ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಾಂ ಆಡಿದ ಕೊನೆ ಘಳಿಗೆಯ ಮಾತುಗಳೇನು?

By Vanitha
|
Google Oneindia Kannada News

ನವದೆಹಲಿ, ಜುಲೈ, 29: ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ತಮ್ಮ ಆಪ್ತರೊಂದಿಗೆ ಕಳೆದ ಕೊನೆ ಘಳಿಗೆ ಅಮೃತ ಘಳಿಗೆಯಾಗಿರುತ್ತದೆ. ನೆನಪಿನ ಹಂದರದಲ್ಲಿ ಮರುಕಳಿಸುವ ಸವಿ ಕ್ಷಣವಾಗಿರುತ್ತದೆ. ಇಲ್ಲವಾದಲ್ಲಿ ವಿಷಾದ, ನೋವು, ಬೇಸರದ ಸಾಗರವಾಗಿರುತ್ತದೆ. ಕಲಾಂ ಅವರೊಂದಿಗೆ ಕೊನೆ ಕ್ಷಣ ಕಳೆದ ಸಲಹೆಗಾರ ಸೃಜನ್ ಸಿಂಗ್ ಅವರ ಭಾವಯಾನ ಯಾವ ತರಹದ್ದು?

ಕಲಾಂ ಅವರ ಕೊನೆಘಳಿಗೆಯಲ್ಲಿ ಅವರೊಂದಿಗೆ ಇದ್ದವರು ಸೃಜನ್ ಪಾಲ್ ಸಿಂಗ್...ಇವರು ಕಲಾಂ ಅಗಲಿಕೆಯನ್ನು ಯಾವ ರೀತಿ ಸ್ವೀಕರಿಸಿದ್ದಾರೆ...ಅವರೊಂದಿಗೆ ಕಲಾಂ ಆಡಿದ ಅವರು ಆಡಿದ ಕೊನೆ ಮಾತುಗಳೇನು? ಇಲ್ಲಿದೆ ಓದಿ....ಸೃಜನ್ ಸಿಂಗ್ ಅವರೊಂದಿಗಿನ ಕಲಾಂ ಅವರ ಕೊನೆ ಘಳಿಗೆಯ ಮಾತುಗಳು...[ಪ್ರೀತಿಯ ಕಲಾಂ ತಾತಾನಿಗೆ ನಮನ ಸಲ್ಲಿಸಿದ ಮೊಮ್ಮಕ್ಕಳು]

'Funny guy! Are you doing well?' - Kalam's final words to advisor

ಗುವಾಹಟಿಯಿಂದ ಶಿಲ್ಆಂಗ್ ತಲುಪುವ ದಾರಿಯ ಮಧ್ಯೆ ಪಮಜಾಬಿನ ದಾಳಿ, ಐಐಎಂನಲ್ಲಿ ಮಾತನಾಡುವ 'ಜೀವನಕ್ಕೆ ಪೂರಕವಾದ ಭೂಗ್ರಹದ ನಿರ್ಮಾಣ'ದ ಬಗ್ಗೆ, ಹೀಗೆ ನಾನಾ ವಿಷಯಗಳನ್ನು ಮಾತನಾಡಿದೆವು.

ಶಿಲ್ಲಾಂಗ್ ತಲುಪಿದ ವೇಳೆ ಅಲ್ಲಿನ ಕಾರ್ಯಕ್ರಮ ರೂವಾರಿಗಳನ್ನು ಭೇಟಿ ಮಾಡಿ ವೇದಿಕೆ ಮುಂಭಾಗಕ್ಕೆ ತೆರಳಿದರು. ನಾನು ಆಗ ತಾನೇ ಮೈಕಿನ ಪಿನ್ ಸರಿ ಮಾಡಿ ಹಿಂತಿರುಗುತ್ತಿದೆ. ಆಗ ಕಲಾಂ ಅವರು ಯಾವಾಗಲೂ ವಿದ್ಯಾರ್ಥಿಗಳನ್ನು ಹೆಚ್ಚು ಹೊತ್ತು ಕಾಯಿಸಬಾರದು ಎನ್ನುತ್ತಾ ಅವಸರದಿಂದಲೇ ಶಿಲ್ಲಾಂಗ್ ನ ಐಐಎಂ ಸಭಾಂಗಣ ಏರಿದರು. ಆಗ ನನ್ನತ್ತ ನಗೆ ಬೀರಿದ ಕಲಾಂ "ಫನ್ನಿ ಮ್ಯಾನ್, ಆರ್ ಯು ಡೂಯಿಂಗ್ ವೆಲ್ ?" ಎಂದು ಕೇಳಿದ್ದರು.

ಬಳಿಕ ನಾನು ನಗುತ್ತಲೇ ಅವರ ಹಿಂದೆ ಇದ್ದ ಕುರ್ಚಿಯಲ್ಲಿ ಆಸೀನನಾದೆ. ಬಳಿಕ ಅವರು ಎರಡು ನಿಮಿಷ ಮಾತನಾಡಿರಬಹುದು. ಸುಮಾರು ಒಂದು ನಿಮಿಷ ಕಾಲ ಮಾತು ಸ್ತಬ್ಧವಾಯಿತು. ಏಕೆಂದು ನೋಡುತ್ತಿರುವಾಗಲೇ ಅವರು ನಿಂತಲ್ಲೇ ಕುಸಿದು ಬಿದ್ದರು ಎಂದು ಕಲಾಂ ಅವರ ಬದುಕಿನ ಕೊನೆ ಕ್ಷಣದ ಮುಕ್ತಾಯವನ್ನು ಹೇಳುತ್ತಲೇ ಬಹಳಷ್ಟು ದುಃಖತಪ್ತರಾದರು.

ಕುಸಿದ ಬಿದ್ದ ನಂತರ ವೇದಿಕೆಯಲ್ಲಿನ ಸೇನಾ ಸಿಬ್ಬಂದಿ, ವೈದ್ಯರು ಸೇರಿದಂತೆ ಎಲ್ಲರೂ ಒಟ್ಟುಗೂಡಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅವರು ಮುಕ್ಕಾಲು ಮುಚ್ಚಿದ ಕಣ್ಣುಗಳು ನನ್ನ ಅಕ್ಷಿಪಟಲದಲ್ಲಿ ಹಾಗೇ ಅಚ್ಚೊತ್ತಿದೆ. ಅವರ ಕೊನೆ ಮಾತುಗಳು, ಅವರೊಂದಿಗಿನ ಕೊನೆ ಕ್ಷಣಗಳು ಈಗ ಎಲ್ಲವೂ ನೆನಪು ಮಾತ್ರ.

English summary
Funny guy! Are you doing well?" were the last words of A.P.J. Abdul Kalam to his adviser Srijan Pal Singh, who was with him on the stage at IIM-Shillong when the former president collapsed and was rushed to hospital on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X