ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿವಾಲ್‌ಗೆ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ ಗೌತಮ್ ಗಂಭೀರ್

|
Google Oneindia Kannada News

ನವದೆಹಲಿ, ಮೇ 10: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್,ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ, ಪೂರ್ವ ದೆಹಲಿ ಆಪ್ ಅಭ್ಯರ್ಥಿ ಐತಿಶಿಗೆ ಮಾನನಷ್ಟ ಮೊಕದ್ದಮೆ ಹೂಡಲು ಕ್ರಿಕೆಟಿಗ ಗೌತಮ್ ಗಂಭೀರ್ ನೋಟಿಸ್ ಜಾರಿ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದ ಆಪ್ ಅಭ್ಯರ್ಥಿ ಐತಿಶಿ ವಿರುದ್ಧ ಅವಹೇಳನಕಾರಿ ಕರಪತ್ರವನ್ನು ಗೌತಮ್ ಗಂಭೀರ್ ಹಂಚಿದ್ದಾರೆ ಎಂದು ನೋಟಿಸ್ ಪಡೆದ ಮೂರು ನಾಯಕರು ಆರೋಪಿಸಿದ್ದರು.

ಅಭ್ಯರ್ಥಿ ಅವಹೇಳನೆ ಆರೋಪ: ಗೌತಮ್ ಗಂಭೀರ್ ಪ್ರತಿ ಸವಾಲುಅಭ್ಯರ್ಥಿ ಅವಹೇಳನೆ ಆರೋಪ: ಗೌತಮ್ ಗಂಭೀರ್ ಪ್ರತಿ ಸವಾಲು

ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಗೌತಮ್ ಗಂಭೀರ್ ಆರೋಪ ಸಾಭೀತುಪಡಿಸಿದಲ್ಲಿ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಇಲ್ಲವಾದರೆ ಕೇಜ್ರಿವಾಲ್ ರಾಜಕೀಯ ನಿವೃತ್ತಿ ಪಡೆಯಲಿ ಎಂದು ಸವಾಲೆಸೆದಿದ್ದರು.

Gautam Gambhir sends defamation notice to Arvind Kejriwal

ಟ್ವೀಟ್‌ನಲ್ಲಿ ಅರವಿಂದ್ ಕೇಜ್ರಿವಾಲ್ ವರಿದ್ಧ ಕಿಡಿಕಾರಿದ ಬಳಿಕ ಮಾನನಷ್ಟ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡಿರುವ ಗಂಭೀರ್ ಹೇಳಿಕೆ ಕುರಿತು ವಿವರಣೆ ನೀಡಿ ಎಂದು ಲೀಗಲ್ ನೋಟಿಸ್ ನೀಡಿದ್ದಾರೆ.

ಮುಫ್ತಿ ವಿರುದ್ಧ ಗೌತಿ ಟ್ವೀಟ್ ವಾರ್, ಮೋದಿ ಸುನಾಮಿ ಎಚ್ಚರಿಕೆಮುಫ್ತಿ ವಿರುದ್ಧ ಗೌತಿ ಟ್ವೀಟ್ ವಾರ್, ಮೋದಿ ಸುನಾಮಿ ಎಚ್ಚರಿಕೆ

ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಗಂಭೀರ್ ಹಾಗೂ ಐತಿಶಿ ನಡುವಿನ ಸ್ಪರ್ಧೆ ಕಾವೇರುತ್ತಿದ್ದಂತೆ ದಿನದಿಂದ ದಿನಕ್ಕೆ ವೈಯಕ್ತಿಕ ಆರೋಪಗಳು ಹೆಚ್ಚುತ್ತಿವೆ.

English summary
Chief Minister Arvind Kejriwal, Delhi Deputy Chief Minister Manish Sisodia and AAP's Lok Sabha candidate Atishi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X