ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯು ಸೇನೆಗೆ ಸೇರಲು ಸನ್ನದ್ಧವಾಗುತ್ತಿರುವ ಮೃತ ಪೈಲಟ್ ಪತ್ನಿ

|
Google Oneindia Kannada News

ನವದೆಹಲಿ, ಜುಲೈ 16: ಬೆಂಗಳೂರಿನಲ್ಲಿ ಯುದ್ಧ ವಿಮಾನದ ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದ ಸ್ಕ್ವಾಡ್ರನ್ ಲೀಡರ್ ಪತ್ನಿ ವಾಯುಸೇನೆ ಸೇರುವ ಅವಕಾಶ ಪಡೆದಿದ್ದಾರೆ.

ಬೆಂಗಳೂರಿನ ಎಚ್‌ಎಎಲ್‌ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವು ಬೆಂಗಳೂರಿನ ಎಚ್‌ಎಎಲ್‌ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವು

ಕಳೆದ ಫೆಬ್ರವರಿಯಲ್ಲಿ ನಡೆದ ಮಿರಾಜ್ 2000 ಯುದ್ಧ ವಿಮಾನ ಅಪಘಾತದಲ್ಲಿ ಮೃತರಾಗಿದ್ದ ಸಮೀರ್ ಅಬ್ರೋಲ್ ಪತ್ನಿ ಗರೀಮಾ ಸಿಂಗ್ ಅಬ್ರೋಲ್ ಅವರು ವಾಯು ಸೇನೆ ಆಯ್ಕೆ ಮಂಡಳಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.

ವಿಮಾನ ಪತನದಲ್ಲಿ ಮೃತಪಟ್ಟ ಸಮೀರ್ ಸಹೋದರನ ಮನಮಿಡಿಯುವ ಕವನವಿಮಾನ ಪತನದಲ್ಲಿ ಮೃತಪಟ್ಟ ಸಮೀರ್ ಸಹೋದರನ ಮನಮಿಡಿಯುವ ಕವನ

ತೆಲಂಗಾಣದ ದಂಡಿಗಲ್‌ನಲ್ಲಿರುವ ವಾಯುಸೇನೆ ಅಕಾಡೆಮಿಗೆ ಶೀಘ್ರವೇ ಸೇರ್ಪಡೆಯಾಗುವ ಸಾಧ್ಯತೆ ಇದೆ. ಕಳೆದ ಫೆಬ್ರವರಿಯಲ್ಲಿ ಮಿರಾಜ್ 2000 ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟ ನಡೆಸುವ ಸಮಯದಲ್ಲಿ ಸಮೀರ್ ಜೀವ ಕಳೆದುಕೊಂಡಿದ್ದರು.

Garima Abrol may get opportunity to join IAF

ವಸತಿ ಪ್ರದೇಶದಿಂದ ಬೇರೆಡೆ ವಿಮಾನವನ್ನು ಡಿಕ್ಕಿ ಹೊಡೆಸುವ ಮೂಲಕ ನೂರಾರು ಜನರ ಪ್ರಾಣ ಉಳಿಸಿದ ಕೀರ್ತಿ ಸಮೀರ್‌ದ್ದಾಗಿತ್ತು. ಆದರೆ ಈ ದುರ್ಘಟನೆ ಕುರಿತು ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕೆನ್ನುವುದು ಪತ್ನಿ ಗರೀಮಾ ಸಿಂಗ್ ಹಾಗೂ ಕುಟುಂಬ ಸದಸ್ಯರ ಅಹವಾಲಾಗಿತ್ತು.

English summary
Garima Abrol wife of late Squadron Leader Samir Abrol may get opportunity to join IAF, Samir Abrol who was killed in Mirage 2000 fighter jet crash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X