ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ವಾರಗಳಲ್ಲಿ ಪ್ಯಾಂಗಾಂಗ್ ಸರೋವರದಿಂದ ಸೇನೆ ನಿಷ್ಕ್ರಿಯ ನಿರೀಕ್ಷೆ

|
Google Oneindia Kannada News

ನವದೆಹಲಿ,ಫೆಬ್ರವರಿ 12: ಪ್ಯಾಂಗಾಂಗ್ ತ್ಸೋ ಸರೋವರದಿಂದ ಇನ್ನೆರೆಡು ವಾರಗಳಲ್ಲಿ ಸೇನೆ ನಿಷ್ಕ್ರಿಯಗೊಳ್ಳುವ ನಿರೀಕ್ಷೆ ಇದೆ.

ಚೀನಾದ ಸೇನೆ ಪಾಂಗೊಂಗ್ ಸರೋವರದ ಫಿಂಗರ್ 8 ಭಾಗಕ್ಕೆ ಸೇನೆಯನ್ನು ಹಿಂಪಡೆದರೆ, ಭಾರತೀಯ ಸೇನೆ ಧನ್ ಸಿಂಗ್ ತಾಪಾ ಪೋಸ್ಟ್, ಉತ್ತರ ತೀರ ಪ್ರದೇಶದ ಫಿಂಗರ್ 3 ಭಾಗಕ್ಕೆ ಸೇನೆಯನ್ನು ವಾಪಸ್ ಪಡೆಯಲಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಪ್ಯಾಂಗಾಂಗ್ ತ್ಸೊದಿಂದ ಭಾರತ-ಚೀನಾ ಸೇನಾ ವಾಪಸ್: ಒಪ್ಪಂದದ 5 ಪ್ರಮುಖ ಅಂಶಗಳುಪ್ಯಾಂಗಾಂಗ್ ತ್ಸೊದಿಂದ ಭಾರತ-ಚೀನಾ ಸೇನಾ ವಾಪಸ್: ಒಪ್ಪಂದದ 5 ಪ್ರಮುಖ ಅಂಶಗಳು

ಪೂರ್ವ ಲಡಾಕ್ ನ ಗಡಿಯ ನಿಲುಗಡೆ ಸ್ಥಾನದಿಂದ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಭಾರತ ಮತ್ತು ಚೀನಾ ಆರಂಭಿಸಿದ ಒಂದು ದಿನ ನಂತರ, ಹಂತಹಂತವಾಗಿ ಸಮನ್ವಯದಿಂದ ಪರಿಶೀಲನೆ ನಡೆಸಿ ಸೇನೆಯನ್ನು ಹಿಂಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.

Full Pangong Pullback Expected In Two Weeks

ಭಾರತ ಮತ್ತು ಚೀನಾ ಎರಡೂ ದೇಶಗಳು ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳನ್ನು ಮುಂದಿನ ಸುತ್ತಿನಲ್ಲಿ ನಡೆಸಿ ಒಪ್ಪಂದಕ್ಕೆ ಬಂದ ನಂತರ ಸೇನಾಪಡೆಗಳ ಗಸ್ತು ತಿರುಗುವಿಕೆ ಆರಂಭವಾಗುತ್ತದೆ.

ಸೂಕ್ಷ್ಮತೆಗಳನ್ನು ಗಮನಿಸಿದರೆ, ಎರಡೂ ಕಡೆಯ ಸ್ಥಳೀಯ ಕಮಾಂಡರ್‌ಗಳು ದಿನಕ್ಕೆ ಎರಡು ಬಾರಿ ಭೇಟಿಯಾಗುತ್ತಿದ್ದಾರೆ. ಗಾಲ್ವಾನ್ ಕಣಿವೆಯಿಂದ ಹಿಂದೆ ಸರಿದಿದ್ದರೂ, ಈ ಹಿಂದೆ ಇದೇ ರೀತಿ ಸೇನೆ ಹಿಂಪಡೆದು ಮತ್ತೆ ಚೀನಾ ಸಕ್ರಿಯವಾಗಿದ್ದರಿಂದ ಈ ಬಾರಿ ಭಾರತ ಎಚ್ಚರಿಕೆ ವಹಿಸಿದೆ.

ಸಾಂಪ್ರದಾಯಿಕ ಪ್ರದೇಶಗಳಿಗೆ ಗಸ್ತು ತಿರುಗುವುದು ಸೇರಿದಂತೆ ಉತ್ತರ ದಂಡೆಯಲ್ಲಿ ಎರಡೂ ಕಡೆಯಿಂದ ಮಿಲಿಟರಿ ಚಟುವಟಿಕೆಗಳ ಬಗ್ಗೆ ತಾತ್ಕಾಲಿಕ ನಿಷೇಧವನ್ನು ಹೊಂದಲು ಒಪ್ಪಲಾಗಿದೆ ಎಂದು ರಾಜ್ಯಸಭೆಯಲ್ಲಿ ರಕ್ಷಣಾ ಸಚಿವರು ಹೇಳಿದ್ದಾರೆ.

ಪಾಂಗೊಂಗ್ ಲೇಕ್ ನ ದಕ್ಷಿಣ ತೀರದಲ್ಲಿ ಕೂಡ ಇದೇ ರೀತಿಯ ಸೇನೆ ಹಿಂಪಡೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಎರಡೂ ಕಡೆಗಳಲ್ಲಿ ಸಂಪೂರ್ಣವಾಗಿ ಸೇನೆ ಹಿಂಪಡೆಯುವ ಪ್ರಕ್ರಿಯೆ ಇನ್ನು 10ರಿಂದ 15 ದಿನಗಳಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
A day after the Sino-Indian disengagement began from standoff positions in Eastern Ladakh, Defence Minister Rajnath Singh on Thursday confirmed the pull back in a “phased, coordinated and verified manner” in Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X