• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕಾ ಅಧ್ಯಕ್ಷರ ಪುತ್ರಿಗೆ ಭಾರತೀಯ ಟ್ವಿಟ್ಟಿಗರಿಂದ ಮಂಗಳಾರತಿ!

|

ನವದೆಹಲಿ, ಮೇ.24: ಭಾರತ ಲೌಕ್ ಡೌನ್ 4.0 ನಡುವೆ ಅನಾರೋಗ್ಯ ಪೀಡಿತ ತಂದೆಯನ್ನು ಸೈಕಲ್ ನಲ್ಲಿ ಕೂರಿಸಿಕೊಂಡು ಏಳು ದಿನದಲ್ಲಿ 1,200 ಕಿಲೋ ಮೀಟರ್ ಕ್ರಮಿಸಿದ 15 ವರ್ಷದ ಜ್ಯೋತಿ ಕುಮಾರಿ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜ್ಯೋತಿ ಕುಮಾರಿ ತಂದೆ ಬಗ್ಗೆ ತೋರಿದ ಕಾಳಜಿಯನ್ನು ಸುಂದರಿ ಪ್ರೀತಿ ಎಂದು ವರ್ಣಿಸಿರುವ ಇವಾಂಕಾ ಟ್ರಂಪ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟಿಗರು ಮಂಗಳಾರತಿ ಎತ್ತುತ್ತಿದ್ದಾರೆ. ಜಮ್ಮು-ಕಾಶ್ಮೀರ ಮಾಜಿ ಸಿಎಂ ಉಮರ್ ಅಬ್ದುಲ್ಲಾ, ಮಾಜಿ ಕೇಂದ್ರ ಸಚಿವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಕೂಡಾ ಕಿಡಿ ಕಾರಿದ್ದಾರೆ.

ಅಪ್ಪನನ್ನು ಕೂರಿಸಿ 1200 ಕಿ.ಮಿ ಸೈಕಲ್ ತುಳಿದ ಯುವತಿಗೆ ಭರ್ಜರಿ ಆಫರ್

ಕೇಂದ್ರ ಸರ್ಕಾರದ ದಿವ್ಯ ನಿರ್ಲಕ್ಷ್ಯ ಹಾಗೂ ನಿಷ್ಕಾಳಜಿಯನ್ನು ಅರ್ಥ ಮಾಡಿಕೊಳ್ಳುವ ಬದಲು ಬಡತವನ್ನೇ ಪ್ರೀತಿ ಎಂದು ಬಿಂಬಿಸುತ್ತಿದ್ದಾರೆ. ಇದರಿಂದ ಅವರಲ್ಲಿ ಸೂಕ್ಷ್ಮತೆ ಅರಿವು ಇಲ್ಲದಿರುವದು ಸ್ಪಷ್ಟವಾಗಿ ಎದ್ದು ಕಾಣುತ್ತದೆ ಎಂದು ಇವಾಂಕಾ ಟ್ರಂಪ್ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಇವಾಂಕಾ ಟ್ರಂಪ್ ವಿರುದ್ಧ ಉಮರ್ ಅಬ್ದುಲ್ಲಾ ಟ್ವೀಟ್

15 ವರ್ಷದ ಬಾಲಕಿಯು ರೋಮಾಂಚಕ ಅನುಭವ ಪಡೆಯುವ ಉದ್ದೇಶದಿಂದ ತನ್ನ ತಂದೆಯನ್ನು ಸೈಕಲ್ ನಲ್ಲಿ ಕೂರಿಸಿಕೊಂಡು 1200 ಕಿಲೋ ಮೀಟರ್ ಕ್ರಮಿಸಲಿಲ್ಲ. ಆ ಬಾಲಕಿಯ ಬಡತನ ಮತ್ತು ಹತಾಶೆಯನ್ನೇ ಥ್ರಿಲ್ ಗಾಗಿ ಮಾಡಿರುವಂತೆ ವೈಭವೀಕರಿಸಲಾಗುತ್ತಿದೆ. ಸರ್ಕಾರದ ವೈಫಲ್ಯವನ್ನೇ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ದೊಡ್ಡ ಸಾಧನೆ ಎನ್ನುವಂತೆ ಹೇಳುತ್ತಿದ್ದಾರೆ ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಇವಾಂಕಾ ಟ್ರಂಪ್ ವಿರುದ್ಧ ಕಾರ್ತಿ ಚಿದಂಬರಂ ಕಿಡಿ

