ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಪ್ರಭಾವಕ್ಕೊಳಗಾಗಿ ಬಿಜೆಪಿ ಸೇರ್ಪಡೆ: ಗಂಭೀರ್

|
Google Oneindia Kannada News

Recommended Video

Lok Sabha Elections 2019 : ಬಿಜೆಪಿ ಸೇರಲು ಇರುವ ಹಿಂದಿನ ಕಾರಣವನ್ನ ಬಯಲು ಮಾಡಿದ ಗೌತಮ್ ಗಂಭೀರ್

ನವದೆಹಲಿ, ಮಾರ್ಚ್ 22: ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದಿಂದ ಪ್ರಭಾವಿತರಾಗಿ ತಾವು ಬಿಜೆಪಿ ಸೇರ್ಪಡೆಯಾಗಿರುವುದಾಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

'ನರೇಂದ್ರ ಮೋದಿ ಅವರ ದೃಷ್ಟಿಕೋನದ ಪ್ರಭಾವಕ್ಕೆ ಒಳಗಾಗಿದ್ದೇನೆ. ಕ್ರಿಕೆಟ್ ಕ್ಷೇತ್ರಕ್ಕೆ ಒಂದಷ್ಟು ಕೊಡುಗೆ ನೀಡಿದ್ದೇನೆ. ಈಗ ದೇಶಕ್ಕಾಗಿ ಮತ್ತಷ್ಟು ಕೆಲಸ ಮಾಡುವ ಭರವಸೆ ಹೊಂದಿದ್ದೇನೆ' ಎಂದು 37 ವರ್ಷದ ಗಂಭೀರ್, ಪಕ್ಷ ಸೇರ್ಪಡೆ ಬಳಿಕ ತಿಳಿಸಿದರು.

ಬಿಜೆಪಿ ಸೇರ್ಪಡೆಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ಬಿಜೆಪಿ ಸೇರ್ಪಡೆಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್

ಈ ವೇಳೆ ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ, 'ಗಂಭೀರ್ ವೃತ್ತಿ ಬದುಕಿನಲ್ಲಿ ಅಮೋಘ ಪ್ರದರ್ಶನ ತೋರಿಸಿದ್ದಾರೆ. ಪಕ್ಷವು ಅವರ ಪ್ರತಿಭೆಯನ್ನು ಬಳಸಿಕೊಳ್ಳುವ ವಿಶ್ವಾಸದಲ್ಲಿದೆ. ಅವರ ಪ್ರತಿಭೆಯಿಂದ ಬಿಜೆಪಿಗೆ ಲಾಭವಾಗಲಿದೆ' ಎಂದರು.

Gautam Gambhir said he was impressed by narendra modis vision

ಗಂಭೀರ್ ಅವರು ದೆಹಲಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ ಎಂಬ ಪ್ರಶ್ನೆಗೆ, ಪಕ್ಷದ ಚುನಾವಣಾ ಸಮಿತಿ ಅದನ್ನು ನಿರ್ಧರಿಸಲಿದೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆ ಸ್ಪರ್ಧೆಗೆ ಒಲ್ಲೆ ಎಂದ ವಿರೇಂದ್ರ ಸೆಹ್ವಾಗ್ಲೋಕಸಭೆ ಚುನಾವಣೆ ಸ್ಪರ್ಧೆಗೆ ಒಲ್ಲೆ ಎಂದ ವಿರೇಂದ್ರ ಸೆಹ್ವಾಗ್

'ಮೋದಿಯಿಂದ ಪ್ರಭಾವಿತೆ'
ಇತ್ತೀಚೆಗಷ್ಟೇ ಬಿಜೆಪಿ ಸೇರಿಕೊಂಡಿರುವ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವಕ್ಕೆ ಒಳಗಾಗಿ ಪಕ್ಷವನ್ನು ಸೇರಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ 2019: ಬಿಜೆಪಿಯ ಮೊದಲ ಪಟ್ಟಿಯಲ್ಲಿ ಅಚ್ಚರಿಲೋಕಸಭೆ ಚುನಾವಣೆ 2019: ಬಿಜೆಪಿಯ ಮೊದಲ ಪಟ್ಟಿಯಲ್ಲಿ ಅಚ್ಚರಿ

ಕಳೆದ ವರ್ಷ ಪತಿ ರವೀಂದ್ರ ಜಡೇಜಾ ಅವರೊಂದಿಗೆ ಪ್ರಧಾನಿ ಮೋದಿ ಅವರನ್ನು ಅನೌಪಚಾರಿಕವಾಗಿ ಭೇಟಿಯಾಗಿದ್ದೆ. ಆಗಿನಿಂದ ಅವರ ಪ್ರಭಾವಕ್ಕೆ ಒಳಗಾಗಿದ್ದಾಗಿ ಹೇಳಿದ್ದಾರೆ.

Gautam Gambhir said he was impressed by narendra modis vision

29 ವರ್ಷದ ರಿವಾಬಾ ಅವರು ಭಾರತ ಕ್ರಿಕೆಟ್ ತಂಡವು ಕಳೆದ ವರ್ಷ ನವೆಂಬರ್‌ನಲ್ಲಿ ಆಸ್ಟ್ರೇಲಿಯಾಕ್ಕೆ ತೆರಳುವ ಮುನ್ನ ದೆಹಲಿಯಲ್ಲಿ ಪತಿ ಜೊತೆ ಮೋದಿ ಅವರನ್ನು ಭೇಟಿ ಮಾಡಿದ್ದರು. ಭೇಟಿಯ ಬಳಿಕ ಮೋದಿ ಈ ಜೋಡಿಯೊಂದಿಗೆ ಇರುವ ಫೋಟೊವನ್ನು ಟ್ವೀಟ್ ಮಾಡಿದ್ದರು.

ಧೋನಿ, ಗಂಭೀರ್ -ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು! ಧೋನಿ, ಗಂಭೀರ್ -ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು!

'ಸರ್ ಸಾಕಷ್ಟು ಒಳ್ಳೆಯ ಸಂಗತಿಗಳನ್ನು ಹೇಳಿದ್ದರು. ಸರ್ಕಾರವು ಮಾಡುತ್ತಿರುವ ಅನೇಕ ಅಭಿವೃದ್ಧಿ ಯೋಜನೆಗಳ ಬಗ್ಗೆ ತಿಳಿಸಿದ್ದರು. ನಾವು ವೈಯಕ್ತಿಕವಾಗಿ ತೀವ್ರ ಪ್ರಭಾವಿತಗೊಂಡಿದ್ದೆವು. ರವಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಟಿದ್ದರು. ಹೀಗಾಗಿ ನಾವು ಕ್ರಿಕೆಟ್ ಕುರಿತೂ ಸ್ವಲ್ಪ ಮಾತನಾಡಿದ್ದೆವು' ಎಂದು ರಿವಾಬಾ ತಿಳಿಸಿದ್ದಾರೆ.

English summary
Former Indian opener Gautam Gambhir who joined BJP on Friday said that, he was impressed by Prime Minister Narendra Modi's vision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X