ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವಿಗೇಷನ್ ಚಾರ್ಟ್ ಮರೆತು ಬ್ಯಾಂಕಾಕ್‌ಗೆ ಹೊರಟ ವಿಮಾನ ಆಮೇಲೇನಾಯ್ತು?

|
Google Oneindia Kannada News

ನವದೆಹಲಿ, ಆಗಸ್ಟ್ 17: ದೆಹಲಿಯಿಂದ ಆಗಷ್ಟೇ ಆಗಸಕ್ಕೆ ಜಿಗಿದಿದ್ದ ವಿಮಾನ ಕೆಲವೇ ಕ್ಷಣಗಳಲ್ಲಿ ಯು ಟರ್ನ್ ತೆಗೆದುಕೊಂಡು ಮತ್ತೆ ದೆಹಲಿಗೆ ಬಂದಿದ್ದು, ಕೆಲಕಾಲ ಆತಂಕ ಸೃಷ್ಟಿಸಿತ್ತು.

ದೆಹಲಿಯಿಂದ ಬ್ಯಾಂಕಾಕ್‌ಗೆ ಹೊರಟಿದ್ದ ಗೋ ಏರ್ ವಿಮಾನದ ಪೈಲಟ್ ನಾವಿಗೇಷನ್ ಚಾರ್ಟ್ ಮರೆತು ಹೋಗಿದ್ದ ಪರಿಣಾಮ ಅರ್ಧದೂರ ಹೋಗಿ ಮತ್ತೆ ದೆಹಲಿಗೆ ಬಂದಿದೆ.

ವಿಮಾನವನ್ನು ಜೋಳದ ಗದ್ದೆಗಿಳಿಸಿ 233 ಜನರ ಪ್ರಾಣ ಉಳಿಸಿದ 'ಹೀರೋ' ಪೈಲಟ್ ವಿಮಾನವನ್ನು ಜೋಳದ ಗದ್ದೆಗಿಳಿಸಿ 233 ಜನರ ಪ್ರಾಣ ಉಳಿಸಿದ 'ಹೀರೋ' ಪೈಲಟ್

ಗೋ ಏರ್ ಎ320 ವಿಮಾನವು 146 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಬ್ಯಾಕಾಂಕ್‌ಗೆ ತೆರಳುತ್ತಿತ್ತು. ಆದರೆ ಹೊರಡುವ ಮೊದಲು ಪರಿಶೀಲಿಸಿಕೊಳ್ಳದೆ, ಅರ್ಧ ದೂರ ಹೋದ ಮೇಲೆ, ನಾವಿಗೇಷನ್ ಚಾರ್ಟ್ ಇಲ್ಲ ಎಂದು ದೆಹಲಿಗೆ ವಾಪಸ್ ಬಂದಿದೆ.

GoAir Forgets Navigation Charts Makes U turn To Delhi

ಎಲ್ಲಾ ವಿಮಾನವು ನಾವಿಗೇಷನ್ ಚಾರ್ಟನ್ನು ಹೊಂದುವುದು ಕಡ್ಡಾಯವಾಗಿದೆ. ಆದರೂ ಅವರು ಹೇಗೆ ಮರೆತು ಹೋಗಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ.

ಈ ಹೊಸ ವಿಮಾನವನ್ನು ಕೆಲವೇ ದಿನಗಳ ಹಿಂದೆ ಗೋ ಏರ್ ಗೆ ಹಸ್ತಾಂತರಿಸಲಾಗಿತ್ತು. ಇದೇ ಮೊದಲ ಬಾರಿಗೆ ಬ್ಯಾಂಕಾಂಕ್‌ಗೆ ತೆರಳುತ್ತಿತ್ತು.146 ಮಂದಿಯನ್ನು ಸುರಕ್ಷಿತವಾಗಿ ತಲುಪಿಸಲಾಯಿತು.

English summary
GoAir Forgets Navigation Charts Makes U turn To Delhi, A GoAir flight to Bangkok with 146 passengers on board had to return to Delhi soon after taking off as the crew forgot to take navigation chart with them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X