ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆತ್ತ ಮಗು ತಾಯಿಯ ಮಡಿಲು ಸೇರಲು 2,000 ರೂಪಾಯಿ ಲಂಚ!

|
Google Oneindia Kannada News

ನವದೆಹಲಿ, ಡಿಸೆಂಬರ್.04: ಸರ್ಕಾರಿ ಆಸ್ಪತ್ರೆಗಳಲ್ಲಿ ಕಾಸು ಬಿಚ್ಚಿದರೆ ಮಾತ್ರ ಕೆಲಸ ಆಗುತ್ತೆ ಎಂಬ ಆರೋಪಗಳು ಮೊದಲಿನಿಂದಲೂ ಇವೆ. ವೈದ್ಯಕೀಯ ಚಿಕಿತ್ಸೆ, ಇಂಜೆಕ್ಷನ್, ಔಷಧಿ ಮತ್ತು ತಪಾಸಣೆಗಳೆಲ್ಲ ಓಕೆ. ಆದರೆ ನವದೆಹಲಿಯಲ್ಲಿ ಇದೆಲ್ಲವನ್ನೂ ಮೀರಿಸುವಂತಾ ಘಟನೆಯೊಂದು ವರದಿಯಾಗಿದೆ.

ಹೆತ್ತ ತಾಯಿ ತನ್ನ ಮಗುವನ್ನು ಪಡೆದುಕೊಳ್ಳಲು ಆಸ್ಪತ್ರೆ ಸಿಬ್ಬಂದಿಗೆ 2,000 ರೂಪಾಯಿ ಲಂಚ ನೀಡಿರುವುದಾಗಿ ಆರೋಪಿಸಿದ್ದಾರೆ. ಘಜಿಯಾಬಾದ್ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಂಥದೊಂದು ಘಟನೆ ನಡೆದಿದೆ. ತಾಯಿಗೆ ವೈದ್ಯಕೀಯ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಬಗ್ಗೆ ಆರೋಪಿಸಿದ ಸಂದರ್ಭದಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಭ್ರಷ್ಟಾಚಾರದಲ್ಲಿ ಭಾರತವು ಏಷ್ಯಾದಲ್ಲೇ ನಂಬರ್ 1: ಸಮೀಕ್ಷೆಭ್ರಷ್ಟಾಚಾರದಲ್ಲಿ ಭಾರತವು ಏಷ್ಯಾದಲ್ಲೇ ನಂಬರ್ 1: ಸಮೀಕ್ಷೆ

ಘಜಿಯಾಬಾದ್ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಯು ಆಗಷ್ಟು ಜನಿಸಿದ ಮಗುವನ್ನು ತಾಯಿಗೆ ನೀಡಲು ಹಣದ ಬೇಡಿಕೆ ಇಟ್ಟಿದ್ದರು. 3,000 ರೂಪಾಯಿ ನೀಡಿದರಷ್ಟೇ ಮಗುವನ್ನು ಕೊಡುವುದಾಗಿ ಹೇಳಿದ್ದರು. ಕುಟುಂಬ ಸದಸ್ಯರು ಅಂತಿಮವಾಗಿ 2,000 ರೂಪಾಯಿ ಹಣ ನೀಡಿದ ನಂತರವಷ್ಟೇ ಮಗುವನ್ನು ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

Ghaziabad Govt Hospital Staff Seeks Rs.2000 Bribe For Give Newly Born Baby To Family: Mother Allegation

ಮಹಿಳೆ ಆರೋಪದ ಬಗ್ಗೆ ಸಂಪೂರ್ಣ ತನಿಖೆ:

ಹೆತ್ತ ಮಗುವನ್ನು ತಾಯಿಗೆ ನೀಡಲು ವೈದ್ಯಕೀಯ ಸಿಬ್ಬಂದಿಯು ಹಣದ ಬೇಡಿಕೆಯಿಟ್ಟಿರುವ ಬಗ್ಗೆ ತಮಗೆ ಯಾವುದೇ ರೀತಿ ಮಾಹಿತಿಯಿಲ್ಲ ಎಂದು ಘಜಿಯಾಬಾದ್ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಸಂಗೀತಾ ಗೋಯೆಲ್ ತಿಳಿಸಿದ್ದಾರೆ. ಈಗಷ್ಟೇ ಪ್ರಕರಣವು ತಮ್ಮ ಗಮನಕ್ಕೆ ಬಂದಿದೆ. ಮಹಿಳೆ ಆರೋಪದ ಬಗ್ಗೆ ಸಂಪೂರ್ಣ ಘಟನೆಯ ತನಿಖೆ ನಡೆಸಿದ ನಂತರದಲ್ಲಿ ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

English summary
Ghaziabad Govt Hospital Staff Seeks Rs.2000 Bribe For Give Newly Born Baby To Family, Allegation By Mother.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X