ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಗತ ಪಾತಕಿ ಛೋಟಾ ರಾಜನ್‌ಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು

|
Google Oneindia Kannada News

ನವದೆಹಲಿ, ಜುಲೈ 29: ಜೈಲು ಶಿಕ್ಷೆ ಅನುಭವಿಸುತ್ತಿರುವ ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ(ಏಮ್ಸ್) ದಾಖಲಾಗಿದ್ದಾರೆ.

ತಿಹಾರ್ ಜೈಲಿನಲ್ಲಿರುವ 61 ವರ್ಷದ ರಾಜನ್ ಗೆ ಎರಡು ತಿಂಗಳ ಹಿಂದೆ ಕೊರೋನಾ ಪಾಸಿಟಿವ್ ಬಂದಿತ್ತು. ಏಪ್ರಿಲ್ 24 ರಂದು ಏಮ್ಸ್ ದಾಖಲಾಗಿದ್ದರು. ಚೇತರಿಸಿಕೊಂಡ ನಂತರ ಮತ್ತೆ ಜೈಲಿಗೆ ಕರೆತರಲಾಗಿತ್ತು. ಈಗ ಹೊಟ್ಟೆ ನೋವಿನಿಂದ ಮತ್ತೆ ಆಸ್ಪತ್ರೆದೆ ದಾಖಲಾಗಿದ್ದಾರೆ.

ಬಿಲ್ಡರ್ ಹತ್ಯೆ ಪ್ರಯತ್ನ: ಛೋಟಾ ರಾಜನ್‌ಗೆ ಹತ್ತು ವರ್ಷ ಜೈಲು ಶಿಕ್ಷೆಬಿಲ್ಡರ್ ಹತ್ಯೆ ಪ್ರಯತ್ನ: ಛೋಟಾ ರಾಜನ್‌ಗೆ ಹತ್ತು ವರ್ಷ ಜೈಲು ಶಿಕ್ಷೆ

ಛೋಟಾ ರಾಜನ್ ನನ್ನು 2015 ರಲ್ಲಿ ಇಂಡೋನೇಷ್ಯಾದ ಬಾಲಿಯಿಂದ ಗಡೀಪಾರು ಮಾಡಿದ ನಂತರ ಬಂಧನಕ್ಕೊಳಪಡಿಸಿ ದೆಹಲಿಯ ಹೈ ಸೆಕ್ಯುರಿಟಿ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. "ರಾಜನ್‌ಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಅವರನ್ನು ಮಂಗಳವಾರ ಏಮ್ಸ್ ಗೆ ದಾಖಲಿಸಲಾಗಿದೆ. ಇಂದು ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ. ಆದಾಗ್ಯೂ, ಭೂಗತ ಪಾತಕಿಯ ಡಿಸ್ಚಾರ್ಜ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

Gangster Chhota Rajan Admitted To AIIMS With Stomachache

ಭೂಗತ ಪಾತಕಿ ಛೋಟಾ ರಾಜನ್ ಇಂಡೋನೇಷಿಯಾದ ಬಾಲಿಯಲ್ಲಿ 2015ರಲ್ಲಿ ಬಂಧಿಸಲಾಗಿತ್ತು. ಅದಾದ ಬಳಿಕ ಭಾರತಕ್ಕೆ ವಾಪಸ್ ಕರೆತಂದು ತಿಹಾರ್ ಜೈಲಿನಲ್ಲಿ ಇಡಲಾಗಿತ್ತು. 2011ರಲ್ಲಿ ನಡೆದಿದ್ದ ಪತ್ರಕರ್ತ ಜೆ.ಡೇ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2018ರಲ್ಲಿ ಛೋಟಾ ರಾಜನ್​ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಇನ್ನು ಛೋಟಾ ರಾಜನ್ ಸಾಮಾನ್ಯ ಕ್ರಿಮಿನಲ್​ ಅಲ್ಲ. ಅವನ ಕೇಸ್​ಗಳನ್ನು ಉಳಿದವರ ಕೇಸ್​ಗಳಂತೆ ಪರಿಗಣಿಸಬಾರದು ಆತನಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸಿಬಿಐ (CBI) ಬಾಂಬೆ ಹೈಕೋರ್ಟ್​ಗೆ ಬುಧವಾರ ಅರ್ಜಿ ಸಲ್ಲಿಸಿದೆ. ಛೋಟಾ ರಾಜನ್​ ವಿರುದ್ಧ ವಿಚಾರಣೆ ಮಾಡಬೇಕಾದ ಹಲವು ಪ್ರಕರಣಗಳು ಬಾಕಿ ಇವೆ.

English summary
Jailed gangster Chhota Rajan was admitted to the All India Institute of Medical Sciences (AIIMS) here after he complained of a stomachache, officials said Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X