ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಟು ಅಮಾನ್ಯೀಕರಣದ ಬಳಿಕ ಎಂಎಸ್‌ಎಂಇಯಲ್ಲಿ ಉದ್ಯೋಗ ಹೆಚ್ಚಳ

|
Google Oneindia Kannada News

ನವದೆಹಲಿ, ನವೆಂಬರ್ 22: ನೋಟು ಅಮಾನ್ಯೀಕರಣದ ಬಳಿಕ ದೇಶದಲ್ಲಿ ಉದ್ಯೋಗ ಕಡಿತವಾಗಿದೆ, ಆರ್ಥಿಕತೆ ಕುಸಿದಿದೆ ಎನ್ನುವ ಆರೋಪ ಪ್ರತಿಪಕ್ಷಗಳಿಂದ ಕೇಳಿಬರುತ್ತಿದೆ.

ಆದರೆ ಕೇಂದ್ರ ಸರ್ಕಾರದ ಮಾಹಿತಿಗಳ ಪ್ರಕಾರ ನೋಟು ಅಮಾನ್ಯೀಕರಣದ ಬಳಿಕ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ವಲಯದಲ್ಲಿ ಪ್ರತಿವರ್ಷ ನಾಲ್ಕರಿಂದ ಐದು ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಹುದ್ದೆಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಹುದ್ದೆ

ಕಳೆದ ಮೂರು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಾಗಿರುವ ಮಾಹಿತಿಯನ್ನು ಲೋಕಸಭೆಗೆ ನಿತಿನ್ ಗಡ್ಕರಿ ನೀಡಿದ್ದಾರೆ. 2016-17 ರಲ್ಲಿ 4.08 ಲಕ್ಷ, 2017-18ರಲ್ಲಿ 3.87 ಲಕ್ಷ ಹಾಗೂ 2018-19ರಲ್ಲಿ 5.87 ಲಕ್ಷ ಉದ್ಯೋಗಗಳು ಸೃಷ್ಟಯಾಗಿವೆ.

Gadkari Gave Job Creation Data In MSME Sector

ನೋಟು ಅಮಾನ್ಯೀಕರಣದ ಬಖಿಕ ಎಂಎಸ್‌ಎಂಇ ವಲಯದಲ್ಲಿ ಉದ್ಯೋಗ ಕಡಿತವಾಗಿಲ್ಲ, ಬದಲಾಗಿ ವರ್ಷದಂದ ವರ್ಷಕ್ಕೆ ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಕೇಂದ್ರ ಎಂಎಸ್‌ಎಂಇ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.

ಇದೇ ಅವಧಿಯಲ್ಲಿ ಭಾರತದ ಒಟ್ಟಾರೆ ರಫ್ತಿನಲ್ಲಿ ಎಂಎಸ್‌ಎಂಇ ವಲಯದ ರಫ್ತು ಪ್ರಮಾಣವು ಕ್ರಮವಾಗಿ ಶೇ.49.69 ಶೇ.49.56, ಶೇ.48.10 ಆಗಿದೆ . ಹೀಗಾಗಿ ಭಾರತದ ಜಿಡಿಪಿಯಲ್ಲಿ ಎಂಎಸ್‌ಎಂಇ ಶೇರು ಕೂಡ ಕಡಿಮೆಯಾಗಿಲ್ಲ. ಎಂಎಸ್‌ಎಂಇ ವಲಯವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಲೋಕಸಭೆಗೆ ಗಡ್ಕರಿ ಉತ್ತರ ನೀಡಿದ್ದಾರೆ.

English summary
Union Minister Nitin Gadkari gave Job Creation Data In MSME Sector After Demonetisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X