ಅಮೆರಿಕಾ ಅಧ್ಯಕ್ಷರ ಪುತ್ರಿ ಇವಾಂಕಾ ಟ್ರಂಪ್ ಟ್ವೀಟ್ ಗೆ ಕಾರ್ತಿ ಚಿದಂಬರಂ ಕಿಡಿ ಕಾರಿದ್ದು, ಜ್ಯೋತಿ ಕುಮಾರಿಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ. ಉಷ್ಕೃಷ್ಟ ಸಾಧನೆಗಾಗಿ ಆಕೆ ಆ ಕೆಲಸವನ್ನು ಮಾಡಲಿಲ್ಲ. ಬದಲಿಗೆ ದೇಶದಲ್ಲಿ ಅಸ್ತಿತ್ವದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ತೋರಿದ ದಿವ್ಯ ನಿರ್ಲಕ್ಷ್ಯದಿಂದ ಹತಾಶೆಗೊಂಡು ಈ ರೀತಿ ಸೈಕಲ್ ನಲ್ಲಿ ತವರು ಸೇರುವಂತಾಗಿದೆ ಎಂದು ಕಾರ್ತಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.

ತಂದೆಯನ್ನು ಕೂರಿಸಿ 1200 ಕಿ.ಮೀ ಸೈಕಲ್ ತುಳಿದ ಯುವತಿಗೆ ಇವಾಂಕಾ ಟ್ರಂಪ್ ಮೆಚ್ಚುಗೆ

ಸರ್ಕಾರದ ದೌರ್ಬಲ್ಯ ಯುವತಿಯ ಬಡತನ ಕಾಣುತ್ತಿಲ್ಲವೇ?

ಸರ್ಕಾರದ ದೌರ್ಬಲ್ಯ ಯುವತಿಯ ಬಡತನ ಕಾಣುತ್ತಿಲ್ಲವೇ?

ಸಾಮಾಜಿಕ ಜಾಲತಾಣಗಳಲ್ಲೂ ಇವಾಂಕಾ ಟ್ರಂಪ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅನಾರೋಗ್ಯ ಪೀಡಿತ ತಂದೆಯನ್ನು ಸೈಕಲ್ ನಲ್ಲಿ ಕುಳ್ಳರಿಸಿಕೊಂಡು 1,200 ಕಿಲೋ ಮೀಟರ್ ಸಂಚರಿಸಿದ್ದು ಯಾವುದೇ ಸಾಧನೆ ಮಾಡುವುದಕ್ಕಲ್ಲ. ಈ ಸೂಕ್ಷ್ಮತೆಯನ್ನು ಮೊದಲು ಅರ್ಥ ಮಾಡಿಕೊಳ್ಳಿ. ಸರ್ಕಾರದ ವೈಫಲ್ಯ ಮತ್ತು ಆಕೆಯ ಬಡತನವನ್ನೇ ಸಾಧನೆ ಎನ್ನುವಂತೆ ಬಿಂಬಿಸುವುದು ತರವಲ್ಲ ಎಂದು ಟ್ವೀಟಿಗರು ಸಾಲು ಸಾಲಾಗಿ ಕೆಂಡ ಕಾರುತ್ತಿದ್ದಾರೆ.

ಅಮೆರಿಕಾ ಅಧ್ಯಕ್ಷರ ಪುತ್ರಿ ಟ್ವೀಟ್ ನಲ್ಲಿ ಇರುವುದೇನು?

