ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರೀಬ್ ರಥ ರೈಲು ಸದ್ಯದಲ್ಲೇ ನೇಪಥ್ಯಕ್ಕೆ

|
Google Oneindia Kannada News

ನವದೆಹಲಿ, ಜುಲೈ 18: ಲಾಲೂ ಪ್ರಸಾದ್ ಯಾದವ್ ಅವರು ರೈಲ್ವೇ ಸಚಿವರಾದ ಸಂದರ್ಭದಲ್ಲಿ ಪರಿಚಯಿಸಿದ ಗರೀಬ್ ರಥ್ ರೈಲು ಸದ್ಯದಲ್ಲೇ ನೇಪಥ್ಯಕ್ಕೆ ಸರಿಯಲಿದೆ.

ಬಡವರಿಗೆ ಕಡಿಮೆ ಬೆಲೆಯಲ್ಲಿ ಎಸಿ ಕೋಚ್ ಪ್ರಯಾಣ ಸೌಲಭ್ಯ ಒದಗಿಸಿದ್ದ ಗರೀಬ್ ರಥ ಎಕ್ಸ್ ಪ್ರೆಸ್ ರೈಲಿಗೆ ಹೊಸ ಕೋಚುಗಳನ್ನು ನಿರ್ಮಿಸುವುದನ್ನು ನಿಲ್ಲಿಸುವಂತೆ ಕೇಮದ್ರ ಸರ್ಕಾರ ಆದೇಶಿಸಿದೆ. ಈ ಟ್ರೇನ್ ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆಯೇ ಅಥವಾ ಇದನ್ನೇ ಬೇರೆ ರೀತಿ ಬದಲಾಯಿಸಲಾಗುತ್ತದೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ.

ದೆಹಲಿ - ಆಗ್ರಾ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲೊಂದು ವಿಲಕ್ಷಣ ಘಟನೆ ದೆಹಲಿ - ಆಗ್ರಾ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲೊಂದು ವಿಲಕ್ಷಣ ಘಟನೆ

ಈಗಾಗಲೇ ಕತಗೊಂಡಮ್-ಜಮ್ಮು ಮತ್ತು ಕತಗೊಂಡಮ್-ಕಾನ್ಪುರ ಮಾರ್ಗವಾಗಿ ಚಲಿಸುತ್ತಿದ್ದ ಗರೀಬ್ ರಥ ರೈಲಿನ ಸಂಚಾರವನ್ನು ನಿಲ್ಲಿಸಲಾಗಿದೆ. ಈ ಮಾರ್ಗದಲ್ಲಿ ಎಕ್ಸ್ ಪ್ರೆಸ್ ಟ್ರೇನ್ ಸಂಚಾರ ಆರಂಭಿಸಲಾಗಿದ್ದು, ಇವುಗಳ ಬೆಲೆ ಅಧಿಕವಾಗಿದ್ದು, ಜನಸಾಮಾನ್ಯರಿಗೆ ರೈಲು ಪ್ರಯಾಣವೂ ದುಬಾರಿ ಎನ್ನಿಸಿದೆ.

Garib Rath train will soon become past

ಜನರಿಗೆ ಕಡಿಮೆ ಬೆಲೆಯಲ್ಲಿ ಒಂದೆಡೆಯಿಂದ ಇನ್ನೋಮದೆಡೆಗೆ ಸಂಚಾರ ಮಾಡಲು ಅನುಕೂಲವಾಗಲೆಂದು ಆರಂಭಿಸಿದ ರೈಲಿನ ಟಿಕೆಟ್ ದರವೇ ದುಬಾರಿಯಾದರೆ ಜನಸಮಾನ್ಯರ ಕತೆ ಏನು?

ರೈಲ್ವೆ ಇಲಾಖೆಯಲ್ಲಿ 50 ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಹುದ್ದೆರೈಲ್ವೆ ಇಲಾಖೆಯಲ್ಲಿ 50 ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಹುದ್ದೆ

ಗರೀಬ್ ರಥ ರೈಲುಗಳು 10-14 ವರ್ಷ ಹಳೆಯವಾಗಿದ್ದು, ಸುರಕ್ಷತೆಯ ದೃಷ್ಟಿಯನ್ನು ಯೋಚಿಸಿ ಕೇಮದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದ್ದು ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.

ಬೆಳಗಾವಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ ಸೇರ್ಪಡೆ ಬೆಳಗಾವಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ ಸೇರ್ಪಡೆ

2006 ರಲ್ಲಿ ಆಗಿನ ಕೇಂದ್ರ ರೈಲ್ವೇ ಸಚಿವರಾಗಿದ್ದ ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರು ಗರೀಬ್ ರಥ್ ರೈಲನ್ನು ಪರಿಚಯಿಸಿದ್ದರು. ಪ್ರಸ್ತುತ ಗರೀಬ್ ರಥದ 26 ಜೊತೆ ಟ್ರೇನುಗಳು ಕಾರ್ಯನಿರ್ವಹಿಸುತ್ತಿವೆ.

English summary
Poor man's AC train Garib Rath, which was introduced by then railway minister Lalu Prasad Yadav, will soon become a thing of the past.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X