ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ದೆಹಲಿಯಿಂದ ಹೊರಟ ಮತ್ತೊಂದು ಗೋ ಫಸ್ಟ್ ವಿಮಾನದಲ್ಲಿ ತೊಂದರೆ

|
Google Oneindia Kannada News

ನವದೆಹಲಿ, ಜುಲೈ 20: A320neo ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾರಣ ದೆಹಲಿಯಿಂದ ಗುವಾಹಟಿಗೆ ಹೋಗುತ್ತಿದ್ದ ಗೋ ಫಸ್ಟ್ ವಿಮಾನವನ್ನು ಜೈಪುರಕ್ಕೆ ತಿರುಗಿಸಲಾಗಿದೆ ಎಂದು ವಾಯುಯಾನ ನಿಯಂತ್ರಕ ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಗೋ ಫಸ್ಟ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಮೂರನೇ ಘಟನೆ ಇದಾಗಿದೆ. ಮಂಗಳವಾರ ಕೂಡ ಗೋ ಫಸ್ಟ್‌ನ ಮುಂಬೈ-ಲೇಹ್ ಮತ್ತು ಶ್ರೀನಗರ-ದೆಹಲಿ ವಿಮಾನಗಳು ಎಂಜಿನ್ ಸಮಸ್ಯೆಗಳನ್ನು ಎದುರಿಸಿದ್ದವು.

ಗೋ ಫಸ್ಟ್ ವಿಮಾನಗಳಲ್ಲಿ ದೋಷಗಳು ಕಂಡು ಬರುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಂಗಳವಾರವಷ್ಟೇ ಎರಡೂ ವಿಮಾನಗಳು ತುರ್ತು ಭೂಸ್ಪರ್ಷವಾದ ಕಾರಣ ತನಿಖೆ ನಡೆಸಲಾಗುತ್ತಿದ್ದು, (ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ) DGCA ಯಿಂದ ಅನುಮತಿ ದೊರೆತ ಬಳಿಕ ಮಾತ್ರ ವಿಮಾನಗಳು ಮತ್ತೆ ಹಾರಾಟ ನಡೆಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Go First flight was diverted to Jaipur after the aircraft windshield cracked mid-air

ಕಳೆದ ತಿಂಗಳಲ್ಲಿ ಹಾರಿಸಿರುವ ವಿಮಾನಗಳಲ್ಲಿ ಅನೇಕ ತಾಂತ್ರಿಕ ದೋಷಗಳು ಕಂಡು ಬಂದಿವೆ. ಕಳೆದ ಮೂರು ದಿನಗಳಲ್ಲಿ, ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸುರಕ್ಷತಾ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ವಿಮಾನಯಾನ ಸಂಸ್ಥೆಗಳು ಮತ್ತು ಅವರ ಸಚಿವಾಲಯದ ಅಧಿಕಾರಿಗಳು ಮತ್ತು DGCA ಅಧಿಕಾರಿಗಳೊಂದಿಗೆ ಅನೇಕ ಸಭೆಗಳನ್ನು ನಡೆಸಿದ್ದಾರೆ.

ಪ್ರಯಾಣಿಕರ ಸುರಕ್ಷತೆಗೆ ಅಡ್ಡಿಯಾಗುವ ಸಣ್ಣ ದೋಷವನ್ನು ಸಹ ಕೂಲಂಕಷವಾಗಿ ತನಿಖೆ ಮಾಡಿ ಸರಿಪಡಿಸಲಾಗುವುದು. ಪ್ರಯಾಣಿಕರ ಸುರಕ್ಷತೆಯು ಅತಿಮುಖ್ಯವಾಗಿದೆ ಎಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ವಿಮಾನಗಳ ಪ್ರತಿ ನಿರ್ಗಮನದ ಮೊದಲು, ವಿಮಾನ ನಿರ್ವಹಣಾ ಎಂಜಿನಿಯರ್ (AME) ಮೂಲಕ ವಿಮಾನವನ್ನು ಪರಿಶೀಲಿಸಲಾಗುತ್ತದೆ ಮತ್ತು ಪ್ರಮಾಣೀಕರಿಸಲಾಗುತ್ತದೆ. DGCA ಈಗ ಅರ್ಹ AME ಸಿಬ್ಬಂದಿಯ ನಿಯೋಜನೆಯ ಕುರಿತು ವಿಮಾನಯಾನ ಸಂಸ್ಥೆಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಜುಲೈ 28 ರೊಳಗೆ ಅದನ್ನು ಅನುಸರಿಸಲು ನಿರ್ದೇಶನ ನೀಡಿದೆ.

ಎರಡು ದಿನಗಳ ಹಿಂದೆ, ಶಾರ್ಜಾದಿಂದ ಹೈದರಾಬಾದ್‌ಗೆ ಹೊರಟ್ಟಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಬಂದ ನಂತರ ಪಾಕಿಸ್ತಾನಕ್ಕೆ ತಿರುಗಿಸಲಾಗಿತ್ತು. ವಿಮಾನವು ಕರಾಚಿಯಲ್ಲಿ ಮುನ್ನೆಚ್ಚರಿಕೆಯಾಗಿ ಲ್ಯಾಂಡಿಂಗ್ ಮಾಡಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಜುಲೈ 14 ರಂದು, ದೆಹಲಿಯಿಂದ ವಡೋದರಾಗೆ ಹಾರುತ್ತಿದ್ದ ಇಂಡಿಗೋ ವಿಮಾನವನ್ನು ವಿಮಾನದ ಎಂಜಿನ್‌ಗಳಲ್ಲಿ ದೋಷ ಕಾಣಿಸಿಕೊಂಡ ನಂತರ ಮುನ್ನೆಚ್ಚರಿಕೆಯಿಂದ ಜೈಪುರಕ್ಕೆ ತಿರುಗಿಸಲಾಗಿತ್ತು.

English summary
Go First flight heading from Delhi - Guwahati was diverted to Jaipur after the A320neo aircraft's windshield cracked mid-air.know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X