರೆ.

English summary
#GoBackTrump Top Trend In Twitter. Many Peoples oppose the trump India Visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X