ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್, ಡೀಸೆಲ್ ಬೆಲೆ

By Nayana
|
Google Oneindia Kannada News

Recommended Video

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 77.48 ,ರೂ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 68.73 ರೂ. ಮುಟ್ಟಿದೆ

ನವದೆಹಲಿ, ಮೇ 21: ಜಾಗತಿಕ ಇಂಧನ ದರ ಏರಿಕೆಯ ಪರಿಣಾಮ ಭಾರತದ ಮೇಲೂ ಬೀರಿದೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 77.48 ,ರೂ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 68.73 ರೂ. ಮುಟ್ಟಿದೆ. ಎಲ್‌ಪಿಜಿ ಪ್ರತಿ ಕೆಜಿಗೆ 41.69 ರೂ.ಆಗಿದೆ. ಕರ್ನಾಟಕದ ಚುನಾವಣೆ ಅಂತ್ಯವಾದ ಬಳಿಕ ಸತತ 7 ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿವೆ. ಸತತ 4 ವಾರಗಳಿಂದ ಇಂಧನ ದರ ಏರಿಕೆಯಾಗುತ್ತಿದೆ. ಇದರಿಂದಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಹ ಗ್ರಾಹಕರಿಗೆ ಬೆಲೆ ಏರಿಕೆಯನ್ನು ವರ್ಗಾವಣೆ ಮಾಡಿವೆ.

ಚುನಾವಣೆ ಮುಗಿದ ಬೆನ್ನಲ್ಲೇ ಮತ್ತೆ ಮೇಲೇರಿತು ಇಂಧನ ಬೆಲೆ ಚುನಾವಣೆ ಮುಗಿದ ಬೆನ್ನಲ್ಲೇ ಮತ್ತೆ ಮೇಲೇರಿತು ಇಂಧನ ಬೆಲೆ

ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 33 ಪೈಸೆ ಏರಿಕೆಯಾಗಿದೆ. ಡೀಸೆಲ್ ಬೆಲೆ 26 ಪೈಸೆ ಏರಿಕೆಯಾಗಿದೆ. ಹೀಗಾಗಿ ಒಂದು ಲೀಟರ್ ಪೆಟ್ರೋಲ್ ಬೆಲೆ 76.24ರೂ. ಡೀಸೆಲ್ 67.57 ಪೈಸೆಗೆ ಹೆಚ್ಚಾಗಿದ್ದು ದಾಖಲೆ ಮಟ್ಟ ತಲುಪಿದೆ.

fuel price reaches new high

ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ 19 ದಿನಗಳ ಕಾಲ ದೇಶದಲ್ಲಿ ಇಂಧನ ಬೆಲೆ ಹೆಚ್ಚಾಗಿರಲಿಲ್ಲ. ಬೆಲೆ ಏರಿಕೆಯಿಂದ ಈ ಅವಧಿಯಲ್ಲಾಗಿದ್ದ 500 ಕೋಟಿ ರೂ. ನಷ್ಟವನ್ನು ತೈಲ ಕಂಪನಿಗಳೇ ಭರಿಸಿವೆ. ಅದನ್ನು ಗ್ರಾಹಕರಿಗೆ ವರ್ಗಾಯಿಸಿದರೆ, ಪೆಟ್ರೋಲ್ ದರ 4 ರೂ. ಏರಿಕೆಯಾಗುವ ಅವಕಾಶಗಳಿವೆ. ಕರ್ನಾಟಕ ಚುನಾವಣೆ ಮುಗಿದ ಬಳಿಕ ಮೇ 14ರಿಂದ ಬೆಲೆ ಏರಿಕೆ ಪ್ರತಿದಿನ ಏರಿಕೆಯಾಗುತ್ತಿದೆ. ಭಾನುವಾರ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಬೆಲೆಯನ್ನು ಹೆಚ್ಚಳ ಮಾಡಿವೆ.

English summary
Consecutive seventh of price hike in Delhi and across the country, fuel has reached new high.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X