15 ವರ್ಷದ ಜ್ಯೋತಿ ಕುಮಾರಿ ಅನಾರೋಗ್ಯಕ್ಕೆ ತುತ್ತಾದ ತನ್ನ ತಂದೆಯನ್ನು ಸೈಕಲ್ ನಲ್ಲಿ ಕೂರಿಸಿಕೊಂಡು ಏಳು ದಿನಗಳಲ್ಲೇ 1,200ಕ್ಕೂ ಹೆಚ್ಚು ಕಿಲೋ ಮೀಟರ್ ದೂರದಲ್ಲಿರುವ ತಮ್ಮ ಸ್ವಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಇದು ಭಾರತೀಯರಲ್ಲಿ ಇರುವ ಸುಂದರ ಪ್ರೀತಿ ಹಾಗೂ ಸಹಿಷ್ಣುತೆಯ ಸಾಧನೆ ಎಂದು ಇವಾಂಕಾ ಟ್ರಂಪ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನ್ನು 22.8K ಜನರು ರೀ ಟ್ವೀಟ್ ಮಾಡಿದ್ದು, 9.3K ಜನರು ಕಾಮೆಂಟ್ ಮಾಡಿದ್ದಾರೆ. 107 ಮಂದಿ ಈ ಟ್ವೀಟ್ ನ್ನು ಲೈಕ್ ಮಾಡಿದ್ದಾರೆ.

ತಂದೆ-ಮಗಳ ಸೈಕಲ್ ಜರ್ನಿ ಘಟನೆಯ ಹಿನ್ನೆಲೆ

ತಂದೆ-ಮಗಳ ಸೈಕಲ್ ಜರ್ನಿ ಘಟನೆಯ ಹಿನ್ನೆಲೆ

ಆಟೋರಿಕ್ಷಾ ಚಾಲಕರಾಗಿದ್ದ 15 ವರ್ಷದ ಬಾಲಕಿ ಜ್ಯೋತಿ ಕುಮಾರಿ ಅವರ ತಂದೆಗೆ ಭಾರತ ಲಾಕ್ ಡೌನ್ 4.0 ಹಿನ್ನೆಲೆ ದುಡಿಮೆ ಇರಲಿಲ್ಲ. ಇದರ ಮಧ್ಯೆ ಅನಾರೋಗ್ಯಕ್ಕೆ ತುತ್ತಾದ ತಂದೆ ಹಾಗೂ ತಾನು ಹೊತ್ತಿನ ಊಟಕ್ಕೂ ಪರಿತಪಿಸುವಂತಾ ಪರಿಸ್ಥಿತಿ ಎದುರಾಯಿತು. ಇದರಿಂದ ಹತಾಶೆಕೊಂಡ ಜ್ಯೋತಿ ಕುಮಾರಿ ಸೆಕೆಂಡ್ ಹ್ಯಾಂಡ್ ಸೈಕಲ್ ವೊಂದನ್ನು ಖರೀಸಿದರು. ನಂತರ ಅದೇ ಸೈಕಲ್ ನಲ್ಲಿ ನವದೆಹಲಿಯಿಂದ ಬಿಹಾರದ ದರ್ಬಾಂಗ್ ವರೆಗೂ ಕ್ರಮಿಸಿದರು.

ಏಳು ದಿನಗಳಲ್ಲಿ 1,200 ಕಿಲೋ ಮೀಟರ್ ಸೈಕಲ್ ತುಳಿದ ಜ್ಯೋತಿ ಕುಮಾರಿ ಅವರಿಗೆ ಸೈಕಲ್ ಫೆಡರೇಷನ್ ಆಫ್ ಇಂಡಿಯಾ ಆಫರ್ ವೊಂದನ್ನು ಕೊಟ್ಟಿದೆ. ಜ್ಯೋತಿಕುಮಾರಿ ಸೈಕ್ಲಿಂಗ್ ಟ್ರಯಲ್ಸ್ ಪಾಸ್ ಮಾಡಿದರೆ, ದೆಹಲಿಯ ಇಂದಿರಾ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿರುವ 'ಸ್ಟೇಟ್ ಆಫ್‌ ದ ಆರ್ಟ್ ನ್ಯಾಷನಲ್' ಸೈಕ್ಲಿಂಗ್ ಅಕಾಡೆಮಿಯಲ್ಲಿ ಅಭ್ಯಾಸಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಮುಖ್ಯಸ್ಥ ಓಂಕಾರ್ ಸಿಂಗ್ ತಿಳಿಸಿದ್ದರು. ಇದೇ ಸುದ್ದಿಯನ್ನು ಅಮೆರಿಕಾ ಅಧ್ಯಕ್ಷರ ಪುತ್ರಿ ಇವಾಂಕಾ ಟ್ರಂಪ್ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

English summary
Bihar: Girl Goes With Her Father In Cycle Is Not for Achievement, Outrage against Ivanka Trump on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more