• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬದಿಂದ ಯಾರು ಸ್ಪರ್ಧೆಗಿಲ್ಲ!

|
Google Oneindia Kannada News

ನವದೆಹಲಿ, ಸೆ. 23: ಗಾಂಧಿ ಕುಟುಂಬದಿಂದ ಯಾರೂ ಪಕ್ಷದ ಮುಖ್ಯಸ್ಥರಾಗಬಾರದು ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಗೆಹ್ಲೋಟ್ ಶುಕ್ರವಾರ ತಿಳಿಸಿದರು.

ರಾಜಸ್ಥಾನ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರು ಪಕ್ಷದ ಉನ್ನತ ಹುದ್ದೆಗೆ ಸ್ಪರ್ಧಿಸಲಿದ್ದಾರೆ ಎಂದು ಶುಕ್ರವಾರ ಖಚಿತಪಡಿಸಿದ್ದಾರೆ.

ಎಐಸಿಸಿ ಅಧ್ಯಕ್ಷರ ಚುನಾವಣೆಗೆ ಅಧಿಸೂಚನೆ: ಅಗತ್ಯವಿದ್ದರೆ ಅ.17ಕ್ಕೆ ಮತದಾನಎಐಸಿಸಿ ಅಧ್ಯಕ್ಷರ ಚುನಾವಣೆಗೆ ಅಧಿಸೂಚನೆ: ಅಗತ್ಯವಿದ್ದರೆ ಅ.17ಕ್ಕೆ ಮತದಾನ

"ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನನ್ನ ಸ್ಪರ್ಧೆ ನಿರ್ಧಾರವಾಗಿದೆ. ನಾನು ಶೀಘ್ರದಲ್ಲೇ ನಾಮಪತ್ರ ಸಲ್ಲಿಸಲು ದಿನಾಂಕವನ್ನು ನಿಗದಿಪಡಿಸುತ್ತೇನೆ. ದೇಶದ ಪ್ರಸ್ತುತ ಸ್ಥಿತಿಯಲ್ಲಿ ಪ್ರತಿಪಕ್ಷಗಳು ಬಲಗೊಳ್ಳುವ ಅವಶ್ಯಕತೆಯಿದೆ" ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದರು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕೇರಳದಲ್ಲಿ ಭೇಟಿಯಾಗಿ ನಿನ್ನೆ ಸಂಜೆ "ಭಾರತ್ ಜೋಡೋ ಯಾತ್ರೆ" ಗೆ ಜೊತೆಯಾಗಿದ್ದರು.

ಈ ಬಗ್ಗೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಗೆಹ್ಲೋಟ್, "ಗಾಂಧಿ ಕುಟುಂಬದ ಯಾರೂ ಕಾಂಗ್ರೆಸ್‌ಗೆ ಮುಂದಿನ ಮುಖ್ಯಸ್ಥರಾಗಬಾರದು" ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.

"ಕಾಂಗ್ರೆಸ್ ಅಧ್ಯಕ್ಷರಾಗಿ ಮರಳುವ ಎಲ್ಲರ ಆಶಯವನ್ನು ಸ್ವೀಕರಿಸಲು ನಾನು ಅವರಿಗೆ ಹಲವಾರು ಬಾರಿ ವಿನಂತಿಸಿದೆ. ಗಾಂಧಿ ಕುಟುಂಬದ ಯಾರೂ ಮುಂದಿನ ಮುಖ್ಯಸ್ಥರಾಗಬಾರದು ಎಂದು ಅವರು ನಿರ್ಧರಿಸಿರುವುದಾಗಿ ಅವರು ನನಗೆ ಹೇಳಿದರು" ಎಂದು ಹಿರಿಯ ನಾಯಕ ಗೆಹ್ಲೋಟ್ ಸುದ್ದಿಗಾರರಿಗೆ ತಿಳಿಸಿದರು.

"ರಾಹುಲ್ ಜೀ ನನಗೆ ಹೇಳಿದರು "ನಾನು ಮುಖ್ಯಸ್ಥರಾಗಬೇಕೆಂದು ನೀವು ಬಯಸುತ್ತಿರುವುದು ನನಗೆ ತಿಳಿದಿದೆ ಮತ್ತು ನಿಮ್ಮ ಆಶಯಗಳನ್ನು ನಾನು ಗೌರವಿಸುತ್ತೇನೆ. ಆದರೆ ನಾನು ಒಂದು ಕಾರಣಕ್ಕಾಗಿ, ಗಾಂಧಿಯೇತರರು ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂದು ನಿರ್ಧರಿಸಿದ್ದೇನೆ" ಎಂದಿದ್ದಾರೆ ಎಂದು ಗೆಹ್ಲೋಟ್ ಹೇಳಿದರು.

English summary
Rajasthan Chief Minister Ashok Gehlot confirms he will be running for Congress president poll, no one from the Gandhi family won't run. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X